ಸಮುದಾಯ ರಂಗರಂಗು ಬೇಸಿಗೆ ಶಿಬಿರ

ಕುಂದಾಪುರ: ಮಕ್ಕಳ ಬಾಲ್ಯವನ್ನು ಸುಂದರವಾಗಿಸುವುದರೊಂದಿಗೆ ಈ ವಯಸ್ಸಿನಲ್ಲಿ ಮಕ್ಕಳು ಕಂಡುಕೊಳ್ಳಬಹುದಾದ ರಂಗು ರಂಗಿನ ಲೋಕವನ್ನು ಅವರಿಗೆ ತಿಳಿಸುವುದರೊಂದಿಗೆ ಅವರ ಬಾಲ್ಯವನ್ನು ಸಂರಕ್ಷಿಸುವ ಉದ್ದೇಶದಿಂದ ಕುಂದಾಪುರದ ಸಮುದಾಯ ಸಂಘಟನೆ ಆಯೋಜಿಸಿದ್ದ ಮಕ್ಕಳ ಬೇಸಿಗೆ ಶಿಬಿರ ರಂಗರಂಗು ಹಲವು ವಿಭಿನ್ನತೆಗಳಿಂದ ಗಮನ ಸಳೆಯಿತು.

ಇಂದು ಮಕ್ಕಳು ಬಹುತೇಕ ಮೊಬೆ„ಲ್‌, ಇಂಟರ್ನೆಟ್‌, ಟಿವಿಗಳೊಂದಿಗೆ ತಮ್ಮ ಹೆಚ್ಚಿನ ಸಮಯವನ್ನು ಕಲೆಯುತ್ತಿದ್ದು, ಅವರೆಲ್ಲಾ ಪರಿಸರ, ಗಿಡಗಂಟಿ ಮರ, ಕೆರೆ, ಹಳ್ಳ ತೊರೆಗಳ ಸಂಬಂಧವನ್ನೇ ಕಳೆದುಕೊಂಡಿರುತ್ತಾರೆ. ಇಂದು ಗ್ರಾಮಾಂತರ ಮನೆಗಳನ್ನೂ ಸೇರಿಸಿದಂತೆ ಮಕ್ಕಳಿಗೆ ಮಣ್ಣು, ನೀರು, ಗಿಡಮರಗಳ ಜೊತೆ ಆಟ ವಾಡಲು ಸಾಧ್ಯವಾಗುತ್ತಾ ಇಲ್ಲ. ಮಕ್ಕಳ ಗುಂಪು ಚಟುವಟಿಕೆಗಳ ಸಂತಸದಿಮದ ಮಕ್ಕಳು ವಿಮುಖರಾಗುತ್ತಿರುವುದನ್ನು ನಾವು ಕಂಡುಕೊಂಡಿದ್ದೇವೆ. ಈ ನಿಟ್ಟಿನಲ್ಲಿ ಸಮುದಾಯ ಕುಂದಾಪುರ ಒಂದು ವಾರದ ತನಕ ಮಕ್ಕಳಿಗೆ ಈ ಎಲ್ಲಾ ಸಂಬಮಧಗಳನ್ನು ನೆನಪುಹಾಕುವ ಹಾಗೂ ಮೆಲುಕು ಹಾಕುವ ಚೇತೋಹಾರಿ ವಿಶೇಷ ಶಿಬಿರ ನಡೆಸುವುದರ ಮೂಲಕ ಕುಂದಾಪುರದ ಗಾಂಧಿ ಪಾರ್ಕು ಎಂಟು ದಿನಗಳ ಕಾಲ ರಂಗು ರಂಗಾಯಿತು.

