ತಾಲೂಕಿನಾದ್ಯಂತ ದಿನವಿಡಿ ಅಬ್ಬರಿಸಿದ ಮಳೆ

ಕುಂದಾಪುರ: ಗುರುವಾರ ಕುಂದಾಪುರ, ಬೈಂದೂರು ಸೇರಿನಂತೆ ತಾಲೂಕಿನಾದ್ಯಂತ ಭಾರಿ ಮಳೆಯಾಗಿದ್ದು ಕುಂದಾಪುರ ನಗರ, ಕೋಟೇಶ್ವರ, ಬೀಜಾಡಿ, ಬೈಂದೂರು ಕೆಸರಿನಿಂದ ರಾಡಿ ಎದ್ದಿದೆ. ಬುಧವಾರ ರಾತ್ರಿಯಿಂದ ಮಳೆ ಅಬ್ಬರ ಕಾಣಿಸಿಕೊಂಡಿದ್ದು ಇಂದು ಕೂಡ ಯಥಾಸ್ಥಿತಿ ಕಾಯ್ದುಕೊಂಡಿದೆ. ಬೆಳಗ್ಗಿನಿಂದ ಮಧ್ಯಾಹ್ನ ತನಕ ಗಾಳಿ ಸಹಿತ ಒಂದೇ ಸವನೆ ಮಳೆ ಸುರಿದಿದ್ದು ಅರೆಬರೆ ಚತುಷ್ಪಥ ಕಾಮಗಾರಿ ಹಿನ್ನೆಲೆಯಲ್ಲಿ ಹೆದ್ದಾರಿ ಇಕ್ಕೆಲಗಳು ರಾಡಿ ಎದ್ದಿವೆ. 

ಕೋಟೇಶ್ವರ ಬೈಪಾಸ್ ಜಂಕ್ಷನ್‌ನಲ್ಲಿ ನೀರು ತುಂಬಿಕೊಂಡಿದ್ದು ವಾಹನಗಳು ಹುಗಿದು ಬಿದ್ದಿವೆ. ಬೀಜಾಡಿ ವೈಜಂಕ್ಷನ್, ಕೆನರಾ ಬ್ಯಾಂಕ್ ಎದುರು ಹೆದ್ದಾರಿಯಲ್ಲಿ ನೀರು ತುಂಬಿಕೊಂಡಿದ್ದು ತೊಂದರೆ ಎದುರಾಗಿದೆ. ಕೆಲವು ದಿನಗಳಿಂದ ಲಘುವಾಗಿ ಬಂದುಹೋಗುತ್ತಿದ್ದ ಮಳೆ ಅಬ್ಬರ ಕಂಡುಕೊಂಡಿದ್ದು ಮುಂಗಾರಿನ ವಾತಾವರಣ ಸಷ್ಟಿಸಿದೆ. ಜನರು ಮಳೆಯನ್ನು ಕಂಡು ಸಂಭ್ರಮಿಸಿದರು. ಹಲವರು ಅಬ್ಬರದ ಮಳೆಯಲ್ಲಿ ನೆನೆದು ಖುಷಿ ಪಟ್ಟರು. ಕೊಡೆ, ರೈನ್‌ಕೋಟ್‌ಗಳು ಮಳೆಯನ್ನು ಸ್ವಾಗತಿಸಲು ಮುಂದಾದವು. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com