ಪಿಯುಸಿ: ಆಳ್ವಾಸ್‌ ಪ.ಪೂ. ಕಾಲೇಜಿಗೆ ಶೇ. 99.33

ಮೂಡಬಿದಿರೆ: ರಾಜ್ಯದಲ್ಲೇ ಗರಿಷ್ಠ ಸಂಖ್ಯೆಯ ವಿದ್ಯಾರ್ಥಿಗಳಿರುವ ಆಳ್ವಾಸ್‌ ಪ.ಪೂ. ಕಾಲೇಜಿನ ದ್ವಿತೀಯ ಪಿಯುಸಿಯ 13ನೇ ತಂಡದ 3,442 ಮಂದಿ ವಿದ್ಯಾರ್ಥಿಗಳಲ್ಲಿ 3,419 ಮಂದಿ (1,895 ವಿಶಿಷ್ಟ, 1,480 ಪ್ರಥಮ) ಉತ್ತೀರ್ಣರಾಗುವ ಮೂಲಕ ಶೇ. 99.33 ಫಲಿತಾಂಶ ದಾಖಲಾಗಿದೆ. ತನ್ಮೂಲಕ ಕಳೆದ 5ವರ್ಷಗಳಲ್ಲಿ ಸಂಸೆªಯು 99 ಶೇ.ಗಿಂತ ಅಧಿಕ ಫಲಿತಾಂಶವನ್ನು ಕಾಯ್ದುಕೊಂಡಿದೆ ಎಂದು ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವರು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.

ವಿಜ್ಞಾನ ವಿಭಾಗದ ಶ್ರೀಗೌರಿ ಕಾಲೇಜಿನಲ್ಲಿಯೇ ಗರಿಷ್ಠ 593 ಅಂಕ ಗಳಿಸಿದ್ದಾರೆ. ಅವರು ಭೌತಶಾಸ್ತ್ರ, ರಸಾಯನ ಶಾಸ್ತ್ರದಲ್ಲಿ 100, ಗಣಿತ ಮತ್ತು ಜೀವಶಾಸ್ತ್ರದಲ್ಲಿ ತಲಾ 99, ಸಂಸ್ಕೃತದಲ್ಲಿ 100, ಇಂಗ್ಲೀಷ್‌ನಲ್ಲಿ 95 ಅಂಕ ಗಳಿಸಿದ್ದಾರೆ.

ನವ್ಯಶ್ರೀ 582 (ಭೌ-99, ರ-100, ಗ-97,ಜೀ-100, ಕನ್ನಡ-99, ಇಂಗ್ಲೀಷ್‌-97), ಭವನಾ 591 (ಭೌ-99, ರ-100, ಗ-100, ಜೀ-98, ಕ-98, ಇ-96) ಹಾಗೂ ಸುಹಾಗ್‌ 590 (ಭೌ,ರ,ಗ,ಜೀ-ತಲಾ 100, ಕ-97, ಇ-93) ಅಂಕಗಳಿಸಿದ್ದಾರೆ.

ಕಾಮರ್ಸ್‌ನಲ್ಲಿ ಆದರ್ಶ 588 (ಬಿಸಿನೆಸ್‌ ಸ್ಟಡೀಸ್‌, ಬೇಸಿಕ್‌ ಮ್ಯಾಥ್ಸ್, ಸ್ಟಾಟಿಸ್ಟಿಕ್ಸ್‌ ತಲಾ 100, ಎಕೌಂಟೆನ್ಸಿ-99, ಹಿಂದಿ-96, ಇಂಗ್ಲೀಷ್‌-93) ಅಂಕ ಗಳಿಸಿದ್ದಾರೆ.

278 ಮಂದಿ 95 ಶೇ.ಗಿಂತ ಅಧಿಕ, 1054 ಮಂದಿ 90 ಶೇ.ಗಿಂತ ಅಧಿಕ ಹಾಗೂ 1895 ಮಂದಿ 85 ಶೇ.ಗಿಂತ ಅಧಿಕ ಅಂಕ ಗಳಿಸಿದ್ದಾರೆ.

