ರೈತರಿಗೆ 3 ಲಕ್ಷ ರೂ.ವರೆಗೆ ಬಡ್ಡಿ ರಹಿತ ಸಾಲ

ಬೆಂಗಳೂರು: ಬಜೆಟ್‌ನಲ್ಲಿ ಘೋಷಿಸಲಾಗಿರುವ ಶೂನ್ಯ ಬಡ್ಡಿ ದರದಲ್ಲಿ 3 ಲಕ್ಷ ರೂ. ವರೆಗಿನ ಕೃಷಿ ಸಾಲ ವಿತರಿಸಲು ರಾಜ್ಯ ಸರಕಾರ ಸಿದ್ಧತೆ ಮಾಡಿಕೊಂಡಿದೆ.

ರಾಜ್ಯ ಸರ್ಕಾರ ಈ ಬಾರಿ 8,500 ಕೋಟಿ ರೂ. ಸಾಲ ನೀಡುವ ಗುರಿ ಹೊಂದಿದ್ದು, ರಾಜ್ಯದ 25 ಲಕ್ಷ ರೈತರಿಗೆ ಇದರಿಂದ ಉಪಯೋಗವಾಗಲಿದೆ. .

ಸಹಕಾರ ಸಚಿವ ಎಚ್‌.ಎಸ್‌. ಮಹದೇವಪ್ರಸಾದ್‌ ಮಾತನಾಡ ಮೇ 16ರಂದು ಲೋಕಸಭೆ ಚುನಾವಣೆ ಫ‌ಲಿತಾಂಶ ಪ್ರಕಟವಾದ ಅನಂತರ ನೀತಿ ಸಂಹಿತೆಯೂ ಮುಗಿಯಲಿದ್ದು ಸಾಲ ವಿತರಣೆ ಪ್ರಾರಂಭಿಸಲಾಗುವುದು ಎಂದು ಹೇಳಿದರು.

ಸಣ್ಣ ರೈತರಿ ಗೆ 3 ಲಕ್ಷ ರೂ.ವರೆಗೆ ಸಾಲ ದೊರೆಯುವುದಿಲ್ಲವಾದರೂಕಾಫಿ ಪ್ಲಾಂಟರ್  ಸೇರಿ ಮಲೆನಾಡು ಭಾಗದ ದೊಡ್ಡ ಹಿಡುವಳಿ ದಾರರಿಗೆ ಸಾಲದ ಉಪಯೋಗವಾಗಲಿದೆ ಎಂದು ತಿಳಿಸಿದರು.

ಶೂನ್ಯ ಬಡ್ಡಿದರದ ಸಾಲದಿಂದ ರಾಜ್ಯ ಸರ ಕಾರಕ್ಕೆ 850 ಕೋಟಿ ರೂ. ಹೊರೆ ಬೀಳಲಿದೆ. ರೈತಾಪಿ ವರ್ಗಕ್ಕೆ ಅನುಕೂಲವಾಗುವ ಯೋಜನೆಯಾದ್ದರಿಂದ ಹೊರೆಯಾದರೂ ಭರಿಸಲಾಗುತ್ತಿದೆ. ಪ್ರತಿ ವರ್ಷ 1,000 ಕೋಟಿ ರೂ. ಸಾಲದ ಮೊತ್ತ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದವರು ಹೇಳಿದರು.

ಸಾಲ ನೀಡುವಾಗ ರೈತರು ಹೊಂದಿರುವ ಕೃಷಿ ಭೂಮಿ ಪ್ರಮಾಣ, ಜಮೀನಿನ ಆಧಾರದ ಮೇಲೆ ರೈತರಿಗೆ ಎಷ್ಟು ಸಾಲದ ಅಗತ್ಯವಿದೆ, ಯಾವ ಬೆಳೆ ಬೆಳೆಯುತ್ತಾರೆ ಎಂಬ ಅಂಶಗಳನ್ನು ಪರಿಗಣಿಸಿ ಸಾಲ ವಿತರಿಸಲಾಗುವುದು ಎಂದು ತಿಳಿಸಿದರು.

Loan upto 3Lacks to the agriculturist with no interest
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com