ದೇವಾಲಯಗಳು ಸಮಾಜದ ಆಸ್ತಿಯಾಗಬೇಕು: ಕಟ್ಕೆರೆ

ಬೈಂದೂರು: ದೇವಾಲಯಗಳು ಸ್ವಂತದ ಆಸ್ತಿಯಾಗದೇ ಸಮಾಜದ ಆಸ್ತಿಯಾಗಬೇಕಲ್ಲದೇ ಸಮಾಜಕ್ಕಾಗಿಯೇ ಕೆಲಸ ಮಾಡಬೇಕು ಎಂದು ಧಾರ್ಮಿಕ ಮುಖಂಡ ಪ್ರೇಮಾನಂದ ಶೆಟ್ಟಿ ಕಟ್ಕೆರೆ ನುಡಿದರು.

    ಅವರು ತಗ್ಗರ್ಸೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನವೀಕೃತ ಗರ್ಭಗುಡಿ ಸಮರ್ಪಣೆ, ಬ್ರಹ್ಮಕಲಶ ಪುಣ್ಯೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಆಚರಣೆಗಳ ಮೂಲಕವೇ ಸಂಘಟನೆ, ವಿಘಟನೆಗಳಾಗುತ್ತವೆ. ದೇವಸ್ಥಾನಗಳು ಒಡೆದು ಹೋದ ಮನಸ್ಸುಗಳನ್ನು ಜೋಡಿಸಬೇಕೇ ಹೊರತು ಯಜಮಾನಿಕೆಯನ್ನು ಪ್ರದರ್ಶಿಸಲು ವೇದಿಕೆಯಾಬಾರದು. ನಮ್ಮ ಹಿರಿಯರು ತ್ಯಾಗಮಾಡಿ ಬಿಟ್ಟು ಹೋದ ಪ್ರಭಾವಳಿಯನ್ನು ಮುಂದುವರಿಸಿಕೊಂಡು ಹೋಗವ ಕೆಲಸ ನಮ್ಮಿಂದಾಗಬೇಕು ಎಂದರು.
    ಉಡುಪಿ ಕಸಾಪ ಪೂರ್ವಾಧ್ಯಕ್ಷ ಚಂದ್ರಶೇಖರ ಹೊಳ್ಳ ಮಾತನಾಡಿ ಸರಕಾರ ಬದಲಾಗಬಹುದು, ಆಡಳಿತ ಬದಲಾಗಬಹುದು ಆದರೆ ಪರಂಪರೆ ಬದಲಾಗದು ಅದು ನಮ್ಮನ್ನೆಲ್ಲ ಒಗ್ಗೂಡಿಸುತ್ತದೆ ಎಂದು ನುಡಿದರು.
         ಕಾರ್ಯಕ್ರಮದಲ್ಲಿ ದೇವಸ್ಥಾನದ ಜೋರ್ಣೋದ್ಧಾರಕ್ಕೆ ದೇಣಿಗೆ ನೀಡಿದ, ಶ್ರಮಿಸಿದ ಹಲವರನ್ನು ಸನ್ಮಾನಿಸಲಾಯಿತು. 
ನಿವೃತ್ತ ಐ.ಎಫ್.ಎಸ್. ಜಗನ್ನಾಥ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
        ಕೊಲ್ಲೂರು ದೇವಳದ ಆಡಳಿತ ಧರ್ಮದರ್ಶಿ ಕೃಷ್ಣ ಪ್ರಸಾದ ಅಡ್ಯಂತಾ ಯ, ಜಿ.ಪಂ. ಸದಸ್ಯೆ ಸುಪ್ರೀತಾ ದೀಪಕಕುಮಾರ್ ಶೆಟ್ಟಿ, ತಾ.ಪಂ. ಸದಸ್ಯ ಕೆ. ರಾಮ, ತಗ್ಗರ್ಸೆ ಗ್ರಾ.ಪಂ. ಅಧ್ಯಕ್ಷ ಜನಾರ್ಧನ್ ಬಾಡ, ಬೈಂದೂರು ರೋಟರಿ ಅಧ್ಯಕ್ಷ ಗೋವಿಂದ ಎಂ, ಉದ್ಯಮಿ ರಮೇಶ್ ಮೊಗವೀರ ಅತಿಥಿಗಳಾಗಿ ಉಪಸ್ಥಿತರಿದ್ದರು.
    ಜಿ.ಪಂ. ಸದಸ್ಯ ಕೆ. ಬಾಬು ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ದೇವಸ್ಥಾನದ ಆಡಳಿತ ಮೊಕ್ತೇಸರ ತಗ್ಗರ್ಸೆ ನಾರಾಯಣ ಹೆಗ್ಡೆ ಪ್ರಸ್ತಾವಿಕ ಮಾತುಗಳನ್ನಾಡಿದರು, ಗಣಪತಿ ಹೋಬಳಿದಾರ್ ಮತ್ತು ಕರುಣಾಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ರತ್ನಾಕರ ಶೆಟ್ಟಿ ವಂದಿಸಿದರು.
      ಗೌರಿ ಹಾಡಿನ ಮೂಲಕ ಅತಿಥಿಗಳನ್ನು ಸ್ವಾಗತಿಸಿದರೇ, ಪದ್ಮಿನಿ ಎ. ಹೆಗ್ಡೆ ನೃತ್ಯದ ಮೂಲಕ ಸ್ವಾಗತಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸುರಭಿ (ರಿ.) ಬೈಂದೂರು ಕಲಾವಿದರಿಂದ ನೃತ್ಯ ವೈಭವ, ತಗ್ಗರ್ಸೆ ಸ.ಹಿ.ಪ್ರಾ. ಶಾಲಾ ಮಕ್ಕಳಿಂದ ನೃತ್ಯ ಸಿಂಚನ, ಖ್ಯಾತ ಆಕಾಶವಾಣಿ ಕಲಾವಿದ ಗಣೇಶ ಗಂಗೊಳ್ಳಿಯವರ ಸಂಗೀತ ವೈವಿಧ್ಯ, ಖ್ಯಾತ ಜಾದೂಗಾರ ಸತೀಶ್ ಹೆಮ್ಮಾಡಿಯ ಭ್ರಮಾಲೋಕ-ಜಾದೂಜಾತ್ರೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
Byndoor Thaggaese Shree Mahalingeshwara Temple 

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com