ವಿಜಯಿ ಅಭ್ಯರ್ಥಿ ಶೋಭಾ ಮಾತು ಸತ್ಯಕ್ಕೆ ದೂರ: ಗೋಪಾಲ ಪೂಜಾರಿ

ಉಡುಪಿ: ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ನಡೆಸಿದ ದೌರ್ಜನ್ಯಕ್ಕೆ ಜನತೆ ತಕ್ಕ ಪಾಠ ಕಲಿಸಿದ್ದಾರೆಂದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿಯ ವಿಜಯಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ತನ್ನ ಕೀಳು ಅಭಿರುಚಿ ತೋರಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಆರೋಪಿಸಿದೆ. 

ಕಳೆದ ಎರಡು ವರ್ಷಗಳ ಅವಧಿಯಲ್ಲಿ ಹೆಗ್ಡೆಯವರು ಕ್ಷೇತ್ರಕ್ಕೆ ನೀಡಿದ ಕೊಡುಗೆ ಮರೆಯಲು ಅಸಾಧ್ಯ. ಅನಾಮತ್ತಾಗಿ ದೇಶದೆಲ್ಲೆಡೆ ಬೀಸಿದ ಮೋದಿ ಅಲೆಗೆ ಸಿಲುಕಿ ಹೆಗ್ಡೆಯವರು ಸೋತಿರಬಹುದು. ಆದರೆ ಅವರು ಕ್ಷೇತ್ರದುದ್ದಕ್ಕೂ ನಡೆಸಿದ ಜನ ಸಂಪರ್ಕ, ಜನ ಸ್ಪಂದನ, ಕಾರ್ಯಗತಗೊಂಡ ಅಭಿವೃದ್ಧಿ ಕೆಲಸಗಳು ದಾಖಲಾಗಿವೆ. 

ಕಾರ್ಯಕರ್ತರ ಮೇಲೆ ವಿನಾ ಕಾರಣ ಯಾವುದೇ ಗ್ರಾಮಗಳಲ್ಲಿ ಪೊಲೀಸರ ಮೇಲೆ ಒತ್ತಡ ತಂದು ಕೇಸುಗಳನ್ನು ದಾಖಲಿಸಿದ್ದಲ್ಲಿ ಅದರ ದಾಖಲೆಯನ್ನು ಜನರ ಮುಂದೆ ಪ್ರಕಟಿಸಬೇಕು. ಕಾನೂನುಬಾಹಿರ ಯಾವುದೇ ಕೆಲಸ ಮಾಡುವವರ ಬೆನ್ನತ್ತಿ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿರುವುದು ತಪ್ಪೇ? ಕಾಂಗ್ರೆಸ್ ಪಕ್ಷ ಸೋಲನ್ನು ಕಂಡರೂ ಪಕ್ಷದ ಸಂಘಟನೆಯನ್ನು ನಾಯಕರಾದ ಆಸ್ಕರ್ ಫರ್ನಾಂಡಿಸ್ ಮತ್ತು ಜಯಪ್ರಕಾಶ್ ಹೆಗ್ಡೆ ನೇತೃತ್ವದಲ್ಲಿ ಮುಂದುವರಿಸಲಿದ್ದೇವೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಗೋಪಾಲ ಪೂಜಾರಿ ತಿಳಿಸಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com