ಅಪಘಾತ ವಲಯಗಳ ಪರಿಶೀಲನೆ: ಸೂಕ್ತ ಮುನ್ನೆಚರಿಕೆಗೆ ಕ್ರಮ

ಕೋಟ: ಕುಂದಾಪುರದಿಂದ ಸುರತ್ಕಲ್‌ನವರೆಗೆ ಚತುಷಥ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಮಳೆಗಾಲ ಸಮೀಪಿಸುವುದರ ಜತೆಗೆ ಪ್ರತಿನಿತ್ಯ ಅಪಘಾತಗಳು ನಡೆಯುತ್ತಿರುವುದನ್ನು ಗಮನಿಸಿ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಜಿಲ್ಲಾ ರಸ್ತೆ ಸಾರಿಗೆ ಸಂಸ್ಥೆಯ ಅಧೀಕ್ಷಕರ ಸಮಕ್ಷಮದಲ್ಲಿ ಬ್ರಹ್ಮಾವರ, ಸಾಸ್ತಾನ, ಸಾಲಿಗ್ರಾಮ, ಕೋಟ, ತೆಕ್ಕಟ್ಟೆ ಮುಂತಾದ ಭಾಗಗಳಲ್ಲಿ ಶನಿವಾರ ಸ್ಥಳ ಸಮೀಕ್ಷೆ ನಡೆಸಲಾಯಿತು. 

ಚರ್ತುಷ್ಪಥ ಕಾಮಗಾರಿ ನಡೆಯುತ್ತಿರುವ ಪ್ರದೇಶದಲ್ಲಿನ ಅಪಘಾತ ವಲಯಗಳನ್ನು ಪರಿಶೀಲಿಸಿ ಸೂಕ್ತ ಮುನ್ನೆಚರಿಕೆ ಕ್ರಮಕೈಗೊಳ್ಳುವಂತೆ ನವಯುಗ ಕಂಪನಿಯ ಅಧಿಕಾರಿಗಳಿಗೆ ಸೂಚಿಸಲಾಯಿತು. 

ಉಡುಪಿ ಡಿವೈಎಸ್‌ಪಿ ಡಾ. ಪ್ರಭುದೇವ ಮಾನೆ, ಉಡುಪಿ ರಸ್ತೆ ಸಾರಿಗೆ ಸಂಸ್ಥೆಯ ಅಧೀಕ್ಷಕ ಅರುಣ್ ಸಿಂಗ್, ಬ್ರಹ್ಮಾವರ ವೃತ್ತ ನಿರೀಕ್ಷಕ ಅರುಣ್ ಬಿ. ನಾಯಕ್, ಕೋಟ ಪೊಲೀಸ್ ಉಪನಿರೀಕ್ಷಕ ಕೆ.ಆರ್. ನಾಯಕ್, ನವಯುಗ ಕಂಪನಿಯ ಮುಖ್ಯ ಅಭಿಯಂತರ ಅಶೋಕ್ ಉಪಸ್ಥಿತರಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com