ಮೋದಿ ಹವ: ಗೂಳಿ ಜಿಗಿತ

ಮುಂಬಯಿ: ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಕೂಟ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದು ಇಂದಿನ ಮತ ಎಣಿಕೆಯಲ್ಲಿ ಖಾತರಿಯಾಗುತ್ತಿರುವಂತೆಯೇ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್‌  ತನ್ನ ಆರಂಭಿಕ ವ್ಯವಹಾರದಲ್ಲಿ 25,014.85 ಅಂಕಗಳಿಗೆ ಏರುವ ಮೂಲಕ ಸಾರ್ವಕಾಲಿಕ ದಾಖಲೆಯನ್ನು ಮಾಡಿದೆ.

ಇದೇ ವೇಳೆ ರಾಷ್ಟ್ರೀಯ ಶೇರು ಮಾರುಕಟ್ಟೆ ನಿಫ್ಟಿ ಕೂಡ 7,459.40 ಅಂಕಗಳಿಗೆ ಏರಿ ಸಾರ್ವಕಾಲಿಕ ದಾಖಲೆಯನ್ನು ಸೃಷ್ಟಿಸಿದೆ.

ದೇಶಾದ್ಯಂತ ಮೋದಿ ಅಲೆ ಏಕಪ್ರಕಾರವಾಗಿ ಕಂಡು ಬಂದಿರುವ ಹಿನ್ನೆಲೆಯಲ್ಲಿ ಕೇಂದ್ರದಲ್ಲಿ  ಈ ಬಾರಿ ಮೋದಿ ಸರಕಾರ ಬರುವುದು ಖಚಿತವಾಗಿರುವುದೇ ಶೇರು ಮಾರುಕಟ್ಟೆಯ ಅಭೂತಪೂರ್ವ ದಿಗ್ವಿಜಯಕ್ಕೆ ಕಾರಣವಾಗಿದೆ.


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com