ಮೇ 17: 'ಸತ್ತವರ ನೆರಳು' ನಾಟಕದ 500ನೇ ಪ್ರದರ್ಶನ

ಬೆಂಗಳೂರು: ಬಿ.ವಿ.ಕಾರಂತ ನಿರ್ದೇಶನದ 'ಸತ್ತವರ ನೆರಳು' ನಾಟಕ ಮೇ 17ರಂದು 500ನೇ ಪ್ರದರ್ಶನ ಕಾಣಲಿದ್ದು, ರವೀಂದ್ರ ಕಲಾಕ್ಷೇತ್ರದ ಹಿಂಭಾಗದ ಸಂಸ ರಂಗಮಂದಿರದಲ್ಲಿ ಈ ಪ್ರದರ್ಶನ ನಡೆಯಲಿದೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆನಕ ನಾಟಕ ತಂಡದ ಮುಖ್ಯಸ್ಥ ಟಿ.ಎಸ್‌. ನಾಗಾಭರಣ, ನಿರ್ದೇಶಕ ಬಿ.ವಿ.ಕಾರಂತರೂ ಸೇರಿದಂತೆ ಈ ನಾಟಕದ ಮೊದಲ ಪ್ರದರ್ಶನದಲ್ಲಿದ್ದ ಶೇ.30 ರಷ್ಟು ಕಲಾವಿದರು ನಮ್ಮನ್ನಗಲಿದ್ದಾರೆ. ನಾಟಕದ 500ನೇ ಪ್ರದರ್ಶನವನ್ನು ನಿಧನರಾದವರಿಗೆ ಅರ್ಪಿಸಲಾಗುತ್ತಿದೆ ಎಂದರು.

500ನೇ ಪ್ರದರ್ಶನದಲ್ಲಿ ಮೊದಲ ಪ್ರದರ್ಶನದಲ್ಲಿ ಅಭಿನಯಿಸಿದವರ ನಾಲ್ಕನೇ ತಲೆಮಾರಿನವರು ನಟಿಸುತ್ತಿದ್ದಾರೆ. ಕಾರಂತರ ಕಲ್ಪನಾಶಕ್ತಿ, ಸೃಜನಶೀಲತೆಗೆ ಸಾಕ್ಷಿಯಂತಿರುವ 'ಸತ್ತವರ ನೆರಳು' ನಾಟಕವನ್ನು ಸಣ್ಣ ಬದಲಾವಣೆಯನ್ನೂ ಮಾಡದೆ ಎಳೆಯರ ಮೂಲಕ ಪ್ರದರ್ಶಿಸಲಾಗುವುದು ಎಂದರು.

ಲಹರಿ ಸಂಸ್ಥೆಯ ಲಹರಿ ವೇಲು ಮಾತನಾಡಿ, ಲಹರಿ ಸಂಸ್ಥೆ ವತಿಯಿಂದ ಈ ನಾಟಕದ ಡಿವಿಡಿ ಹೊರತರಲಾಗುತ್ತಿದೆ. ಮುಂದಿನ ದಿನಗಳಲ್ಲಿ ಬೆನಕ ತಂಡದ ಎಲ್ಲಾ ನಾಟಕಗಳ ಡಿವಿಡಿ ಹೊರತರಲಾಗುವುದು ಎಂದರು. ಬೆನಕ ತಂಡದ ಅಧ್ಯಕ್ಷ ಎಂ.ಕೆ.ಸುಂದರ್‌ ರಾಜ್‌, ಕಾರ್ಯದರ್ಶಿ ಕೆ.ಮಂಜುನಾಥ್‌ ಇದ್ದರು.

B V Karanth's Sattavara Neralu Drama towards 500 shows
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com