ಕೊರಗ ಜನಾಂಗದವರ ಸಾಧನೆ

ಎಸೆಸೆಲ್ಸಿಯಲ್ಲಿ ಶೇ. 89.30 ಅಂಕ ಗಳಿಸಿ ಆಳ್ವಾಸ್‌ನ ದತ್ತು ಸ್ವೀಕಾರದಡಿ ಸಂಪೂರ್ಣ ಉಚಿತ ಶಿಕ್ಷಣ ಸೌಲಭ್ಯ ಪಡೆದ ಕುಂದಾಪುರದ ಕೊರಗ ಜನಾಂಗದ ಸ್ನೇಹ ಕೆ. ಪಿಯುಸಿ ವಿಜ್ಞಾನ ವಿಭಾಗದಲ್ಲಿ 93.5 ಶೇ (561) ಅಂಕ ಗಳಿಸಿ ಸಂಸ್ಥೆಗೆ ಮಾತ್ರವಲ್ಲ ಕೊರಗ ಜನಾಂಗಕ್ಕೇ ಕೀರ್ತಿ ತಂದಿದ್ದಾರೆ.

ಹಕ್ಕಿ ಪಿಕ್ಕೆ ಜನಾಂಗದವರ ಸಾಧನೆ

ಆಳ್ವಾಸ್‌ ಉಚಿತ ಶಿಕ್ಷಣದ ಅವಕಾಶದಲ್ಲಿ ಕಾಮರ್ ( ಸಿಎ ತರಬೇತಿ ಸಹಿತ) ಪ್ರವೇಶ ಪಡೆದ ಬೆಳಗಾವಿಯ ಹಕ್ಕಿ ಪಿಕ್ಕೆ (ಅಲೆಮಾರಿ) ಜನಾಂಗದ ರಮೇಶ ರುದ್ರಾಕ್ಷಿ ಹಾಗೂ ಮಂಜುನಾಥ ರುದ್ರಾಕ್ಷಿ ಸಹೋದರರು 548 (91.33) ಸಮಾನ ಅಂಕಗಳಿಸಿ ಆಳ್ವಾಸ್‌ನ ದತ್ತು ಸ್ವೀಕಾರವನ್ನು ಸಾರ್ಥಕಗೊಳಿಸಿದ್ದಾರೆ ಎಂದು ಆಳ್ವರು ಸಂತಸ, ಸಂತೃಪ್ತಿ ವ್ಯಕ್ತಪಡಿಸಿದರು.

ಆಳ್ವಾಸ್‌ ಕ್ರೀಡೆ, ಸಾಂಸ್ಕೃತಿಕ, ಪ. ಜಾತಿ/ಪಂಗಡ, ಅಲೆಮಾರಿ, ಬುಡಕಟ್ಟು ಜನಾಂಗದವರು, ಅಂಗವಿಕಲರು ಎಂಬ ವಿಭಾಗಗಳಡಿ ಉಚಿತ ಶಿಕ್ಷಣಕ್ಕೆ ಅವಕಾಶ ಮಾಡಿಕೊಡುತ್ತಿದ್ದು ಶಿಕ್ಷಣದೊಂದಿಗೆ ಕ್ರೀಡೆ, ಸಾಂಸ್ಕೃತಿಕರಂಗಗಳಲ್ಲೂ ಪಾರಮ್ಯ ತೋರುತ್ತಿದೆ; ವಿಶೇಷವಾಗಿ ಕ್ರೀಡಾ ವಿಭಾಗದ ವಿದ್ಯಾರ್ಥಿಗಳೆಲ್ಲರೂ ಉತ್ತೀರ್ಣರಾಗಿರುವುದು ಉಲ್ಲೇಖನೀಯ ಎಂದ ಅವರು ವಿದ್ಯಾರ್ಥಿಗಳ ಸಾಧನೆಯ ಹಿಂದಿರುವ ಪ್ರಾಚಾರ್ಯರು, ಶಿಕ್ಷಕರು. ವಿವಿಧ ತರಬೇತಿದಾರರ ಪರಿಶ್ರಮವನ್ನೂ ಸ್ಮರಿಸಿಕೊಂಡರು.

ಪತ್ರಿಕಾಗೋಷ್ಠಿಯಲ್ಲಿ ಪ್ರಾಚಾರ್ಯ ಪ್ರೊ| ರಮೇಶ ಶೆಟ್ಟಿ ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com