ಕೋಲಾ, ಪೆಪ್ಸಿ ಉತ್ಪನ್ನಗಳಲ್ಲಿ ಇನ್ನು ಹಾನಿಕಾರಕ ಅಂಶವಿರಲ್ಲ

ನ್ಯೂಯಾರ್ಕ್‌: ಕೊಕಾಕೋಲಾ, ಪೆಪ್ಸಿ ಕೋ. ಕಂಪನಿಗಳು ತಮ್ಮ ಉತ್ಪಾದನೆಯ ಪಾನೀಯಗಳಲ್ಲಿ ಹಾನಿಕಾರಕ, ವಿವಾದಿತ ಮಿಶ್ರಣವನ್ನು ಸೇರಿಸುವುದನ್ನು ಕೈಬಿಟ್ಟಿವೆ.

ಬ್ರಾಮಿನೇಟೆಡ್‌ ವೆಜಿಟೇಬಲ್‌ ಆಯಿಲ್‌ (ಬಿವಿಓ) (ಪಾನೀಯಗಳಲ್ಲಿ ಸ್ವಾದಭರಿತ ಅಂಶಗಳ ಮಿಶ್ರಣಕ್ಕೆ ಸಂಯುಕ್ತವಾಗಿ ಬೆರೆಸುವ ಪದಾರ್ಥ)ವನ್ನು ಈ ಕಂಪನಿಗಳು ತಮ್ಮ ಉತ್ಪನ್ನಗಳಾದ, ಪ್ರಮುಖವಾಗಿ ಹಣ್ಣಿನ ಸ್ವಾದ ಹೊಂದಿದವೂ ಸೇರಿದಂತೆ ಮೌಂಟೇನ್‌ ಡ್ನೂ, ಫಾಂಟಾ, ಪವರೇಡ್‌ ಇತ್ಯಾದಿ ಪಾನೀಯಗಳಲ್ಲಿ ಬಳಸುತ್ತಿದ್ದವು. 

ಇದಕ್ಕೆ ಜನ ಸಮುದಾಯದಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಹಾನಿಕಾರಕ ರಾಸಾಯನಿಕ ಅಂಶಗಳಾದ್ದರಿಂದ ಅವುಗಳನ್ನು ತೆಗೆದುಹಾಕಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ಅಲ್ಲದೇ ಯುರೋಪಿಯನ್‌ ಒಕ್ಕೂಟ ಮತ್ತು ಜಪಾನ್‌ನಲ್ಲಿ ಇದರ ಬಳಕೆಗೆ ಪೆಪ್ಸಿ ಮತ್ತು ಕೊಕಾಕೋಲಕ್ಕೆ ಅನುಮತಿ ಇಲ್ಲ ಎಂದು ಚೇಂಜ್‌ ಡಾಟ್‌ ಆರ್ಗ್‌ನ ಮಿಸ್ಸೆಸ್ಸೆಪ್ಪಿ ಮೂಲದ 17 ವರ್ಷದ ಸರಾ ಕಾವನಾಗ್‌ ಕೋರ್ಟ್‌ ಮೆಟ್ಟಿಲೇರಿದ್ದರು.

ಆದಾಗ್ಯೂ ತಮ್ಮ ಪಾನೀಯಗಳು, ಸಂಪೂರ್ಣ ಸುರಕ್ಷತಾ ಮಾನದಂಡಗಳನ್ನು ಹೊಂದಿದ್ದು, ಯಾವುದೇ ಹಾನಿಕಾರಕ ಮಿಶ್ರಣ ಹೊಂದಿಲ್ಲ ಎಂದು ಕಂಪನಿಗಳು ವಾದಿಸಿದ್ದವು.

ಆದರೆ ಗ್ರಾಹಕರು ಪಾನೀಯ ಇತ್ಯಾದಿಗಳ ಪ್ಯಾಕಿಂಗ್‌ನಲ್ಲಿ ಈ ಬಗ್ಗೆ ಭಾರೀ ಎಚ್ಚರಿಕೆ ವಹಿಸಿ ಅಂತಹ ವಸ್ತುಗಳ ಖರೀದಿಯೇ ಕೈಬಿಟ್ಟಿದ್ದರಿಂದ ಕೊಕಾಕೋಲಾ ಮತ್ತು ಪೆಪ್ಸಿ ಸೇರಿದಂತೆ ಕಂಪನಿಗಳೂ ಕಂಪನಿಗಳು ಹಾದಿಗೆ ಬಂದಿವೆ. ಪಾನೀಯ, ಆಹಾರಗಳ ಸ್ವಾದ ಮಿಶ್ರಣದ ವೇಳೆ ಬಿವಿಓ ಮಿಶ್ರಣವನ್ನು ಕೈಬಿಡಲು ನಿರ್ಧರಿಸಿವೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com