ಗೀತಾ ಶಿವರಾಜ್‌ ಕುಮಾರ್‌ ಗೆಲುವು ನಿಶ್ಚಿತ:ವಿ.ಕೆ. ಮೋಹನ್‌

ಬೈಂದೂರು: ಜೀವಮಾನದಲ್ಲಿ ರಾಜಕೀಯ ಪಾದಾರ್ಪಣೆ ಮಾಡಬಾರದೆನ್ನುವ ನಿರ್ಧಾರದಲ್ಲಿದ್ದ ನಾನು ರಾಜಕೀಯವಾಗಿ ಪ್ರಚಾರಕ್ಕೆ ಬಂದಿದ್ದೇನೆ. ಗೀತಾ ಶಿವರಾಜ್‌ ಕುಮಾರ್‌ ಗೆಲುವು ನನ್ನ ಮುಖ್ಯ ಗುರಿ ಹೀಗಾಗಿ ಜೆ.ಡಿ.ಎಸ್‌ ಗೆಲುವು ನಿಶ್ಚಿತ ಎಂದು ಉದ್ಯಮಿ,ಬಿಲ್ಲವ ಮುಂದಾಳು ವಿ.ಕೆ. ಮೋಹನ್‌ ಹೇಳಿದರು. ಅವರು ಉಪ್ಪುಂದದಲ್ಲಿ ಜೆ.ಡಿ.ಎಸ್‌ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಗೀತಾಶಿವರಾಜ್‌ ಕುಮಾರ ರಾಜಕೀಯ ಆಕಾಂಕ್ಷೆಯಲ್ಲ .ಬದಲಾಗಿ ತಂದೆಗೆ ನೀಡಿದ ಮಾತನ್ನು ಪಾಲಿಸಲಿಕ್ಕಾಗಿ ರಾಜಕೀಯ ಪ್ರವೇಶಿಸುವಂತಾಗಿದೆ ಎಂದರು.

ಜಿಲ್ಲಾಧ್ಯಕ್ಷ ದೇವಿ ಪ್ರಸಾದ ಶೆಟ್ಟಿ ಮಾತನಾಡಿ ಜಿಲ್ಲೆಯಲ್ಲಿ ಮೋದಿ ಹವಾ ನಡೆಯದು. ಜನ ಜೆ.ಡಿ ಎಸ್‌.ಪರ ಒಲವು ಹೊಂದಿದ್ದಾರೆ. ದಾಖಲೆಯ ಬಹುಮತದಲ್ಲಿ ಜೆ.ಡಿ.ಎಸ್‌ ಗೆಲುವು ಸಾಧಿಸಲಿದೆ ಎಂದರು.

ವೇದಿಕೆಯಲ್ಲಿ ಕಾರ್ಯಾಧ್ಯಕ್ಷ ಗುಲಾಂ ಮಹಮದ್‌, ಜನತಾ ಪರಿವಾರದ ನಾಯಕ ರಾಜೀವ್‌ ಕೋಟ್ಯಾನ್‌, ಉಸ್ತುವಾರಿ ಡಿ.ಆರ್‌.ರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಅಡಿಗ, ಬ್ಲಾಕ್‌ ಅಧ್ಯಕ್ಷ ರಂಜಿತ್‌ ಕುಮಾರ್‌ ಶೆಟ್ಟಿ, ಮಹಿಳಾ ಅಧ್ಯಕ್ಷೆ ಶಾಲಿನಿ ಶೆಟ್ಟಿ, ವೇದಾ ಹೆಗ್ಡೆ, ಸುರಯ್ನಾ ಬಾನು, ಅಣ್ಣಪ್ಪ ಪೂಜಾರಿ ಮುಂತಾದವರು ಹಾಜರಿದ್ದರು.

ಸಂದೇಶ ಭಟ್‌ ಕಾರ್ಯಕ್ರಮ ನಿರೂಪಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com