ಎಸ್ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ ಪ್ರಕಟ, ಚಿಕ್ಕೋಡಿ ಪ್ರಥಮ

ಬೆಂಗಳೂರು: ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿರುವ ಎಸ್ಎಸ್ಎಲ್ ಸಿ ಫಲಿತಾಂಶ ಪ್ರಕಟವಾಗಿದೆ. ಸುದ್ದಿಗೋಷ್ಠಿ ನಡೆಸಿದ ಸಚಿವ ಕಿಮ್ಮನೆ ರತ್ನಾಕರ ಫಲಿತಾಂಶದ ಪ್ರಕಟಿಸಿದ್ದಾರೆ. ಈ ಬಾರೀ ಶೇ.81.19ರಷ್ಟು ಫಲಿತಾಂಶ ಬಂದಿದ್ದು, 17 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ. 2,223 ಶಾಲೆಗಳಲ್ಲಿ ಶೇ. 100ರಷ್ಟು ಫಲಿತಾಂಶ ಬಂದಿದೆ.
ಚಿಕ್ಕೋಡಿಯಲ್ಲಿ ಶೇ 89.86 ಫಲಿತಾಂಶ ಬಂದಿದ್ದು, ಮೊದಲ ಸ್ಥಾನ ಪಡೆದಿದೆ. ಶಿರಸಿಗೆ 2ನೇ ಸ್ಥಾನ, ಬೆಳಗಾವಿ ಜಿಲ್ಲೆಗೆ 3ನೇ ಸ್ಥಾನ, ಮಂಡ್ಯ ಜಿಲ್ಲೆಗೆ 4ನೇ ಸ್ಥಾನ ಸಿಕ್ಕಿದೆ. ಬೀದರ್​​​ಗೆ ಕೊನೆಯ ಸ್ಥಾನದಲ್ಲಿದೆ.ವೆಬ್​ಸೈಟ್ ಗಳಲ್ಲಿ ಫಲಿತಾಂಶ ನೋಡಬಹುದಾಗಿದ್ದು,. ನಾಳೆ ರಾಜ್ಯದ ಎಲ್ಲಾ ಪ್ರೌಢಶಾಲೆಗಳಲ್ಲೂ ಫಲಿತಾಂಶ ಪ್ರಕಟವಾಗಲಿದೆ. ಒಟ್ಟು 8 ಲಕ್ಷದ 26 ಸಾವಿರ ವಿದ್ಯಾರ್ಥಿಗಳು ಈ ಸಲ ಪರೀಕ್ಷೆ ಬರೆದಿದ್ದಾರೆ. ಮಾರ್ಚ್ 28 ರಿಂದ ಏಪ್ರಿಲ್ 9ರವರೆಗೆ ಪರೀಕ್ಷೆ ನಡೆಸಲಾಗಿತ್ತು. 

SSLC 2014 results announced  

- ಶೇ.81.19ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ

- 2223 ಶಾಲೆಗಳಲ್ಲಿ ಶೇ.100ರಷ್ಟು ಫಲಿತಾಂಶ

- 628 ಸರ್ಕಾರಿ ಶಾಲೆಗಳಲ್ಲಿ ಶೇ.100ರಷ್ಟು ಫಲಿತಾಂಶ

- 163 ಅನುದಾನಿತ ಶಾಲೆಗಳಲ್ಲಿ ಶೇ.100 ರಷ್ಟು ಫಲಿತಾಂಶ

- 1262 ಅನುದಾನರಹಿತ ಶೇ.100ರಷ್ಟು ಫಲಿತಾಂಶ

- 17 ಅನುದಾನ ರಹಿತ ಶಾಲೆಗಳಲ್ಲಿ ಶೂನ್ಯ ಫಲಿತಾಂಶ

- ಯಾವುದೇ ಸರ್ಕಾರಿ ಶಾಲೆಯಲ್ಲಿ ಶೂನ್ಯ ಫಲಿತಾಂಶ ಬಂದಿಲ್ಲ

- ಈ ಬಾರಿಯೂ ಬಾಲಕಿಯರೇ ಮೇಲುಗೈ

-ಚಿಕ್ಕೋಡಿ ಮೊದಲ ಸ್ಥಾನ - ಶೇ.91.07

-ಶಿರಸಿ ಎರಡನೇ ಸ್ಥಾನ ಶೇ. 90.73
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com