ಇಲ್ಲಿ ಮಕ್ಕಳಿಗೆ ಪೂರ್ಣ ಸ್ವಾತಂತ್ರÂ ನೀಡಲಾಗಿತ್ತು. ಯಾವುದೇ ಆಟ, ಚಟುವಿಟಕೆಗಳಿಗೆ ಅವರಿಗೆ ನಿರ್ಬಂಧ ಹೇರದೇ ಅವರ ಚಾಕಚಕ್ಯತೆಗೆ ಪೂರ್ಣ ಬೆಂಬಲ ನೀಡಲಾಗಿತ್ತು. ಮಣ್ಣಿನ ಆಟ, ದೇಸಿ ಆಟ, ರೇಖಾ ಚಿತ್ರ, ಅಡುಗೆ , ಜಾನಪದ ಆಟಿಕೆಗಳು, ವಿಜ್ಞಾನ ಆಟಿಕೆಗಳು, ಕಾಗದ ಕಲೆ, ವಿಜ್ಞಾನ ಆಟಿಕೆ, ಮುಖವಾಡ ತಯಾರಿಕೆ ಹೀಗೆ ನುರಿತ ತಜ್ಞರಿಂದ ಮಕ್ಕಳ ಆಸಕ್ತಿಗೆ ಪೂರಕವಾದ ಚಟುಟವಿಟಕೆಗಳ ಬಗ್ಗೆ ತಿಳಿಹೇಳಲಾಯಿತು. .

ರಂಗರಂಗು ಒಂದು ಭಿನ್ನ ಪರಿಕಲ್ಪನೆಯ ರಜಾ ಮೇಳ. ವ್ಯವಹಾರೀಕೃತ ವ್ಯವಸ್ಥೆಯ ನಡುವೆ ನಡೆಯುವ ಬೇಸಿಗೆ ಶಿಬಿರಗಳಿಗಿಂತ ಇದು ಸಂಪೂರ್ಣ ಭಿನ್ನವಾಗಿತ್ತು. ಸರಕಾರಿ ಶಾಲೆಯ ಮಕ್ಕಳನ್ನೇ ಕೇಂದ್ರವಾಗಿಟ್ಟುಕೊಂಡು ಈ ಶಿಬಿರವನ್ನು ಆಯೋಜಿಸಿದ್ದರೂ ಆಂಗ್ಲಮಾಧ್ಯಮ ಶಾಲೆಯ ಮಕ್ಕಳು ಭಾಗವಹಿಸಿದ್ದರು. ಒಟ್ಟು 49 ವಿದ್ಯಾರ್ಥಿಗಳು ಭಾಗವಹಿಸಿದ್ದು, ಇದರಲ್ಲಿ 9 ಮಕ್ಕಳು ಟೆಂಟಿನಿಂದ ಬಂದ ಮಕ್ಕಳು ಭಾಗವಹಿಸಿದ್ದರು ಎನ್ನುವುದು ವಿಶೇಷವಾಗಿದೆ.

ಮಕ್ಕಳು ಅತ್ಯಂತ ಸಂತಸದಿಮದ ಈ ಶಿಬಿರದಲ್ಲಿ ಭಾಗವಹಿಸಿದ್ದರು. ಹೊಸ ಹೊಸ ಸ್ನೇಹಿತರ ಜೊತೆ ಪಾರ್ಕಿನ ಮರಗಿಡಗಳ ನಡುವೆ ಓಡಾಡಿದರು. ಸಮಾನ ವಯಸ್ಕ, ಮನಸ್ಕ ಮಕ್ಕಳ ಜೊತೆ ತಾರತಮ್ಯವಿಲ್ಲದೇ ನಲಿದಾಡಿದಾದರು.

ಯಾವುದೇ ಬಲವಂತಕ್ಕೆ ಅವಕಾಶಕೊಡದೇ ಮಕ್ಕಳ ಪರಿಕಲ್ಪನೆಗೆ ವಿಫುಲ ಅವಕಾಶಗಳನ್ನು ಕಲ್ಪಿಸಲಾಗಿದ್ಧ ಈ ಶಿಬಿರದಲ್ಲಿ ಭಾಗವಹಿಸಿದ್ದ ಮಕ್ಕಲು ಮಾತ್ರ ಬಾಲ್ಯದ ಸವಿಯನ್ನು ಶಿಬಿರದ ಮೂಲಕ ಉಂಡು ಸಂತಸಪಟ್ಟರೂ ಎಂದರೆ ತಪ್ಪಾಗಲಿಕ್ಕಿಲ್ಲ.

ಕೃಪೆ -ಉದಯ ಆಚಾರ್‌ ಸಾಸ್ತಾನ, ಉದಯವಾಣಿ 


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com