2016ರಲ್ಲಿ ಉಡುಪಿಯಲ್ಲಿ ಸಮಗ್ರ ಬ್ರಾಹ್ಮಣ ಸಮಾಜ ಮಹಾ ಸಮ್ಮೇಳನ: ಪೇಜಾವರ ಶ್ರೀ

ಬೆಳ್ತಂಗಡಿ: ಉಡುಪಿಯಲ್ಲಿ 2016 ಜನವರಿಯಲ್ಲಿ ಆರಂಭಗೊಳ್ಳಲಿರುವ ಉಡುಪಿ ಶ್ರೀ ಕೃಷ್ಣ ಪೂಜೆಯ ಐದನೇ ಪರ್ಯಾಯವಧಿಯಲ್ಲಿ ಸಮಗ್ರ ಬ್ರಾಹ್ಮಣ ಸಮಾಜದ ಮಹಾ ಸಮ್ಮೇಳನವನ್ನು ಉಡುಪಿಯಲ್ಲಿ ಆಯೋಜಿಸುವುದಾಗಿ ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಪ್ರಕಟಿಸಿದ್ದಾರೆ.
      ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಶ್ರೀ ರಾಮಕೃಷ್ಣ ಸಭಾಮಂಟಪದಲ್ಲಿ ಇತ್ತೀಚೆಗೆ, ತುಳು ಶಿವಳ್ಳಿ ಬ್ರಾಹ್ಮಣ ಸಭಾ ಉಜಿರೆ ವಲಯದ ಪ್ರಥಮ ವಾರ್ಷಿಕೋತ್ಸವದಲ್ಲಿ ಸಾಧಕರನ್ನು ಸನ್ಮಾನಿಸಿ ಅವರು ಮಾತನಾಡಿದರು. ಶಿವಳ್ಳಿ ಬ್ರಾಹ್ಮಣ ಸಮಾಜ ಸಂಸ್ಕಾರ, ಸಂಸ್ಕೃತಿಯಲ್ಲಿ ಪ್ರತ್ಯೇಕತೆ ಉಳಿಸಿಕೊಂಡು ಬಂದಿದ್ದು ಇದು ಇಡೀ ಸಮಾಜದ ಜತೆಗೆ ಒಂದಾಗಿರಬೇಕು. ದೇಶದ ಸೇವೆ, ಸಂಸ್ಕೃತಿ ರಕ್ಷಣೆಯಲ್ಲಿ ನಾವು ಸಂಘಟಿತರಾಗಬೇಕಾಗಿದೆ. ಸಮಾಜದಲ್ಲಿ ಭಕ್ತಿ, ಜಾಗೃತಿ ಮೂಡಿಸಿದ ಆಚಾರ್ಯ ಸಂಸ್ಕೃತಿ, ತತ್ವಜ್ಞಾನವನ್ನು ಉಳಿಸಿ ಸಂಘಟಿತರಾಗಿ ವಿಶಿಷ್ಟತೆ ಮೆರೆಯಬೇಕು ಎಂದರು.
ಸಾಧಕರಿಗೆ ಸನ್ಮಾನ: ಕೃಷಿಯಲ್ಲಿ ಸಾಧನೆ ತೋರಿದ ನೆರಿಯದ ಸೂರಜ್ ಹೆಬ್ಬಾರ್ ಮತ್ತು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸೇವಾಭಾರತಿಯ ಹರೀಶ್ ರಾವ್ ಮುಂಡ್ರುಪ್ಪಾಡಿ ಅವರನ್ನು ಸಂಘದ ಪರವಾಗಿ ಸ್ವಾಮೀಜಿ ಸನ್ಮಾನಿಸಿದರು.
     ಪುತ್ತೂರು ಸರಸ್ವತಿ ವಿದ್ಯಾಸಂಸ್ಥೆಯ ಮುಖ್ಯಸ್ಥ ಅವಿನಾಶ್ ಕೊಡೆಂಕಿರಿ ಅಧ್ಯಕ್ಷತೆ ವಹಿಸಿದ್ದರು. ಸಭಾದ ವಲಯಾಧ್ಯಕ್ಷ ಡಾ.ಎಂ.ಎಂ.ದಯಾಕರ್ ಸ್ವಾಗತಿಸಿದರು. ಕಾರ್ಯದರ್ಶಿ ರಾಜಪ್ರಸಾದ ಪೊಳ್ನಾಯ, ರಾಜಾರಾಮ ಶರ್ಮ ಅತಿಥಿಗಳ ಪರಿಚಯ ನೀಡಿದರು. ಗಾಯತ್ರಿ ಶ್ರೀಧರ್ ಮತ್ತು ವಾರಿಜ ಕೆದಿಲಾಯ ನಿರ್ವಹಿಸಿದರು. ಪರಾರಿ ವೆಂಕಟ್ರಮಣ ಭಟ್ ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com