ಆಪ್ತ ಸಿಬ್ಬಂದಿಗಳಿಗೆ ವಿದಾಯ ಹೇಳಿದ ಪ್ರಧಾನಿ

ಹೊಸದಿಲ್ಲಿ : ಯುಪಿಎ ಸರಕಾರದಲ್ಲಿ ಹತ್ತು ವರ್ಷಗಳ ಅಧಿಕಾರದಿಂದ ನಿರ್ಗಮಿಸಲು ತಯಾರಾಗಿರುವ ಪ್ರಧಾನಮಂತ್ರಿ ಮನಮೋಹನ್‌ ಸಿಂಗ್‌ ಇಂದು  ಸೌತ್‌ ಬ್ಲಾಕ್‌ನ ತನ್ನ ಆಪ್ತ ಸಿಬಂದಿಗಳಿಗೆ ತನಗೆ ಸಹಕರಿಸಿದ್ದಕ್ಕೆ ಧನ್ಯವಾದ ಹೇಳಿ ವಿದಾಯ ಕೋರಿದರು.

110 ಸಿಬಂದಿಗಳನ್ನು ಸ್ವತಃಹ ಭೇಟಿಯಾದ ಸಿಂಗ್‌ ಎಲ್ಲರಿಗೂ ಧನ್ಯವಾದ ಹೇಳಿ ವಿದಾಯ ಕೋರಿದರು. 2004ರಿಂದೀಚೆಗೆ 10 ವರ್ಷ ತನಗೆ ಎಲ್ಲ ರೀತಿಯ ಸಹಕಾರ ನೀಡಿದ ಸಿಬಂದಿಗಳ ಕಾರ್ಯದಕ್ಷತೆಯನ್ನು ಅವರು ಈ ಸಂದರ್ಭದಲ್ಲಿ ಸ್ಮರಿಸಿದರು. ಸಿಬ್ಬಂದಿಗಳಿಗೆ ವಿದಾಯ ಕೋರಲು ಅವರು ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ಬಂದಾಗ 400 ಸಿಬ್ಬಂದಿಗಳು ಸೌತ್‌ ಬ್ಲಾಕ್‌ನ ಪಡಸಾಲೆಯಲ್ಲಿ ಎದುರ್ಗೊಂಡು ಸ್ವಾಗತಿಸಿದರು.

ಶನಿವಾರ ಕೊನೆಯ ಸಂಪುಟ ಸಭೆ
      ಶನಿವಾರ ಮನಮೋಹನ್‌ ಸಿಂಗ್‌ ತನ್ನ ಕೊನೆಯ ಸಂಪುಟ ಸಭೆ ನಡೆಸಲಿದ್ದಾರೆ. ಅನಂತರ ರಾಷ್ಟ್ರಪತಿ ಭವನಕ್ಕೆ ತೆರಳಿ ಪ್ರಣವ್‌ ಮುಖರ್ಜಿಯನ್ನು ಭೇಟಿ ಮಾಡುತ್ತಾರೆ. ಅಲ್ಲಿಂದ ಹಿಂದಿರುಗಿದ ಬಳಿಕ ದೇಶವನ್ನುದ್ದೇಶಿಸಿ ವಿದಾಯ ಭಾಷಣ ಮಾಡಲಿದ್ದಾರೆ.
       ಅದೇ ದಿನ ಅವರು ಸಂಪುಟ ಸಹೋದ್ಯೋಗಿಗಳಿಗೆ ಚಹಾ ಕೂಟ ನೀಡಲಿದ್ದಾರೆ. ರಾತ್ರಿ ರಾಷ್ಟ್ರಪತಿ ಎಲ್ಲರಿಗೂ ಭೋಜನ ಕೂಟ ಏರ್ಪಡಿಸಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com