ತಾಲೂಕಿನಾದ್ಯಂತ ಗುಡುಗು ಸಹಿತ ಮಳೆ

ಕುಂದಾಪುರ:  ತಾಲೂಕಿನ ಕೆಲವು ಕಡೆ ಗುಡುಗು ಸಹಿತವಾದ ಮಳೆಯಾಗಿದೆ. ಅಮಾಸೆಬೈಲು, ಶೇಡಿಮನೆ, ಹೊಸಂಗಡಿ, ಮಡಾಮಕ್ಕಿ, ಹಳ್ಳಿಹೊಳೆ, ಹೆಂಗವಳ್ಳಿ, ಶಿರೂರು, ಬೈಂದೂರು, ಗಂಗನಾಡು, ಯಡ್ತರೆ, ಉಪ್ಪುಂದಗಳಲ್ಲಿ ಮಿಂಚು ಗುಡುಗು ಸಹಿತವಾದ ಮಳೆಯಾಗಿದೆ. 

ಅಮಾಸೆಬೈಲು ಬಳಿಯ ಉಳ್ಳೂರು 74 ಗ್ರಾಮದ ಜಡ್ಡುವಿನಲ್ಲಿ ತಿಮ್ಮಪ್ಪ ಪೂಜಾರಿ ಅವರ ಮನೆಯ ಮೇಲೆ ಸಿಡೆಲರಗಿದ ಹಿನ್ನೆಲೆಯಲ್ಲಿ ಮನೆಗೆ ಹಾನಿಯಾಗಿರುವುದಲ್ಲದೇ ವಿದ್ಯುತ್‌ ಉಪಕರಣಗಳು, ಗೋಡೆ ಬಿರುಕು ಬಿಟ್ಟಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
  ಉಳಿದಂತೆ ಅಂಪಾರು, ಬಿದ್ಕಲ್‌ಕಟ್ಟೆ, ಶಂಕರನಾರಾಯಣ, ಕೊಲ್ಲೂರು, ಜಡ್ಕಲ್‌ ಮುದೂರು ಸಿದ್ದಾಪುರಗಳಲ್ಲಿ ತುಂತುರು ಮಳೆಯಾಗಿದೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com