ಕೊಂಕಣಿ ಬಲಪಡಿಸಲು ಮುಂದೆ ಬನ್ನಿ: ರೋಯ್‌ ಕ್ಯಾಸ್ಟಲಿನೊ

ಮಂಗಳೂರು : ಕೊಂಕಣಿ ಭಾಷೆ ಅಭಿವೃದ್ಧಿ ಮತ್ತು ಪ್ರಸಾರದ ದೃಷ್ಟಿಯಿಂದ ವಿಶ್ವ ಕೊಂಕಣಿ ಕೇಂದ್ರ ಹಾಗೂ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಸಂಶೋಧನೆ ಹಾಗೂ ಭಾಷಾಂತರ ಕಾರ್ಯಗಳಿಗಾಗಿ ದಾಪುಗಾಲಿಟ್ಟಿದ್ದು, ಜನ ಮೆಚ್ಚುಗೆ ಪಡೆಯುತ್ತಿವೆ. ಕೊಂಕಣಿ ಕಲಿಯುವ ವಿದ್ಯಾರ್ಥಿಗಳು ಸಾಹಿತ್ಯ ಮತ್ತು ಸಂಶೋಧನಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಕೊಂಕಣಿ ಭಾಷೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಬೇಕು ಎಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರೋಯ್‌ ಕ್ಯಾಸ್ಟಲಿನೊ ಕರೆ ನೀಡಿದರು.

ಅವರು ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದಲ್ಲಿ ಆರಂಭವಾದ ಕೊಂಕಣಿ ಭಾಷೆ ಮತ್ತು ಅನುವಾದ ಕಾರ್ಯಗಾರ ಉದ್ಘಾಟಿಸಿದರು.

ಕಾರ್ಯಾಗಾರದ ಸಂಚಾಲಕರಾದ ಗೋವಾ ವಿಶ್ವವಿದ್ಯಾನಿಲಯದ ಆಂಗ್ಲ ವಿಭಾಗದ ಉಪನ್ಯಾಸಕಿ ಡಾ| ಕಿರಣ ಬುಡಕುಳೆ ಅವರು ಗೋವಾದ ವಿದ್ಯಾರ್ಥಿಗಳಿಗೆ ಕರ್ನಾಟಕದ ಕೊಂಕಣಿ ಭಾಷೆ ಪರಿಚಯಿಸುವ ನಿಟ್ಟಿನಲ್ಲಿ ಒಂದು ವಾರದ ಅನುವಾದ ಮತ್ತು ಲಿಪ್ಯಂತರದ ತರಬೇತಿಯನ್ನು ವಿಶ್ವ ಕೊಂಕಣಿ ಕೇಂದ್ರದಲ್ಲಿ ಆಯೋಜಿಸಿರುವುದಾಗಿ ತಿಳಿಸಿದರು.

ವಿಶ್ವ ಕೊಂಕಣಿ ಸರದಾರ ಮತ್ತು ಸ್ಥಾಪಕಾಧ್ಯಕ್ಷ ಬಸ್ತಿ ವಾಮನ ಶೆಣೈ ಅವರು ಕೊಂಕಣಿಯನ್ನು ಬೇರೆ ಭಾಷೆ ಜನರಿಗೆ ಮುಟ್ಟಿಸುವುದರ ಜತೆಗೆ ಬೇರೆ ಭಾಷೆಯ ಸಾಹಿತ್ಯವನ್ನು ಕೊಂಕಣಿಗೆ ತರುವ ಮಹತ್ವಾಕಾಂಕ್ಷೆಯೊಂದಿಗೆ ಗೋವಾದ ವಿದ್ಯಾರ್ಥಿಗಳಿಗೆ ಅನುವಾದ ಅಭ್ಯಾಸಕ್ಕಾಗಿ ಒಂದು ವಾರದ ತರಬೇತಿ ಶಿಬಿರ ಆಯೋಜಿಸಲಾಗಿದೆ ಎಂದರು.

ಭಾಷಾತಜ್ಞ ಡಾ| ರಮೇಶ ಡೋಂಗಡೆ, ಕೊಂಕಣಿ ಅಕಾಡೆಮಿ ರಿಜಿಸ್ಟ್ರಾರ್‌ ಡಾ| ಪಿ. ದೇವದಾಸ ಪೈ ಉಪಸ್ಥಿತರಿದ್ದರು. ವಿಶ್ವ ಕೊಂಕಣಿ ಕೇಂದ್ರದ ಸಹಾಯಕ ನಿರ್ದೇಶಕ ಗುರುದತ್‌ ಬಂಟ್ವಾಳಕಾರ ಕಾರ್ಯಕ್ರಮ ನಿರ್ವಹಿಸಿದರು. ಲೇಖಕಿ ಗೀತಾ ಸಿ. ಕಿಣಿ, ಶಾಲಾ ಕೊಂಕಣಿ ಶಿಕ್ಷಣ ಪ್ರಚಾರ ಸಂಚಾಲಕ ಡಾ| ಮೋಹನ ಪೈ, ಕೊಂಕಣಿ ಪ್ರಚಾರ ಸಂಚಾಲನದ ವಿಕ್ಟರ್‌ ಮಥಾಯಸ್‌, ಕೊಂಕಣಿ ಅಕಾಡೆಮಿ ಸದಸ್ಯ ಡಾ| ರವೀಂ¨Å‌ ಶಾನುಬೋಗ್‌, ಬ್ಯಾಂಕಿಂಗ್‌ ತಜ್ಞ ಅಲೆನ್‌ ಪಿರೇರಾ ಹಾಜರಿದ್ದರು.

ಗೋವಾ ವಿಶ್ವ ವಿದ್ಯಾನಿಲಯದ 30 ಶಿಬಿರಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸುತ್ತಿದ್ದಾರೆ. ಕೊಂಕಣಿ ಅಕಾಡೆಮಿ ಸದಸ್ಯೆ ಡಾ| ವಾರಿಜಾ ನೀರೇಬೈಲ್‌ ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com