ಮಂಗಳ ಗ್ರಹಕ್ಕೆ ಹಾರಲು 44 ಭಾರತೀಯರೂ ಸೇರಿದಂತೆ 705 ಮಂದಿ ಆಯ್ಕೆ

ಲಂಡನ್‌: 2024ರಲ್ಲಿ ಮಂಗಳ ಗ್ರಹಕ್ಕೆ ಕರೆದೊಯ್ಯಲು ನೆದರ್ಲೆಂಡ್‌ ಮೂಲದ ಸರ್ಕಾರೇತರ ಸಂಸ್ಥೆ 'ಮಾರ್ ಒನ್‌' ನಡೆಸುತ್ತಿರುವ ಆಯ್ಕೆ ಪ್ರಕ್ರಿಯೆಯ ಮುಂದಿನ ಸುತ್ತಿಗೆ 44 ಭಾರತೀಯರೂ ಸೇರಿದಂತೆ 705 ಮಂದಿ ಆಯ್ಕೆಯಾಗಿದ್ದಾರೆ. ಭಾರತೀಯರ ಪೈಕಿ 17 ಮಹಿಳೆಯರೂ ಇರುವುದು ವಿಶೇಷ. 

ಕೆಂಪುಗ್ರಹ ಮಂಗಳ ಗ್ರಹದ ಏಕಮುಖದ ಪ್ರಯಾಣ ವನ್ನು 2024ಕ್ಕೆ ಆಯೋಜಿಸಲು ಮಾರ್ ಒನ್‌ ಸಂಸ್ಥೆ ಅರ್ಜಿ ಆಹ್ವಾನಿಸಿತ್ತು. 20 ಸಾವಿರ ಭಾರತೀಯರೂ ಸೇರಿದಂತೆ 140 ರಾಷ್ಟ್ರಗಳಿಂದ ಲಕ್ಷಾಂತರ ಮಂದಿ ಅರ್ಜಿ ಗುಜರಾಯಿಸಿದ್ದರು. ಈ ಪೈಕಿ ಇದೀಗ 353 ಆಕಾಂಕ್ಷಿಗಳನ್ನು ಹೊರಗಿಟ್ಟು 705 ಮಂದಿಯ ಆಯ್ಕೆ ಪಟ್ಟಿ ಪ್ರಕಟಿಸಿದೆ. ಇವೆರೆಲ್ಲರನ್ನು ಸಂದರ್ಶನಕ್ಕೆ ಆಹ್ವಾನಿಸಿ ಮತ್ತೂಂದು ಸುತ್ತಿನ ಜರಡಿ ಹಿಡಿಯಲಿದೆ. 

ಮುಂದಿನ ಸುತ್ತಿಗೆ ಆಯ್ಕೆಯಾಗಿರುವ 44 ಭಾರತೀಯ ರಲ್ಲಿ ದೆಹಲಿ, ಮುಂಬೈ, ಹೈದರಾಬಾದ್‌, ಕೋಲ್ಕತಾ, ಪುಣೆ ಹಾಗೂ ತಿರುವನಂತಪುರ ನಿವಾಸಿಗಳು ಇದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com