ಬಿರುಗಾಳಿ: ಗಂಗನಾಡುನಲ್ಲಿ ರಬ್ಬರ್, ಬಾಳೆ ನಾಶ

ಬೈಂದೂರು : ವ್ಯಾಪ್ತಿಯ ಗಂಗನಾಡಿನಲ್ಲಿ ಗುರುವಾರ ರಾತ್ರಿ ಬೀಸಿದ ಅಬ್ಬರದ ಬಿರುಗಾಳಿಗೆ ರಬ್ಬರ್ ಹಾಗೂ ಬಾಳೆ ತೋಟ ನಾಶಗೊಂಡಿದೆ. ಇಲ್ಲಿನ ಕೃಷಿಕರಾದ ವಿ.ಪಿ. ಸಿಮಿತ್, ಕೆ. ಎಲಿಯಾಸ್, ಕೆ. ಪೋಲಸ್, ವಿ.ಪಿ. ಬೆನ್ನಿ, ಬಿ.ಟಿ. ವರ್ಗೀಸ್ ಎಂಬವರ ರಬ್ಬರ್ ಹಾಗೂ ಬಾಳೆ ತೋಟ ಹಾನಿಗೀಡಾಗಿದೆ. 40 ಸಾವಿರಕ್ಕೂ ಮಿಕ್ಕಿ ಬಾಳೆಗಿಡ ಹಾಗೂ 1 ಸಾವಿರಕ್ಕೂ ಮಿಕ್ಕಿ ರಬ್ಬರ್ ಗಿಡಗಳು ಮುರಿದು ಬಿದ್ದಿವೆ. 4ಲಕ್ಷ ರೂ.ಗೂ ಅಧಿಕ ನಷ್ಟ ಅಂದಾಜಿಸಲಾಗಿದೆ. 

ಶಾಸಕ ಭೇಟಿ: ಕೃಷಿ ಹಾನಿಗೊಂಡಿರುವ ಪ್ರದೇಶಕ್ಕೆ ಶುಕ್ರವಾರ ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭ ನಷ್ಟ ಕಂಡುಕೊಂಡಿರುವ ರೈತರು ಬೈಂದೂರು ಕಂದಾಯ ಇಲಾಖಾಧಿಕಾರಿಗಳು ತಮ್ಮ ಸಂಕಷ್ಟಕ್ಕೆ ಸ್ಪಂದಿಸಿಲ್ಲ ಎಂದು ದೂರಿದರು. 

ಗಾಳಿ ಮಳೆಯ ಅಬ್ಬರಕ್ಕೆ ಕಷಿ ಹಾನಿಗೀಡಾದ ಬಗ್ಗೆ ಮಾಹಿತಿ ನೀಡಲಾಗಿದ್ದರು ಅಧಿಕಾರಿಗಳು ಪರಿಶೀಲನೆ ಕಾರ್ಯ ನಡೆಸಿಲ್ಲ ಎಂದು ತಿಳಿಸಿದರು. ರೈತರ ಅಹವಾಲು ಸ್ವೀಕರಿಸಿದ ಶಾಸಕರು ತಕ್ಷಣ ಕುಂದಾಪುರ ಸಹಾಯಕ ಕಮಿಷನರ್‌ಗೆ ವರದಿ ಸಲ್ಲಿಸಿ ಮುಂದಿನ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿಕೊಂಡರು. ತಾಲೂಕು ಪಂಚಾಯಿತಿ ಸದಸ್ಯ ರಾಜು ಪೂಜಾರಿ, ಸ್ಥಳೀಯ ಮುಖಂಡರು ಈ ಸಂದರ್ಭ ಹಾಜರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com