ಕೋಟಿ ಕೋಟಿ ಸಂಭಾವನೆ ಪಡೆಯುವ ಬಾಲಿವುಡ್ ನಟರು

ಮುಂಬೈ: ಬಾಲಿವುಡ್ ಒಂದು ರೀತಿಯ ರಂಗೀನ್ ಲೋಕ.. ಇಲ್ಲಿನ ಚಿತ್ರಗಳು ದೇಶದ ವಿವಿಧೆಡೆಯಲ್ಲಷ್ಟೇ ಅಲ್ಲದೇ ವಿದೇಶಗಳಲ್ಲೂ ತೆರೆ ಕಂಡು ಭರ್ಜರಿ ಪ್ರದರ್ಶನ ಕಾಣುತ್ತವೆ. ಹಣ ಮಾಡುವದರಲ್ಲಿ ಜೋರು.. ಇತ್ತೀಚಿನ ದಿನಗಳಲ್ಲಿ ಒಂದು ಬಿಗ್ ಬಜೆಟ್ ಚಿತ್ರ ಬಾಲಿವುಡ್`ನಲ್ಲಿ 150ರಿಂದ 200 ಕೋಟಿವರೆಗೂ ಮಾಡುತ್ತೆ. ಹೀಗಾಗಿ, ಬಾಲಿವುಡ್ ನಟರ ಸಂಭಾವನೆ ಸಹ ಭಾರೀ ಪ್ರಮಾಣದಲ್ಲಿದೆ. ಬಾಲಿವುಡ್`ನ ಕೆಲ ಲೀಡಿಂಗ್ ಹೀರೋಗಳ ಸಂಭಾವನೆ ಕೇಳಿದ್ರೆ ನಿಜಕ್ಕೂ ಬೆಚ್ಚಿ ಬೀಳ್ತೀರಿ.

ಬಾಲಿವುಡ್`ನ ಸದ್ಯದ ಲೀಡಿಂಗ್ ಹೀರೋ ಸಲ್ಮಾನ್ ಖಾನ್. ಸಲ್ಲೂ ನಟಿಸುತ್ತಿರುವ ಪ್ರತೀ ಚಿತ್ರ ಗಳಿಕೆಯಲ್ಲಿ 150 ಕೋಟಿಯ ಗಡಿ ದಾಟುತ್ತಿದೆ. ಹೀಗಾಗಿ ಸಲ್ಮಾನ್ ತಮ್ಮ ಸಂಭಾವನೆಯನ್ನ ಎರ್ರಾಬಿರ್ರಿ ಏರಿಸಿದ್ದಾರೆ. ಇತ್ತೀಚೆಗೆ ಸಲ್ಮಾನ್ ಖಾನ್ ಒಂದು ಚಿತ್ರಕ್ಕೆ ತೆಗೆದುಕೊಂಡಿರುವ ಸಂಭಾವನೆ ಬರೋಬ್ಬರಿ 60 ಕೋಟಿ. ಸದ್ಯಕ್ಕೆ ಬಾಲಿವುಡ್`ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಾಯಕ ಸಲ್ಲೂಮಿಯಾ.

ಬಾಲಿವುಡ್`ನ ಮಿ. ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ಸಾಲಿನಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಅಮೀರ್ ಖಾನ್ ಚಿತ್ರಕ್ಕೆ ಪಡೆಯುವ ಸಂಭಾವನೆ 45 ಕೋಟಿ.

ಇನ್ನೂ, ಹುಡುಗಿಯರ ಸೈಲಿಶ್ ಹೀರೋ ಕಿಂಗ್ ಖಾನ್ ಶಾರೂಖ್ ಖಾನ್, ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ಸಾಲಿನಲ್ಲಿ ಕಿಂಗ್ ಖಾನ್ ಒಂದುತ್ರಕ್ಕೆ 35 ಕೋಟಿ ರೂ. ಸಂಭಾವನೆ ಪಡೀತಾರಂತೆ. ಅಂದರೆ ಬಾಲಿವುಡ್`ನಲ್ಲಿ ಖಾನ್`ತ್ರಯರೇ ಕಿಂಗ್.

ಇನ್ನುಳಿದಂತೆ ಅಕ್ಷಯ್ ಕುಮಾರ್ 40-45 ಕೋಟಿ ಪಡೀತಾರೆ ಎನ್ನಲಾಗುತ್ತಿದೆ. ಹೃತಿಕ್ ರೋಶನ್ 25 ಕೋಟಿ ಪಡೆದರೆ, ಸೈಫ್ ಅಲಿಖಾನ್ 20 ಕೋಟಿ ಸಂಭಾವನೆ ಪಡೆಯುತ್ತಾರಂತೆ. ಚಾಕ್ ಲೇಟ್ ಹೀರೋ ರಣಬೀರ್ ಕಪೂರ್ ಮತ್ತು ಜಾನ್ ಅಬ್ರಾಹಂ 15 ಕೋಟಿ ಸಂಭಾವನೆ ಪಡೀತಾರಂತೆ.

ಒಟ್ನಲ್ಲಿ, ಬಾಲಿವುಡ್ ಮಸಲ್ ಮ್ಯಾನ್`ಗಳಿಗೆ ಕೋಟಿ ಕೋಟಿ ಸಂಭಾವನೆ ಸಿಗುತ್ತಿದೆ. ನಿರ್ಮಾಪಕರು ಏನು ಸುಮ್ನೆ ಕೋಟಿ ಕೋಟಿ ಕೊಟ್ಟು ಕೋಟಿ ಕೋಟಿ ಗಲ್ಲಾಪಟ್ಟಿಗೆಗೆ ಹಾಕಿಕೊಳ್ತಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com