ದಿ|ಎಚ್‌.ಅನಂತ ಶೆಟ್ಟಿ ಸಂಸ್ಮರಣೆ

ಶಿರೂರು: ಒಬ್ಬ ನಿಷ್ಟಾವಂತ ಆದರ್ಶ ಅಧ್ಯಾಪಕರಾಗಿ, ಯಕ್ಷಗಾನ ವಿಮರ್ಶಕರಾಗಿ, ಕಲಾವಿದನಾಗಿ ಮನೆತನಕ್ಕೆ ಮತ್ತು ಊರಿಗೆ ಉಪಕಾರಿಯಾಗಿ ದೀರ್ಘ‌ಕಾಲ ಅಪಾರ ಶಿಷ್ಯರನ್ನು ಸಮಾಜಕ್ಕೆ ನೀಡಿದ ಹೆಬ್ಟಾಡಿ ಕೊಂಡಳಬೆಟ್ಟು ಅನಂತ ಶೆಟó ಸೇವೆ ಇತರರಿಗೆ ಮಾದರಿ ಎಂದು ಪ್ರಸಂಗಕರ್ತ ಕಂದಾವರ ರಘುರಾಮ ಶೆಟ್ಟಿ ಹೇಳಿದರು.

ಅವರು ಶಿರೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಎಚ್‌.ಅನಂತ ಶೆಟ್ಟಿ ಅವರ ದಶಮ ಪುಣ್ಯ ಸಂಸ್ಮರಣೆಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅನಂತ ಶೆಟ್ಟಿ ಅವರ ಶಿಷ್ಯ ನಿವೃತ್ತ ಅಧ್ಯಾಪಕ ಹಿಮಕರ ಶೆಟ್ಟಿ ಸಂಸ್ಮರಣಾ ಭಾಷಣ ಮಾಡಿದರು. ದಿವಂಗತರ ನೆನಪಿನಲ್ಲಿ ವಿದ್ಯಾರ್ಥಿ ಗಳಿಗೆ ಎಸ್‌.ವಿ.´‚ಾÂಮಿಲಿ ಟ್ರಸ್ಟ್‌ ವತಿಯಿಂದ ವಿದ್ಯಾರ್ಥಿಗಳಿಗೆ ವೇತನ ನೋಟ್‌ ಪುಸ್ತಕ ವಿತರಿಸಲಾಯಿತು. ಅನಂತ ಶೆಟ¤ರೊಂದಿಗೆ ದೀರ್ಘ‌ಕಾಲ ಸೇವೆ ಸಲ್ಲಿಸಿದ ವಯೋವೃದ್ದ ಅಧ್ಯಾಪಕ ಮಂದಾರ್ತಿ ಶ್ರೀನಿವಾಸ ಮಾಸ್ತರ್‌, ಶಿರೂರು ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ಸೂರ್ಯ ನಾರಾಯಣ ಶಾಸ್ತ್ರಿ, ಕಂದಾವರ ರಘುರಾಮ ಶೆಟ್ಟಿ, ಹೆಬ್ಟಾಡಿ ಎಚ್‌ ಲಕ್ಷ್ಮಣ ಶೆಟ್ಟಿ, ಹಿಮಕರ ಶೆಟ್ಟಿ ಆವರನ್ನು ಸಮ್ಮಾನಿಸಲಾಯಿತು.

ಅಶಕ್ತರಾಗಿದ್ದು ಅನಂತ ಶೆಟ್ಟಿಯವರ ಹಿರಿಯ ಒಡನಾಡಿಗಳಿಗೆ ಬಟ್ಟೆ ವಿತರಿಸಲಾಯ್ತು. ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಶೆಟ್ಟಿ.ಅನಂತ ಶೆಟ್ಟಿಯವರ ಪುತ್ರ ಡಾ| ಎಸ್‌.ವಿ.ರಘುರಾಮ ಶೆಟ್ಟಿ, ಜಿ.ನಾರಾಯಣ ಶೆಟ್ಟಿ. ಕೆಂಚನೂರು ನಾರಾಯಣ ಶೆಟ್ಟಿ, ಬಿ.ಕೆ.ಬಾಸ್ಕರ ಶೆಟ್ಟಿ ಉಪಸ್ಥಿತರಿದ್ದರು.

ಅನಂತ ಶೆಟ್ಟಿ ಅವರ ಪುತ್ರ ಎಸ್‌.ವಿ ಉದಯಕುಮಾರ ಶೆಟ್ಟಿ ಸ್ವಾಗತಿಸಿ ಪ್ರಸ್ತಾವಿಸಿದರು. ಡಾ| ಉದಯಕುಮಾರ ಶೆಟ್ಟಿಯವರು ವಂದಿಸಿದರು
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com