ಸತತ 8ನೇ ಬಾರಿ ಶುಭದಾ ಶಾಲೆಗೆ 100% ಫಲಿತಾಂಶ

ಕುಂದಾಪುರ: ತಾಲೂಕಿನ ನಾವುಂದದ ಕಡಲತಡಿಯಲ್ಲಿರುವ ಶುಭದಾ ಆಂಗ್ಲ ಮಾಧ್ಯಮ ಪ್ರೌಢಶಾಲೆ ಎಸ್.ಎಸ್.ಎಲ್.ಸಿ ಯಲ್ಲಿ 2007ರಿಂದ ಸತತ 8ನೇ ಬಾರಿ ಶೇ.100 ಫಲಿತಾಂಶ ಗಳಿಸಿ ಹೆಗ್ಗಳಿಕೆಗೆ ಪಾತ್ರವಾಗಿದೆ.
   ಗ್ರಾಮೀಣ ಪ್ರದೇಶದ ಮಕ್ಕಳು ನಗರ ಪ್ರದೇಶದ ಮಕ್ಕಳಂತೆ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎನ್ನುವ ಉದ್ದೇಶದಿಂದ ಸಮಾಜಸೇವಕ ಎನ್. ಕೆ ಬಿಲ್ಲವ ಅವರು ಪತ್ನಿ ಶುಭದಾ ಅವರ ಹೆಸರಿನಲ್ಲಿ 1995 ರಲ್ಲಿ ಆಂಗ್ಲಮಾಧ್ಯಮ ಶಾಲೆ ಸ್ಥಾಪಿಸಿದರು.

      ಪ್ರತಿಭಾವಂತ ಬಡ ಮಕ್ಕಳಿಗೆ ಶುಲ್ಕ ರಹಿತ ಶಿಕ್ಷಣ ನೀಡಲಾಗುತ್ತಿದೆ. ಎಸ್.ಎಸ್,ಎಲ್.ಸಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಒತ್ತು ನೀಡಿ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಪ್ರತ್ಯೇಕ ಶಿಕ್ಷಣ ನೀಡಲಾಗುತ್ತಿದೆ. ನಿವೃತ್ತಿಯಾದ ಹಾಗೂ ಅನುಭವಿ ಶಿಕ್ಷಕರನ್ನು ಅತಿಥಿಗಳಾಗಿ ಆಹ್ವಾನಿಸಿ ಮಕ್ಕಳಿಗೆ ಆಯಾ ವಿಷಯಗಳ ಕುರಿತು ವಿಶೇಷ ಉಪನ್ಯಾಸ ಹಾಗೂ ಸಂಪನ್ಮೂಲ ವ್ಯಕ್ತಿಗಳಿಂದ ಶೈಕ್ಷಣಿಕ ತರಭೇತಿ ಕೊಡಲಾಗುತ್ತದೆ. ಕ್ರೀಡಾ ಚಟುವಟಿಕೆ, ಕಂಪ್ಯೂಟರ್ ಮತ್ತು ಚಿತ್ರಕಲೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಮಕ್ಕಳ ವ್ಯಕ್ತಿತ್ವ ವಿಕಸನದ ನಿಟ್ಟಿನಲ್ಲಿ ತರಭೇತಿ ಕೊಡಲಾಗುತ್ತದೆ. 
  
2013 - 14ರ ಫಲಿತಾಂಶ ಅತ್ಯಧಿಕ ಅಂಕ- ಡಿಸ್ಟಿಂಕ್ಷನ್
 ಒಟ್ಟು ವಿದ್ಯಾರ್ಥಿಗಳು - 25     ಎ. ಸ್ಪಂದನ          -  597
 ಡಿಸ್ಟಿಂಕ್ಷನ್              -  04        ವೀಕ್ಷಿತ              -  556
 ಪ್ರಥಮ ದರ್ಜೆ         - 17            ಅಕ್ಷತಾ ವಿ.ಕೆ ನಾರಿ  -  555
 ದ್ವಿತೀಯ ದರ್ಜೆ      - 04   ಸುರಭಿ ಆರ್.ಶೆಟ್ಟಿ     -  535


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com