ಶ್ರೀಲಂಕನ್ ವ್ಯಕ್ತಿ ಜೊತೆ ಐಶ್ವರ್ಯ ರೈ ಅಫೇರ್! ಕೇಸ್ ಹಾಕಿದ್ದ ನಿರೋಶನ್!

ಮುಂಬೈ :ಮಾಜಿ ವಿಶ್ವಸುಂದರಿ ಹಾಗೂ ಬಚ್ಚನ್ ಕುಟುಂಬದ ಸೊಸೆ ಐಶ್ವರ್ಯ ರೈ ಮತ್ತೆ ಸುದ್ದಿಯಲ್ಲಿದ್ದಾರೆ. ಐಶ್ವರ್ಯ ರೈ ಜೊತೆ ತನಗೆ ಹಿಂದೆ ಸಂಬಂಧ ಇದ್ದುದಾಗಿ ಶ್ರೀಲಂಕಾದ ವ್ಯಕ್ತಿಯೊಬ್ಬ ಹೇಳಿಕೊಂಡಿದ್ದಾನೆ. ಐಶ್ವರ್ಯ ತನಗೆ ಮೋಸ ಮಾಡಿ ಮಾನಸಿಕ ಆಘಾತ ಕೊಟ್ಟಿದ್ದಾಳೆ ಎಂದೂ ನಿರೋಶನ್ ದೇವಪ್ರಿಯಾ ಎಂಬ ಆ ವ್ಯಕ್ತಿ ಆರೋಪಿಸಿದ್ದಾನೆ.

ಸದ್ಯ ಚೀನಾದಲ್ಲಿ ವಾಸಿಸುತ್ತಿರುವ ನಿರೋಶನ್ ದೇವಪ್ರಿಯಾ ಹೇಳುವ ಪ್ರಕಾರ, ಐಶ್ವರ್ಯ ರೈ ಮತ್ತು ಆತನೂ ಇಬ್ಬರೂ ಪ್ರೀತಿಸುತ್ತಿದ್ದರಂತೆ. ಆದರೆ, 7 ವರ್ಷಗಳ ಹಿಂದೆ ಅಭಿಷೇಕ್ ಬಚ್ಚನ್ ಅವರನ್ನ ವಿವಾಹವಾಗುವ ಮೂಲಕ ತನ್ನ ಮಾನಸಿಕ ಆಘಾತಕ್ಕೆ ಕಾರಣಳಾಗಿದ್ದಾಳಂತೆ.

ನಿರೋಶನ್, ಕೋರ್ಟ್'ನಲ್ಲಿ ಐಶ್ವರ್ಯ ವಿರುದ್ಧ ಪ್ರಕರಣವನ್ನೂ ದಾಖಲಿಸಿದ್ದಾನೆ. ತನ್ನ ಸಂಬಂಧಿಯ ಶಿಫಾರಸಿನ ಮೇರೆಗೆ ಈ ಕೇಸ್ ನಡೆಸಲು ವಕೀಲರೊಬ್ಬರಿಗೆ 17 ಲಕ್ಷ ರು. ಹಣವನ್ನೂ ನೀಡಿದ್ದಾನೆ. ಆದರೆ, ಈ ಪ್ರಕರಣದಲ್ಲಿ ಐಶ್ವರ್ಯ ವಿರುದ್ಧ ಆ ವಕೀಲ ಯಾವುದೇ ಕ್ರಮ ಕೈಗೊಳ್ಳದೇ ಇದ್ದುದ್ದರಿಂದ ತನ್ನ ಸಂಬಂಧಿಯ ವಿರುದ್ಧ ಆತ ಮತ್ತೊಂದು ದೂರು ದಾಖಲಿಸಿದ್ದಾನೆ. ಇದೇ ಪ್ರಕರಣ ಸಂಬಂಧ ವಿಚಾರಣೆ ನಡೆಸಿರುವ ನ್ಯಾಯಾಲಯವು ನಿರೋಶನ್'ಗೆ ಮರಳಿ ಹಣ ಕೊಡಿಸಲು ತೀರ್ಮಾನಿಸಿದೆ.

ಈ ಪ್ರಕರಣದ ಹಿನ್ನೆಲೆಯಲ್ಲಿ ಈಗ ಈ ನಿರೋಶನ್ ಮತ್ತು ಐಶ್ವರ್ಯ ಪ್ರೇಮ ವ್ಯವಹಾರದ ವಿಷಯ ಬೆಳಕಿಗೆ ಬಂದಿದೆ. ಐಶ್ವರ್ಯ ರೈ ವಿರುದ್ಧ ನಿರೋಶನ್ ಸಲ್ಲಿಸಿರುವ ದೂರಿನ ವಿಚಾರಣೆ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ಸಿಕ್ಕಿಲ್ಲ. ಹಾಗೆಯೇ, ಆತ ಹೇಳಿಕೊಂಡಂತೆ ಐಶ್ವರ್ಯ ರೈ ಮತ್ತು ಆತನ ನಡುವಿನ ಪ್ರೇಮ ವ್ಯವಹಾರ ಯಾವ ಕಾಲದಲ್ಲಾಗಿತ್ತು ಎಂಬ ಬಗ್ಗೆಯೂ ಇನ್ನೂ ಮಾಹಿತಿ ಗೊತ್ತಾಗಿಲ್ಲ.
Was Aishwarya Rai had affair with Shrilankan Niroshan
(ಮಾಹಿತಿ: ಒನ್ ಇಂಡಿಯಾ)
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com