2015ರಲ್ಲಿ ಚಿನ್ನದ ಬೆಲೆ ಕುಸಿತ

ನವದೆಹಲಿ: ಸದ್ಯ 30 ಸಾವಿರ ರೂ. ಆಸುಪಾಸಿನಲ್ಲಿರುವ ಹತ್ತು ಗ್ರಾಂ ಚಿನ್ನದ ಮೌಲ್ಯ ಮುಂದಿನ ವರ್ಷ 25,500 ರೂ.ಗೆ ಕುಸಿಯುವ ಸಾಧ್ಯತೆ ಇದೆ ಎಂದು ಫಿಚ್‌ ಸಮೂಹ ಕಂಪನಿಗೆ ಸೇರಿದ ಇಂಡಿಯಾ ರೇಟಿಂಗ್ಸ್‌ ಅಂಡ್‌ ರೀಸರ್ಚ್‌  ಹೇಳಿದೆ.

ಅಸಾಂಪ್ರದಾಯಿಕ ಹಣಕಾಸು ನೀತಿಯನ್ನು ಅಮೆರಿಕ ಕ್ರಮೇಣವಾಗಿ ಕೈಬಿಡುತ್ತಿರುವ ಫ‌ಲವಾಗಿ ಅಮೆರಿಕದಲ್ಲಿ ಬಡ್ಡಿ ದರ ಏರಿಕೆ ಕಾಣಲಿದೆ. ಇದರಿಂದಾಗಿ ಚಿನ್ನದ ಮೇಲಿನ ಹೂಡಿಕೆ ಕುಸಿದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಇಳಿಯಲಿದೆ. ಸದ್ಯ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 78 ಸಾವಿರ ರೂ. ಸನಿಹದಲ್ಲಿರುವ ಪ್ರತಿ ಔನ್ಸ್‌ ಚಿನ್ನದ ಬೆಲೆ ಮುಂದಿನ ವರ್ಷ 68 ಸಾವಿರ ರೂ.ನಿಂದ 74 ಸಾವಿರ ರೂ.ಗೆ ಕುಸಿಯಲಿದೆ. ಆಗ ಭಾರತೀಯ ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ ಮೌಲ್ಯ 25,500 ರೂ.ನಿಂದ 27,500 ರೂ.ವರೆಗೆ ಇಳಿಕೆಯಾಗಲಿದೆ ಎಂದು ಇಂಡ್‌-ರಾ ಹೇಳಿದೆ.

ಅಮೆರಿಕ ಹಾಗೂ ಯೂರೋವಲಯದ ಜಿಡಿಪಿ ಚೇತರಿಕೆ ಕಂಡು ಬಲಗೊಳ್ಳುತ್ತಿರುವುದರಿಂದಾಗಿ ವಿಶ್ವದ ಇತರೆ ಕರೆನ್ಸಿಗಳ ಎದುರು ಅಮೆರಿಕನ್‌ ಡಾಲರ್‌ ಬಲಶಾಲಿಯಾಗಲಿದೆ ಎಂದೂ ತಿಳಿಸಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com