ದಿಗ್ವಿಜಯ್ ಸಿಂಗ್-ಅಮೃತಾ ಲವ್'ಸ್ಟೋರಿ

ನವದೆಹಲಿ: ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ತಮಗೆ ಪತ್ರಕರ್ತೆ ಅಮೃತಾ ರೈ ಜೊತೆ ಅಫೇರ್ ಇರುವುದನ್ನ ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಇವರಿಬ್ಬರ ಸಂಬಂಧದ ಬಗ್ಗೆ ಇನ್ನಷ್ಟು ವಿಚಾರಗಳು ಹೊರಬರುತ್ತಿವೆ. ಇವರಿಬ್ಬರ ಮೊದಲ ಭೇಟಿ ಎಲ್ಲಿ ಆಯಿತು, ಹೇಗೆ ಆಯಿತು ಎಂಬ ಕುತೂಹಲಗಳನ್ನ ತಣಿಸುವ ಮಾಹಿತಿಯೊಂದು ಬಂದಿದೆ.

ದಿಗ್ವಿಜಯ್ ಸಿಂಗ್ ಜೊತೆಗಿನ ಅಫೇರ್ ಬಗ್ಗೆ ಅಮೃತಾ ಗಂಡ ಹೇಳುವುದೇನು?
ನವದೆಹಲಿ(ಏ.30): ಮಧ್ಯಪ್ರದೇಶ ಮಾಜಿ ಸಿಎಂ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಮತ್ತು ಪತ್ರಕರ್ತೆ ಅಮೃತಾ ರಾಯ್ ಪ್ರೇಮ ವ್ಯವಹಾರದ ಬಗ್ಗೆ ಅಮೃತಾ ಪತಿ ಆನಂದ್ ಪ್ರಧಾನ್ ಫೇಸ್'ಬುಕ್'ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ತನ್ನ ಪತ್ನಿಗೆ ಆಲ್ ದ ಬೆಸ್ಟ್ ಹೇಳಿದ್ದಾರೆ. ಅಲ್ಲದೇ, ತನಗೆ ಮಾನಸಿಕ ಸ್ಥೈರ್ಯ ತುಂಬಲು ಸ್ನೇಹಿತರಿಗೆ ಮನವಿ ಮಾಡಿಕೊಂಡಿದ್ದಾರೆ.

ಇಂಡಿಯನ್ ಇನ್ಸ್'ಟಿಟ್ಯೂಟ್ ಆಫ್ ಮಾಸ್ ಕಮ್ಯೂನಿಕೇಶನ್'ನಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿರುವ ಆನಂದ್ ಪ್ರಧಾನ್ ಬಹಳ ಭಾವುಕರಾಗಿದ್ದಾರೆ.

ಪರಸ್ಪರ ಸಮ್ಮತಿ ಮೇರೆಗೆ...
"ನಾನೀಗ ತುಂಬಾ ಸಂಕಷ್ಟದ ಗಳಿಗೆಯನ್ನ ಎದುರಿಸುತ್ತಿದ್ದೇನೆ. ಬಹಳ ಕಾಲದಿಂದ ನಾನು ಮತ್ತು ಅಮೃತಾ ಪ್ರತ್ಯೇಕ ಜೀವನ ನಡೆಸುತ್ತಿದ್ದೆವು. ಪರಸ್ಪರ ಸಮ್ಮತಿ ಮೇರೆ ಇಬ್ಬರೂ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದೇವೆ. ಕಾನೂನಿನ ಪ್ರಕಾರವಾಗಿ ಸಾಗಬೇಕಿರುವುದರಿಂದ ಅದರದ್ದೇ ಆದ ಸಮಯ ಹಿಡಿಯುತ್ತದೆ. ಆದರೆ, ನಾವು ಮುಂಚೆ ಹೊಂದಿದ್ದ ಸಂಬಂಧ ಬಹಳ ಹಿಂದೆಯೇ ಮುಗಿದುಹೋಗಿತ್ತು" ಎಂದು ಆನಂದ್ ಪ್ರಧಾನ್ ತಮ್ಮ ಫೇಸ್'ಬುಕ್ ಪ್ರೊಫೈಲ್'ನಲ್ಲಿ ಅಪ್'ಡೇಟ್ ಮಾಡಿದ್ದಾರೆ.

