ವಿದ್ಯುತ್ ಯೂನಿಟ್ಗೆ 32 ಪೈಸೆ ಏರಿಕೆ

ಬೆಂಗಳೂರು: ನಿರೀಕ್ಷೆಯಂತೆ ರಾಜ್ಯದಲ್ಲಿ 'ಕರೆಂಟ್ ಬಾಂಬ್' ಸ್ಫೋಟಗೊಂಡಿದ್ದು, ವಿದ್ಯುತ್ ದರ ಯೂನಿಟ್ಗೆ 32ಪೈಸೆ ಏರಿಕೆಯಾಗಿದೆ. ಕೆಇಆರ್ಸಿ (ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗ) ಸೋಮವಾರ ಪರಿಷ್ಕೃತ ದರ ಪ್ರಕಟಿಸಿದ್ದು,  ರೈತರಿಗೆ ಮತ್ತು ಬಡವರಿಗೆಂದು ಸರ್ಕಾರ ಖರೀದಿಸುವ ವಿದ್ಯುತ್ ಹೊರತು ಪಡಿಸಿ ಉಳಿದೆಲ್ಲಾ ರೀತಿಯ  ವಿದ್ಯುತ್ ಬಳಕೆ ಮೇಲೆ ಸರಾಸರಿ 32ಪೈಸೆ ಏರಿಕೆ ಮಾಡಲಾಗಿದೆ. ಕಳೆದ ವರ್ಷ 23 ಪೈಸೆ ಏರಿಕೆ ಮಾಡಿದ್ದ ಆಯೋಗ ಈ ಬಾರಿ ಅದನ್ನೇ ತಿರುಗಿಸಿ 32ಪೈಸೆಗೂ ಹೆಚ್ಚಿನ ಏರಿಕೆ ಮಾಡಿದೆ. ಗೃಹ ಬಳಕೆ ವಿದ್ಯುತ್ ಗ್ರಾಹಕರಿಗೆ 30 ಯೂನಿಟ್ಗಳ ವರೆಗೂ 20ಪೈಸೆ ಏರಿಕೆ ಹಾಗೂ 30 ಯೂನಿಟ್ಗಿಂತ ಹೆಚ್ಚು ಬಳಸಿದರೆ ಯೂನಿಟ್ಗೆ 30ಪೈಸೆ ಏರಿಕೆ ಮಾಡಲಾಗಿದೆ. ದರ ಪರಿಷ್ಕರಣೆ ಚಿಂತನೆ ಹಿಂದೆಯೇ ಆಗಿತ್ತಾದರೂ ಕೆಇಆರ್ಸಿ ಕೂಡ ಚುನಾವಣೆ ನಂತರದಲ್ಲೇ ದರ ಪರಿಷ್ಕರಿಸಿ ಬಿಎಂಟಿಸಿ, ಕೆಎಸ್ಆರ್ಟಿಸಿ ಗುಂಪಿಗೇ ಸೇರಿದೆ. ಕಳೆದ ವರ್ಷ ಮೇ 6ರಂದು ಅಂದರೆ ವಿಧಾನಸಭಾ ಚುನಾವಣೆ ಮುಗಿದ ಮರದಿನವೇ ದರ ಏರಿಸಿದ್ದ ಆಯೋಗ ಈ ಬಾರಿ ಕೂಡ ಚುನಾವಣೆ ನಂತರ ದರ ಏರಿಸಿದೆ. ಈ ಹೊಸ ದರ ಮೇ 1ರಿಂದಲೇ ಪೂರ್ವಾನ್ವಯವಾಗುವಂತೆ ಜಾರಿಯಾಗಲಿದೆ.

ಕನ್ನಡಪ್ರಭ ವರದಿ
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com