ಮಾಜಿ ಸಂಸದ ಐ.ಎಂ. ಜಯರಾಮ ಶೆಟ್ಟಿ ನಿಧನ

ಕುಂದಾಪುರ: ಉಡುಪಿ ಲೋಕಸಭಾ ಕ್ಷೇತ್ರದ ಮಾಜಿ ಸಂಸದ, ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಇರ್ಮಾಡಿ ಮೂಡ್ಲಕಟ್ಟೆ ಜಯರಾಮ ಶೆಟ್ಟಿ (ಐ.ಎಂ. ಜಯರಾಮ ಶೆಟ್ಟಿ ) ಗುರುವಾರ ರಾತ್ರಿ ಬೆಂಗಳೂರಿನಲ್ಲಿ ನಿಧನರಾದರು. ಅವರಿಗೆ 64 ವರ್ಷ ವಯಸ್ಸಾಗಿತ್ತು.
   ವೃತ್ತಿಯಲ್ಲಿ ಎಂಜಿನಿಯರ್, ರಸಗೊಬ್ಬರ ಉದ್ಯಮಿಯಾಗಿದ್ದ ಐಎಂಜೆ, 1994ರಲ್ಲಿ ಬಿಜೆಪಿಯಿಂದ ಬೈಂದೂರು ಕ್ಷೇತ್ರದ ಮೂಲಕ ವಿಧಾನಸಭೆ ಪ್ರವೇಶಿಸಿದರು. 1998ರ ಲೋಕಸಭಾ ಚುನಾವಣೆಯಲ್ಲಿ ಸಂಸತನ್ನೂ ಪ್ರವೇಶಿಸಿದರು ಆದರೆ, 1999ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಸೋತರು. 
   2004ರಲ್ಲಿ ಜೆಡಿಯು ಸೇರಿ ಬೈಂದೂರು ಕ್ಷೇತ್ರದಿಂದ ಮತ್ತೆ ವಿಧಾನಸಭೆಗೆ ಸ್ಪರ್ಧಿಸಿ ಸೋಲು ಕಂಡ ಬಳಿಕ 2009ರಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರಿದರು. ಆ ಬಳಿಕ ರಾಜಕೀಯದಲ್ಲಿ ಸಕ್ರಿಯವಾಗದೇ ಜಯರಾಮ್ ಶೆಟ್ಟರು ಮೂಲೆಗುಂಪಾಗಿಯೇ ಉಳಿದರು
   ಶತಮಾನದ ಇತಿಹಾಸ ಹೊಂದಿದ್ದ ಮೂಡ್ಲಕಟ್ಟೆ ದೊಡ್ಮನೆ ಕಂಬಳಕ್ಕೆ ಅಡ್ವಾಣಿ ಮುಂತಾದವರನ್ನು ಕರೆಯಿಸಿ ರಾಷ್ಟ್ರ ಮಟ್ಟದ ಖ್ಯಾತಿ ತಂದು ಕೊಟ್ಟಿದ್ದರು. ಕುಂದಾಪುರದಲ್ಲಿ ಮೂಡ್ಲಕಟ್ಟೆ ತಾಂತ್ರಿಕ ವಿಶ್ವವಿದ್ಯಾನಿಲಯವನ್ನು ಕಟ್ಟಿಸಿ ಸಾವಿರಾರು ವಿದ್ಯಾರ್ಥಿಗಳ ವಿದ್ಯಾದಾಹವನ್ನು ನೀಗಿಸಿದ ಕೀರ್ತಿ ಜಯರಾಮ್ ಶೆಟ್ಟರದ್ದಾಗಿತ್ತು.
       ಐಎಂಜೆ  ಪುತ್ರಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಇವರ ಅಂತ್ಯಕ್ರಿಯೆಯು ಮೂಡ್ಲಕಟ್ಟೆಯ ಸ್ವಗೃಹದಲ್ಲಿ ಶುಕ್ರವಾರ ಬೆಳಿಗ್ಗೆ 10.30ಕ್ಕೆ ನಡೆಯಲಿದೆ ಎಂದು ಕುಟುಂಬ ಮೂಲ ತಿಳಿಸಿದೆ.

Ex MLA of Byndoor and Ex MP of Udupi Mr.I M JayaramShetty no more
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com