ಮಲ್ಪೆ ಬಂದರು ರಕ್ಷಣಾ ಸಿಬ್ಬಂದಿಗೆ ಆಹ್ವಾನ

ಮಲ್ಪೆ: ಇಲ್ಲಿನ ಮಲ್ಪೆ ಮೀನುಗಾರಿಕಾ ಬಂದರಿನ ಹರಾಜು ಪ್ರಾಂಗಣದಲ್ಲಿ ಶಿಸ್ತು ಕಾಪಾಡುವುದು, ಲಂಗರು ಹಾಕಿದ ದೋಣಿಗಳನ್ನು ಕಾಯುವುದು, ಸಂಚಾರ ದಟ್ಟಣೆ ನಿಯಂತ್ರಿಸುವುದು, ವಾಹನಗಳ ನಿಲುಗಡೆ ಇನ್ನಿತರ ಅವಶ್ಯಕ ಕಾರ್ಯಗಳನ್ನು ಸೆಕ್ಯುರಿಟಿ ಏಜೆನ್ಸಿ ಮೂಲಕ ಜನರನ್ನು ನೇಮಿಸಿಕೊಂಡು ಕೆಲಸ ಮಾಡಲು ಆಸಕ್ತ ಸಂಘ, ಸಂಸ್ಥೆಗಳಿಂದ ಟೆಂಡರ್ ಕರೆಯಲಾಗಿದೆ. ಟೆಂಡರ್ ಅರ್ಜಿಗಳನ್ನು ಮೀನುಗಾರಿಕಾ ಇಲಾಖೆಯಿಂದ ಕಚೇರಿ ವೇಳೆಯಲ್ಲಿ ಪಡೆಯಬಹುದಾಗಿದೆ. ಮೇ 16ರ ಸಂಜೆ 4 ಗಂಟೆಯೊಳಗೆ ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕು. ಮೀನುಗಾರಿಕೆ ಸಹಾಯಕ ನಿರ್ದೇಶಕರು, ಮಲ್ಪೆ ಮೀನುಗಾರಿಕಾ ಬಂದರು, ಮಲ್ಪೆ ಇವರನ್ನು ಸಂಪರ್ಕಿಸಬಹುದು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com