ಅಮೃತಾ ಪೂರ್ಣ ಸ್ವತಂತ್ರ...
"ತನ್ನ ಭವಿಷ್ಯದ ಬಗ್ಗೆ ನಿರ್ಧರಿಸಲು ಅಮೃತಾ ಸಂಪೂರ್ಣ ಸ್ವತಂತ್ರಳಿದ್ದಾಳೆ. ಆಕೆಯ ನಿರ್ಧಾರವನ್ನ ಗೌರವಿಸುತ್ತೇನೆ. ಆಕೆಯ ಭವಿಷ್ಯ ಜೀವನಕ್ಕೆ ನಾನು ಶುಭ ಹಾರೈಸುತ್ತೇನೆ"

ನಿಜವಾದ ಸ್ನೇಹಿತರು ಸಿಗುವ ವೇಳೆ...
"ನನ್ನ ಅನೇಕ ಸ್ನೇಹಿತರು, ಹಿತೈಷಿಗಳು, ವಿದ್ಯಾರ್ಥಿಗಳು, ಸಹೋದ್ಯೋಗಿಗಳು ನನ್ನ ಬಗ್ಗೆ ಅನುಕಂಪ ವ್ಯಕ್ತಪಡಿಸುತ್ತಿರುವುದು ನನಗೆ ಗೊತ್ತಿದೆ. ಅವರೆಲ್ಲರೂ ನನ್ನೊಂದಿಗಿದ್ದಾರೆ. ಈ ಕಷ್ಟದ ಗಳಿಗೆಗಳಿಂದ ಹೊರಬರುತ್ತೇನೆ ಎಂಬ ವಿಶ್ವಾಸವಿದೆ. ನೀವೆಲ್ಲಾ ನನ್ನ ಗೌಪ್ಯತೆಯನ್ನ ಗೌರವಿಸುತ್ತೀರೆಂದು ಅಪೇಕ್ಷಿಸುತ್ತೇನೆ. ಇಂಥ ಸಂದರ್ಭಗಳಲ್ಲಿ ನಿಜವಾದ ಸ್ನೇಹಿತರನ್ನ ನಾವು ಗುರುತಿಸಬಹುದು"

ಹೆಣ್ಣನ್ನ ಗೌರವಿಸದವರು...
"ಗಂಡು-ಹೆಣ್ಣಿನ ಸಂಬಂಧದ ಸೂಕ್ಷ್ಮಗಳನ್ನ ನೋಡಲು ಸಿದ್ಧರಿಲ್ಲದ; ಶೋಷಣೆಯ ಮತ್ತು ಗಂಡಿನ ದೃಷ್ಟಿಕೋನದಲ್ಲೇ ಮಹಿಳೆಯರ ಅಸ್ತಿತ್ವ ಮತ್ತು ವ್ಯಕ್ತಿತ್ವನ್ನ ಶೋಧಿಸುವ; ಮಹಿಳೆಯನ್ನ ಖಾಸಗಿ ಸ್ವತ್ತು ಅಥವಾ ಮಗು ಹೆರುವ ಯಂತ್ರವಾಗಿ ನೋಡುವ; ಮಹಿಳೆಯರ ಘನತೆಗೆ ಬೆಲೆ ಕೊಡದವರು - ಇವರೆಲ್ಲರಿಗೂ ಈ ಪ್ರಕರಣ ಒಂದು ರೀತಿ ಹಾಸ್ಯದ, ಗಾಸಿಪ್ಪಿನ ವಿಷಯವಾಗುತ್ತದೆ. ಇದಷ್ಟೇ ಅವರಿಗೆ ಗೊತ್ತಿರುವುದು. ಇವರ ಚಿಂತನೆ ಮತ್ತು ರಾಜಕೀಯದ ಪರಿಧಿ ಇಷ್ಟೆಯೇ. ಇವರೆಲ್ಲರಿಂದ ಇದಕ್ಕಿಂತ ಹೆಚ್ಚಿನದನ್ನ ನಾನು ನಿರೀಕ್ಷಿಸುತ್ತಿಲ್ಲ" - ಹೀಗೆಂದು ಅಮೃತಾ ರಾಯ್ ಪತಿ ಆನಂದ್ ಪ್ರಧಾನ್ ಹೇಳಿಕೊಂಡಿದ್ದಾರೆ.

