‘ಕುಂದಾಪುರ 101 ಗ್ರಾಮಗಳು’ ಕೃತಿ ಬಿಡುಗಡೆ

ಕುಂದಾಪುರ: ನಮ್ಮನ್ನು ಆಳುತ್ತಿದ್ದ ವರ್ಗ ಕಾಲ ಕಾಲಕ್ಕೆ ತಮ್ಮ ಹಿತಾಸಕ್ತಿಗಳಿಗಾಗಿ ಹಾಗೂ ಆಳುತ್ತಿದ್ದ ಅರಸರ ವೈಭವಗಳನ್ನು ಹೇಳಿಕೊಳ್ಳಲು ರೂಪಿಸಿರುವ ಶಾಸನಗಳು ದಾಖಲೆಗಳಾಗಿ ಉಳಿಯುತ್ತದೆ ಹೊರತು ಎಂದಿಗೂ ಜನ ಸಾಮಾನ್ಯರ ಬದುಕಿನ ಕನ್ನಡಿಯಾಗಲಿ ಅಥವಾ ಮಹತ್ವದ ಆಕರಗಳಾಗಲು ಸಾಧ್ಯವಿಲ್ಲ ಎಂದು ಸಾಹಿತಿ ಹಾಗೂ ಚಿಂತಕ ಪ್ರೊ.ಎ.ವಿ ನಾವಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
   ಇಲ್ಲಿನ ಜೂನಿಯರ್ ಕಾಲೇಜು ಆವರಣದಲ್ಲಿರುವ ಲಕ್ಷ್ಮೀ ನರಸಿಂಹ ರೋಟರಿ ಸಭಾಂಗಣದಲ್ಲಿ ಇತ್ತೀಚೆಗೆ ಕುಂದಪ್ರಭ ಟ್ರಸ್ಟ್ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ‘ಕುಂದಾಪುರ 101 ಗ್ರಾಮಗಳು’ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.
ಆರ್ಥಿಕವಾಗಿ ಬಲಯುತರಾ­ಗುವುದನ್ನೇ ಅಭಿವೃದ್ಧಿ  ಎಂದು ವ್ಯಾಖ್ಯಾನಿಸಲಾಗುತ್ತಿದೆ. ಆದರೆ ನಾವು ಸಾಂಸ್ಕೃತಿಕವಾಗಿ ಬಲಿತವಾಗದೆ ಇದ್ದರೆ ಅಭಿವೃದ್ಧಿ ಎನ್ನುವ ಮಾತುಗಳಿಗೆ ಅರ್ಥವೇ ಬರುವುದಿಲ್ಲ. 70ರ ದಶಕದಲ್ಲಿ ಇಂಥದ್ದೊಂದು ಕೃತಿಯ ರೂಪಣೆಯ ಬಗ್ಗೆ ಕಂಡ ಕನಸು ನಿಧಾನವಾಗಿ ನನಸಾಗುತ್ತಿದೆ ಎಂದು ಅಭಿನಂದಿಸಿದರು.
      ಕುಂಭಾಶಿ ಆನೆಗುಡ್ಡೆ ಸಿದ್ಧಿ­ವಿನಾಯಕ ದೇವಸ್ಥಾನದ ಆಡಳಿತ ಧರ್ಮದರ್ಶಿ ಕೆ. ಸೂರ್ಯ­ನಾರಾಯಣ ಕಾರ್ಯಕ್ರಮ ಉದ್ಘಾಟಿ­ಸಿದರು. ಬಸ್ರೂರು ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.
      ಪುರ­ಸಭೆಯ ಅಧ್ಯಕ್ಷೆ ಕಲಾವತಿ ಯು.ಎಸ್., ಉಪಾಧ್ಯಕ್ಷ ಕೆ.ನಾಗರಾಜ್‌ ಕಾಮಧೇನು, ಸಾಹಿತಿ ಎ.ಎಸ್.ಎನ್. ಹೆಬ್ಬಾರ್ ಅತಿಥಿ­ಗಳಾಗಿದ್ದರು.
ಕುಂದಪ್ರಭ ಟ್ರಸ್ಟ್ ಅಧ್ಯಕ್ಷ ಯು.ಎಸ್.ಶೆಣೈ ಸ್ವಾಗತಿಸಿದರು, ಶ್ರೀನಿವಾಸ ಶೇಟ್ ಪ್ರಾರ್ಥಿಸಿದರು, ವಿಶ್ವನಾಥ ಕರಬ ನಿರೂಪಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com