ಮನೋನಿಗ್ರಹದಿಂದ ಮನೋಲ್ಲಾಸ ಮಂಗೇಶ ಶೆಣೈ

ಉಪ್ಪುಂದ: ಪ್ರತಿಯೊಬ್ಬ ಮನುಷ್ಯನಲ್ಲೂ ಒಂದು ಅಂತಃಶಕ್ತಿ ಇದ್ದೇ ಇರುತ್ತದೆ. ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂಬುದನ್ನು ವಿಮರ್ಶಿಸಲು ಸಾಧ್ಯವಾಗುತ್ತದೆ. ನಮ್ಮ ಮನಸ್ಸು ನಮ್ಮ ಹಿಡಿತದಲ್ಲಿ ಇರಿಸಿಕೊಳ್ಳುವ ಪ್ರಯತ್ನ ಮೊದಲಾಗಬೇಕು. ಯಾವುದೇ ಒಂದು ವಿಷಯದಲ್ಲಿ ತಲ್ಲೀನವಾದ ಮನಸ್ಸನ್ನು ನಾವು ಎಣಿಸಿದಾಗ ನಮಗೆ ಬೇಕಾದಾಗ ಬೇರೊಂದು ವಿಷಯದೆಡೆಗೆ ಹರಿಸಿ ಕೇಂದ್ರಿಕರಿಸಲು ಸಾಧ್ಯವಾದರೆ ಆಗ ನಮ್ಮ ಹಿಡಿತದಲ್ಲಿದೆ ಎಂದು ಅರ್ಥ, ಇಲ್ಲದಿದ್ದರೆ ಮಾನಸಿಕ ಒತ್ತಡ ಉಂಟಾಗಿ ಯಾವುದಾದರೂ ಕ್ಷಣದಲ್ಲಿ ಖನ್ನತೆಗೆ ಒಳಗಾಗಿ ಜೀವನದ ಕೊನೆಯವರೆಗೆ ತೊಂದರೆಯಲ್ಲಿ ಸಿಲುಕಿಕೊಳ್ಳುತ್ತೇವೆ. ಹಿಡಿತಕ್ಕೊಳಗಾದ ಮನಸ್ಸಿನಲ್ಲಿ ತಾಳ್ಮೆ, ಸಹನೆ, ಪ್ರೀತಿ, ದಯೆ, ಸೇವಾ ಮನೋಭಾವ, ಶಾಂತಿ, ಸಮಾಧಾನ, ನೆಮ್ಮದಿ ಸದಾ ಇದ್ದು ಆರೋಗ್ಯಕರ ಜೀವನ ನಮ್ಮದಾಗುತ್ತದೆ ಎಂದು ಯಳಜಿತ ಸಿದ್ಧಿವಿನಾಯಕ ಸಾಂಸ್ಕೃತಿಕ ಕೇಂದ್ರದ ಸಂಚಾಲಕ ಹಾಗೂ ಅಧ್ಯಾತ್ಮಿಕ ಸಾಧಕ ಮಂಗೇಶ ಶೆಣೆ„ ಅವರು ಹೇಳಿದರು. 

ಉಪ್ಪುಂದ ಶ್ರೀಗುರು ವಿವೇಕ ಯೋಗ ಸಂಘ ಹಾಗೂ ಜಿ.ಎಸ್‌.ಬಿ ಯುವಕ ಸಂಘದ ಆಶ್ರಯದಲ್ಲಿ ಸಾರ್ವಜನಿಕರಿಗಾಗಿ ಶ್ರೀ ಲಕ್ಷ್ಮಿà ವೆಂಕಟ್ರಮಣ ದೇವಸ್ಥಾನ ವಠಾರದಲ್ಲಿ ಜರಗಿದ ಉಚಿತ ಯೋಗ ಧ್ಯಾನ ಶಿಬಿರದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಸ್ವಾರ್ಥ, ದ್ವೇಷ, ಅಸೂಯೆ, ಚಿಂತೆ, ಭಯ ಇತ್ಯಾದಿ ಸಂಕುಚಿತ ಮನೋಭಾವದಲ್ಲಿ ತನ್ನಿಂದ ತಾನೇ ಅಶಾಂತಿ, ಸೋಲು ಅತƒಪ್ತಿ ಉಂಟಾಗಿ ಮಾನಸಿಕ ಹಾಗೂ ದೆ„ಹಿಕ ಕಾಯಿಲೆಗಳಿಗೆ ನಾವು ತುತ್ತಾಗುತ್ತೇವೆ. ಆ ಕಾರಣಕ್ಕಾಗಿ ನಾವು ಸದಾ ಉತ್ಸಾಹಭರಿತರಾಗಿ ಎಲ್ಲರಲ್ಲಿಯೂ ದೆ„ವತ್ವವನ್ನು ಕಾಣುವ ಪ್ರಯತ್ನ ಮಾಡಿ ಪ್ರತಿದಿನ ಪ್ರಾತಃಕಾಲದಲ್ಲಿ ವ್ಯಾಯಾಮ, ಆಸನ, ಪ್ರಾಣಯಾಮ, ಧ್ಯಾನ ನಿತ್ಯ ನಿರಂತರ ತನ್ನದಾಗಿಸಿಕೊಳ್ಳುವುದರಿಂದ ಸ್ವತ್ಛ ಭಾವನೆ ಮೂಡಿ ಮನಸ್ಸು ಉಲ್ಲಾಸಭರಿತವಾಗಿ ಸಂಕಲ್ಪಿಸಿದ ಎಲ್ಲಾ ಕೆಲಸಗಳು ಯಾವ ಆತಂಕವಿಲ್ಲದೇ ಅತೀ ಶೀಘ್ರವಾಗಿ ನೆರವೇರುತ್ತದೆ ಎಂದರು. ಶ್ರೀಗುರುವಿವೇಕ ಯೋಗ ಸಂಘದ ಅಧ್ಯಕ್ಷ ಮಂಜುನಾಥ ಎಸ್‌. ಬಿಜೂರು ಹಾಗೂ ಶಿಬಿರಾರ್ಥಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ನಾಗೇಶ ಭಟ್‌ ಸ್ವಾಗತಿಸಿದರು. ಹರೀಶ. ಎಸ್‌ ಕಿಣಿ ವಂದಿಸಿದರು. ಅರಿವು ಮೂಡಿಸುವ ವಿವಿಧ ಪುಸ್ತಕಗಳನ್ನು ಶಿಬಿರಾರ್ಥಿಗಳಿಗೆ ಉಚಿತವಾಗಿ ವಿತರಿಸಲಾಯಿತು.

ಊದಯವಾಣಿ ಕೃಪೆ
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com