ಸಾವಿನ ಬಳಿಕ ಶುರುವಾಯ್ತು ಪ್ರೇಮ..
ಕರ್ನಾಟಕ ಕಾಂಗ್ರೆಸ್'ನ ಉಸ್ತುವಾರಿ ದಿಗ್ವಿಜಯ ಸಿಂಗ್ ಅವರ ಪತ್ನಿ 2013ರ ಫೆಬ್ರವರಿಯಲ್ಲಿ ನಿಧನರಾಗಿದ್ದರು. ದೀರ್ಘಕಾಲದಿಂದ ಅವರ ಪತ್ನಿ ಕ್ಯಾನ್ಸರ್'ನಿಂದ ಬಳಲಿ ಕೊನೆಯುಸಿರೆಳೆದಿದ್ದರು. ಪತ್ನಿ ನಿಧನರಾಗಿ 6 ತಿಂಗಳ ಬಳಿಕ ದಿಗ್ವಿಜಯ ಸಿಂಗ್ ಮತ್ತು ಅಮೃತಾ ರೈ ಅವರ ಪರಿಚಯವಾಗಿದೆ. ಆಗಲೇ ಅವರಿಬ್ಬರ ನಡುವೆ ಪ್ರೇಮ ಚಿಗುರಿದೆ. ಆಗಿನಿಂದ ಇಬ್ಬರ ಅಫೇರ್ ಗುಪ್'ಚುಪ್ ಆಗಿ ನಡೆಯುತ್ತಾ ಬಂದಿದೆ.

ಮಕ್ಕಳ ವಿರೋಧ..
67 ವರ್ಷದ ದಿಗ್ವಿಜಯ ಸಿಂಗ್ ಅವರಿಗೆ ಓರ್ವ ಪುತ್ರ ಸೇರಿದಂತೆ ಐವರು ಮಕ್ಕಳಿದ್ದಾರೆ. ಮಗ ಜೈವರ್ಧನ್ ಸಿಂಗ್ ಕೂಡ ರಾಜಕಾರಣದಲ್ಲಿದ್ದು ಶಾಸಕರಾಗಿದ್ದಾರೆ. ಟಿವಿ ಪತ್ರಕರ್ತೆ ಅಮೃತಾ ರಾಯ್ ಜೊತೆ ಅಪ್ಪನ ಸಂಬಂಧ ಇದ್ದದ್ದು ಮಕ್ಕಳಿಗೆ ಇಷ್ಟವಿರಲಿಲ್ಲ. ಮಗ ಜೈವರ್ಧನ್ ಅವರಂತೂ ದಿಗ್ವಿಜಯ್ ಜೊತೆ ಮುನಿಸಿಕೊಂಡು ಕೆಲ ಕಾಲ ಮಾತಾಡುವುದನ್ನೇ ಬಿಟ್ಟಿದ್ದರಂತೆ.

ಅಮೃತಾ ರೈಗೂ ದಿಗ್ವಿಜಯ್ ಸಿಂಗ್ ಅವರಿಗೂ 24 ವರ್ಷಗಳಷ್ಟು ವಯಸ್ಸಿನ ಅಂತರವಿದೆ. ಅದಾಗಲೇ ಮದುವೆಯಾಗಿರುವ ಅಮೃತಾ ತನ್ನ ಗಂಡನಿಗೆ ಡೈವೋರ್ಸ್ ಕೂಡ ನೀಡಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com