ಕಾರ್ಮಿಕರು ಸಂಕಷ್ಟದ ತೆಕ್ಕೆಗೆ ಜಾರುತ್ತಿದ್ದಾರೆ: ಮಹಾಂತೇಶ್

ಕುಂದಾಪುರ: ಅಮೆರಿಕದ ಚಿಕಾಗೋ ನಗರದಲ್ಲಿ 1890ರಲ್ಲಿ ಕಾರ್ಮಿಕ ಮುಖಂಡರು ನಡೆಸಿದ ತ್ಯಾಗ ಬಲಿದಾನದ ಸಂಕೇತವಾಗಿ ಮೇ ದಿನಾಚರಣೆ ಆಚರಿಸಲಾಗುತ್ತಿದೆ. 128 ವರ್ಷಗಳ ಬಳಿಕ ಅಂತಹುದೇ ಒಂದು ವಿಪ್ಲವ ಜಗತ್ತಿನಲ್ಲಿ ಕಾಣಿಸಿಕೊಳ್ಳುತ್ತಿದೆ. ಜಗತ್ತಿನ ಕಾರ್ಮಿಕರು ಸಂಕಷ್ಟದ ತೆಕ್ಕೆಗೆ ಜಾರುತ್ತಿದ್ದಾರೆ. ಬಂಡವಾಳಶಾಹಿಗಳ ಪಟ್ಟು ಬಿಗಿಗೊಳ್ಳುತ್ತಿದೆ. ದೇಶದ ಕಾರ್ಮಿಕ ವರ್ಗ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಸಿಐಟಿಯು ಕರ್ನಾಟಕ ರಾಜ್ಯ ಸಮಿತಿ ಕಾರ್ಯದರ್ಶಿ ಕೆ. ಮಹಾಂತೇಶ್ ಹೇಳಿದರು. 

ಇಲ್ಲಿನ ನೆಹರೂ ಮೈದಾನದಲ್ಲಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ಕುಂದಾಪುರ ತಾಲೂಕು ಸಮಿತಿ ಮೇ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಬಹತ್ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು. 

ದೇಶದಲ್ಲಿ ಕಾರ್ಮಿಕರ ಸ್ಥಿತಿ ಹದಗೆಡುತ್ತಿದೆ. 8 ತಾಸು ಕೆಲಸದ ಅವಧಿಯನ್ನು ವಿಸ್ತರಣೆಗೊಳಿಸುವ ಮಾಲೀಕ ವರ್ಗ, ಆಡಳಿತ ವ್ಯವಸ್ಥೆ 12ಗಂಟೆಗೆ ವಿಸ್ತರಿಸಿವೆ. ಕಷಿ ಕೂಲಿಕಾರ್ಮಿಕರು ಉದ್ಯೋಗ ವಿಲ್ಲದೆ ಪರದಾಡುತ್ತಿದ್ದಾರೆ. 3ಲಕ್ಷಕ್ಕೂ ಮಿಕ್ಕಿ ರೆತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕಾರ್ಮಿಕರು ಎಚ್ಚರ ವಹಿಸಬೇಕಾಗಿದೆ ಎಂದು ಅವರು ದೇಶದ ಹಿತ, ಕಾರ್ಮಿಕರ, ದುಡಿಯುವ ವರ್ಗದ ಹಿತಕಾಯುವ ಸಾಮರ್ಥ್ಯ ಇರುವುದು ಕಾರ್ಮಿಕ ವರ್ಗದ ಎಡಪಕ್ಷಗಳಿಗೆ ಮಾತ್ರ ಎಂದು ಅವರು ಪ್ರತಿಪಾದಿಸಿದರು. 

ಸಿಐಟಿಯು ಕರ್ನಾಟಕ ರಾಜ್ಯ ಸಮಿತಿ ಉಪಾಧ್ಯಕ್ಷ ಕೆ.ಶಂಕರ್, ಸಿಐಟಿಯು ಉಡುಪಿ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಬಾಲಕಷ್ಣ ಶೆಟ್ಟಿ, ಸಿಐಟಿಯು ಕುಂದಾಪುರ ತಾಲೂಕು ಸಮಿತಿ ಅಧ್ಯಕ್ಷ ಎಚ್.ನರಸಿಂಹ, ಪ್ರಧಾನ ಕಾರ್ಯದರ್ಶಿ ಸುರೇಶ ಕಲ್ಲಾಗರ, ಉಡುಪಿ ಜಿಲ್ಲಾ ಹೆಂಚು ಕಾರ್ಮಿಕರ ಸಂಘದ ಮುಖಂಡ ವಿ.ನರಸಿಂಹ, ಕಷಿ ಕೂಲಿಕಾರರ ಸಂಘದ ಅಧ್ಯಕ್ಷ ಯು.ದಾಸ ಭಂಡಾರಿ, ಕಾರ್ಮಿಕ ಮುಖಂಡರಾದ ಮಹಾಬಲ ವಡೇರಹೋಬಳಿ, ರಾಜೀವ ಪಡುಕೋಣೆ, ವೆಂಕಟೇಶ್ ಕೋಣಿ, ಬಲ್ಕೀಸ್ ಭಾನು, ನಾಗರತ್ನ ನಾಡಾ, ಕುಮಾರ್ ಉಪಸ್ಥಿತರಿದ್ದರು. 

ಕೆಂಪು ಮೆರವಣಿಗೆ: ಬಹಿರಂಗ ಸಾರ್ವಜನಿಕ ಸಭೆಗೆ ಮೊದಲು ಕುಂದಾಪುರ ನಗರದಲ್ಲಿ 1 ತಾಸಿಗೂ ಅಧಿಕ ಕಾಲ ಕಾರ್ಮಿಕರ ಆಕರ್ಷಕ ಮೆರವಣಿಗೆ ನಡೆಯಿತು. ಎಲ್ಲೆಡೆ ಕೆಂಬಾವುಟ, ಕೆಂಪು ವಸ್ತ್ರ ರಾರಾಜಿಸಿದವು. ಹೆಂಚು ಕಾರ್ಮಿಕರು, ಕಟ್ಟಡ ಕಾರ್ಮಿಕರು, ಬೀಡಿ ಕಾರ್ಮಿಕರು, ಆಟೋರಿಕ್ಷಾ ಚಾಲಕರು, ಅಂಗನವಾಡಿ ನೌಕರರು, ಅಕ್ಷರದಾಸೋಹ ನೌಕರರು, ಆಶಾ ಕಾರ್ಯಕರ್ತೆಯರು, ಕೃಷಿ ಕೂಲಿಕಾರರು, ಪಿಂಚಣಿದಾರರ ಸಂಘದ ಪದಾಧಿಕಾರಿಗಳು ಸೇರಿದಂತೆ ಸಹಸ್ರಾರು ಕಾರ್ಮಿಕರು ಮೆರವಣಿಗೆ ಪಾಲ್ಗೊಂಡಿದ್ದರು. ಬೃಹತ್ ಬೈಕ್ ಮತ್ತು ಆಟೋರಿಕ್ಷಾ ರ್ಯಾಲಿ ನಡೆಯಿತು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com