ಪ್ಲಾಸ್ಟಿಕ್‌ ನೋಟು ಚಲಾವಣೆಗೆ ಬರಲಿವೆ

ಶಿಮ್ಲಾ: ದೇಶದಲ್ಲಿ 2015ರಲ್ಲಿ ಪ್ಲಾಸ್ಟಿಕ್‌ ಕರೆನ್ಸಿ ನೋಟುಗಳನ್ನು ಬಳಕೆಗೆ ತರಲಾಗುವುದು ಎಂದು ಆರ್‌ಬಿಐ ಗವರ್ನರ್‌ ರಘುರಾಮ ರಾಜನ್‌ ತಿಳಿಸಿದ್ದಾರೆ.
    "ಪ್ಲಾಸ್ಟಿಕ್‌ ನೋಟುಗಳು ಬರಲಿವೆ. ಒಂದು ಶತಕೋಟಿ ನೋಟುಗಳಿಗೆ ಬಿಡ್‌ಗಳು ಬಂದಿವೆ.ಶಿಮ್ಲಾ ಸೇರಿ ಐದು ನಗರಗಳಲ್ಲಿ ಪ್ರಾಯೋಗಿಕವಾಗಿ ಪ್ಲಾಸ್ಟಿಕ್‌ ನೋಟುಗಳನ್ನು ಬಿಡುಗಡೆಗೊಳಿಸಲಾಗುವುದು.ಈ ಪ್ರಾಯೋಗಿಕ ಪರೀಕ್ಷೆಯ ಆಧಾರದಲ್ಲಿ 2015ರಲ್ಲಿ  ದೇಶಾದ್ಯಂತ ಪ್ಲಾಸ್ಟಿಕ್‌ ನೋಟುಗಳನ್ನು ಬಳಕೆಗೆ ತರಲಾಗುವುದು ಎಂದು ರಘುರಾಮ ರಾಜನ್‌ ಹೇಳಿದರು. 
   ಈ ವರ್ಷ ಫೆಬ್ರವರಿಯಲ್ಲೇ ಸರಕಾರ ಸಂಸತ್ತಿಗೆ 10 ರೂ. ಮುಖಬೆಲೆಯ ಒಂದು ಬಿಲಿಯ ಪ್ಲಾಸ್ಟಿಕ್‌ ನೋಟುಗಳನ್ನು ಪ್ರಾಯೋಗಿಕವಾಗಿ ದೇಶದ ಐದು ನಗರಗಳಲ್ಲಿ ಬಳಕೆಗೆ ತರಲಾಗುವುದು ಎಂದು ತಿಳಿಸಿತ್ತು. 
    ಈ ವರ್ಷ ದ್ವಿತೀಯಾರ್ಧದಲ್ಲಿ ಪ್ಲಾಸ್ಟಿಕ್‌ ನೋಟುಗಳ ಪ್ರಾಯೋಗಿಕ ಬಳಕೆಯನ್ನು ಆರಂಭಿಸಲಾಗುವುದು ಎಂದು ರಾಜನ್‌ ಹೇಳಿದರು
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com