ವಿದ್ಯುತ್ ಉಪ ಕೇಂದ್ರದ ಕಾರ್ಯಾರಂಭಕ್ಕೆ ಕೆಸಿಡಿಸಿ ಆಕ್ಷೇಪ

ಗಂಗೊಳ್ಳಿ : ಗಂಗೊಳ್ಳಿ ಹಾಗೂ ಸುತ್ತಮುತ್ತಲಿನ ನಾಗರಿಕರ ದಶಕಗಳ ಬೇಡಿಕೆಯಾಗಿರುವ ಗಂಗೊಳ್ಳಿ 33 ಕೆ.ವಿ. ಉಪ ಕೇಂದ್ರದ ಕಾರ್ಯಾರಂಭಕ್ಕೆ ಮೆಸ್ಕಾಂ ಸಕಲ ಸಿದ್ಧತೆ ಮಾಡಿಕೊಂಡಿದ್ದು, ವಿದ್ಯುತ್ ಮಾರ್ಗ ಎಳೆಯಲು ಕರ್ನಾಟಕ ಗೇರು ಅಭಿವೃದ್ಧಿ ನಿಗಮ ಆಕ್ಷೇಪ ವ್ಯಕ್ತಪಡಿಸಿರುವುದು ಬೆಳಕಿಗೆ ಬಂದಿದೆ. 

ಮೆಸ್ಕಾಂ ಬೆಂದೂರು ಉಪವಿಭಾಗದ ವ್ಯಾಪ್ತಿಗೆ ಬರುವ ಗಂಗೊಳ್ಳಿಯಲ್ಲಿ 33 ಕೆ.ವಿ. ವಿದ್ಯುತ್ ಉಪಕೇಂದ್ರ ನಿರ್ಮಾಣಕ್ಕೆ 2011ರಲ್ಲಿ ಸರಕಾರ ಹಸಿರು ನಿಶಾನೆ ತೋರಿಸಿತ್ತು. ಆ ಬಳಿಕ ಗಂಗೊಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಲ್‌ಗಂಗೊಳ್ಳಿ ಪ್ರದೇಶದಲ್ಲಿ ಮೆಸ್ಕಾಂ ಇಲಾಖೆಗೆ ಸೇರಿದ ಸ್ಥಳದಲ್ಲಿ ಉಪ ವಿದ್ಯುತ್ ಕೇಂದ್ರ ನಿರ್ಮಾಣ ಕಾರ್ಯ ಆರಂಭಗೊಂಡು ಇದೀಗ ಬಹುತೇಕ ಪೂರ್ಣಗೊಂಡಿದೆ. ನೂತನ ಉಪಕೇಂದ್ರದಲ್ಲಿ ಎಲ್ಲ ವಿದ್ಯುತ್ ಉಪಕರಣ ಗಳ ಜೋಡಣೆ ಸಹಿತ ಶೇ.90 ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಆದರೆ ಕರ್ನಾಟಕ ಗೇರು ಅಭಿವೃದ್ಧಿ ನಿಗಮ ವಿದ್ಯುತ್ ಮಾರ್ಗ ನಿರ್ಮಾಣದ ವಿಚಾರ ದಲ್ಲಿ ಹೊಸ ಆಕ್ಷೇಪ ತೆಗೆದಿರುವುದರಿಂದ ಉಪ ಕೇಂದ್ರದ ಕಾರ್ಯಾರಂಭ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ. 

ಗಂಗೊಳ್ಳಿ ಉಪ ವಿದ್ಯುತ್ ಕೇಂದ್ರದ ವಿದ್ಯುತ್ ಮಾರ್ಗವು ಗುಜ್ಜಾಡಿ ಹಾಗೂ ಹೊಸಾಡು ಗ್ರಾಮದ ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಸ್ಥಳದ ಮಧ್ಯದಲ್ಲಿ ಹಾದು ಹೋಗಲಿರುವುದರಿಂದ ಕೆಸಿಡಿಸಿ ವಿದ್ಯುತ್ ಮಾರ್ಗ ನಿರ್ಮಾಣ ಮಾಡದಂತೆ ಮೆಸ್ಕಾಂ ತಡೆಯೊಡ್ಡಿತ್ತು. ತಮ್ಮ ಇಲಾಖೆಯ ಸ್ಥಳದ ಮೂಲಕ ವಿದ್ಯುತ್ ಮಾರ್ಗ ನಿರ್ಮಾಣ ಮಾಡಬೇಕಾದರೆ 67 ಲಕ್ಷ ರೂ. ಜಮೆ ಮಾಡುವಂತೆ ಕೆಸಿಡಿಸಿ ಮೆಸ್ಕಾಂಗೆ ಬೇಡಿಕೆ ಇಟ್ಟಿತ್ತು. ಬಳಿಕ ಸುಮಾರು 11 ಲಕ್ಷ ರೂ. ಪಾವತಿಸುವ ಬಗ್ಗೆ ಕೆಸಿಡಿಸಿ ಹಾಗೂ ಮೆಸ್ಕಾಂ ನಡುವೆ ಒಪ್ಪಂದ ನಡೆದಿತ್ತು. ಅಲ್ಲದೆ 11 ಲಕ್ಷ ರೂ.ವನ್ನು ಮೆಸ್ಕಾಂ ಈಗಾ ಗಲೇ ಕೆಸಿಡಿಸಿಗೆ ಪಾವತಿಸಿದೆ. ಆದರೆ ಇದೀಗ ಕೆಸಿಡಿಸಿ ಹೊಸ ತಗಾದೆ ತೆಗೆದಿದ್ದು ಇನ್ನೂ ಸುಮಾರು 22 ಲಕ್ಷ ರೂ. ಪಾವತಿಸುವಂತೆ ಹೊಸ ಬೇಡಿಕೆ ಇಟ್ಟಿದೆ. ಹೀಗಾಗಿ ಮೆಸ್ಕಾಂನ ಹಿರಿಯ ಅಧಿಕಾರಿಗಳಿಗೆ ದಿಕ್ಕು ತೋಚದಂ ತಾಗಿದ್ದು, ಗಂಗೊಳ್ಳಿ ಉಪ ವಿದ್ಯುತ್ ಕೇಂದ್ರದ ಕಾರ್ಯಾರಂಭಕ್ಕೆ ಎದುರಾಗಿರುವ ವಿಘ್ನ ನಿವಾರಿಸಲು ಪ್ರಯತ್ನ ಆರಂಭಿಸಿದ್ದಾರೆ. 

ಸ್ಥಳೀಯ ಉದ್ಯಮಿಗಳು ಸರಕಾರದ ಸಚಿವರ ಮೂಲಕ ಗಂಗೊಳ್ಳಿ ಉಪಕೇಂದ್ರದ ಬಗ್ಗೆ ಎದುರಾಗಿರುವ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸುತ್ತಿರು ವುದು ಹೊಸ ಭರವಸೆ ಮೂಡಿಸಿದ್ದರೂ, ಈವರೆಗೆ ಯಾವುದೇ ಪ್ರಗತಿ ಕಂಡಿಲ್ಲ ಎಂದು ನಾಗರಿಕರು ಆರೋಪಿಸಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com