ಎ.7: ಶಿವರಾಜ್‌ಕುಮಾರ್‌ - ಉಪೇಂದ್ರ ಬೈಂದೂರಿಗೆ.

ಕುಂದಾಪುರ: ಬೈಂದೂರು ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್‌ ಪರ ಚುನಾವಣಾ ಪ್ರಚಾರ ನಡೆಸಲು ನಟ ಶಿವರಾಜ್‌ ಕುಮಾರ್‌ ಹಾಗೂ ನಟ ಉಪೇಂದ್ರ ಎ.7ರಂದು ಬೆ„ಂದೂರು ವಿಧಾನಸಭಾ ಕ್ಷೇತ್ರದಲ್ಲಿ ಸಂಚರಿಸಿ ಮತದಾರರಲ್ಲಿ ಮತಯಾಚನೆ ನಡೆಸಲಿದ್ದರೆ ಎಂದು ಚುನಾವಣಾ ಉಸ್ತುವಾರಿ ಡಿ.ಆರ್‌ ರಾಜು ಹೇಳಿದ್ದಾರೆ.
     ಎಪ್ರಿಲ್‌ 7ರಂದು ಸಂಜೆ ಮೂರು ಗಂಟೆಗೆ ತೀರ್ಥಹಳ್ಳಿ ಮೂಲಕವಾಗಿ ಸಿದ್ಧಾಪುರಕ್ಕೆ ಆಗಮಿಸಿ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮತಯಾಚಿಸಲಿದ್ದಾರೆ. ನಂತರ 5 ಗಂಟೆಗೆ ಬೆ„ಂದೂರು, ಶಿರೂರುನಲ್ಲಿ ರೋಡ್‌ ಶೋ ನಡೆಸಲಿದ್ದಾರೆ. ನಂತರ ಮರವಂತೆ, ತ್ರಾಸಿ, ಗಂಗೊಳ್ಳಿ, ಹೆಮ್ಮಾಡಿ, ವಂಡ್ಸೆ ಮೊದಲಾದೆಡೆಗಳಲ್ಲಿ ಮತಯಾಚನೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಮಧುಬಂಗಾರಪ್ಪ ಹಾಗೂ ಅಭ್ಯಥಿ ಗೀತಾ ಶಿವರಾಜ್‌ಕುಮಾರ್‌ ಅವರೂ ಜೊತೆಯಲ್ಲಿರುತ್ತಾರೆ ಎಂದವರು ಹೇಳಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com