ಎಸ್‌ಎಸ್‌ಎಲ್‌ಸಿಯಲ್ಲಿ ಉಡುಪಿಗೆ ಶೇ. 85.36 ಫಲಿತಾಂಶ

ಉಡುಪಿ: ಎಸ್‌ಎಸ್‌ಎಲ್‌ಸಿಯಲ್ಲಿ ಶೇ. 85.36 ಫಲಿತಾಂಶ ಪಡೆದ ಉಡುಪಿ ಜಿಲ್ಲೆ 16ನೇ ಸ್ಥಾನಕ್ಕೆ ಕುಸಿದಿದೆ.  15,556 ವಿದ್ಯಾರ್ಥಿಗಳ ಪೈಕಿ (ಬಾಲಕರು 7579, ಬಾಲಕಿಯರು 8977) 13,279 ಮಂದಿ (ಬಾಲಕರು 6823, ಬಾಲಕಿಯರು 6456) ಉತ್ತೀರ್ಣರಾಗಿದ್ದಾರೆ. 1,501 ವಿಶಿಷ್ಠ ಶ್ರೇಣಿ, 6,048 ಪ್ರಥಮ ದರ್ಜೆ, 2,808 ದ್ವಿತೀಯ ದರ್ಜೆ ಹಾಗೂ 3,622 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ. 

ನಗರಕ್ಕಿಂತ ಗ್ರಾಮೀಣ ಉತ್ತಮ: 
ನಗರ ಪ್ರದೇಶದದಿಂದ ಪರೀಕ್ಷೆಗೆ ಹಾಜರಾದ 3,529 ವಿದ್ಯಾರ್ಥಿಗಳಲ್ಲಿ 3,042 ಮಂದಿ (ಶೇ. 86.2) ಹಾಗೂ ಗ್ರಾಮೀಣ ಪ್ರದೇಶದ 11,027 ವಿದ್ಯಾರ್ಥಿಗಳಲ್ಲಿ 10,237 (ಶೇ.92.8) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 

ಶೇ. 100 ಫಲಿತಾಂಶ ಪಡೆದ ಶಾಲೆಗಳು:
 ಸರಕಾರಿ: 5, ಅನುದಾನಿತ: 2 ಹಾಗೂ ಅನುದಾನ ರಹಿತ: 29 ಸಹಿತ ಒಟ್ಟು 36 ಶಾಲೆಗಳು ಶೇ. 100 ಫಲಿತಾಂಶ ದಾಖಲಿಸಿವೆ. 
ಕುಂದಾಪುರ ಮೊರಾರ್ಜಿ ದೇಸಾಯಿ ಪ್ರೌಢಶಾಲೆ, 
ಕುಂದಾಪುರ ವೆಂಕಟರಮಣ ಪ್ರೌಢಶಾಲೆ, 
ಕುಂದಾಪುರ ವಿ.ಕೆ. ಆಚಾರ‌್ಯ ಪ್ರೌಢಶಾಲೆ,
ಕೋಡಿ ಬ್ಯಾರೀಸ್ ಪ್ರೌಢಶಾಲೆ, 
ಗಂಗೊಳ್ಳಿ ತೌಹೀದ್ ಪ್ರೌಢಶಾಲೆ, 
ಶಂಕರನಾರಾಯಣ ಮದರ್ ಥೇರೇಸಾ ಪ್ರೌಢಶಾಲೆ, 
ಗಂಗೊಳ್ಳಿ ಸ್ಟೆಲ್ಲಾ ಮೇರಿಸ್, 
ಸಿದ್ಧಾಪುರ ಸರಸ್ವತಿ ಪ್ರೌಢಶಾಲೆ. 
ನಲ್ಲೂರು ಸರಕಾರಿ ಪ್ರೌಢಶಾಲೆ (20 ವಿದ್ಯಾರ್ಥಿಗಳು), 
ಕಾವಡಿ ಸರಕಾರಿ ಪ್ರೌಢಶಾಲೆ(27) , 
ಹೆಸ್ಕತ್ತೂರು ಸರಕಾರಿ ಪ್ರೌಢಶಾಲೆ (21),  
ಉಡುಪಿಯ ಪಣಿಯಾಡಿ ಅನಂತೇಶ್ವರ ಪ್ರೌಢಶಾಲೆ, 
ಪಡುಬಿದ್ರಿ ಲಯನ್ಸ್ ಶಾಲೆ, ಕಲ್ಯಾಣಪುರ ಮೌಂಟ್ ರೋಸರಿ ಪ್ರೌಢಶಾಲೆ, 
ಶಂಕರಪುರ ಸಂತ ಜೋನ್ಸ್ ಅನುದಾನಿತ ಪ್ರೌಢಶಾಲೆ, 

ಶೇ. 80ಕ್ಕಿಂತ ಹೆಚ್ಚು ಫಲಿತಾಂಶ: ಸರ್ಕಾರಿ: 67, ಅನುದಾನಿತ : 59, ಅನುದಾನ ರಹಿತ: 69 ಸಹಿತ ಒಟ್ಟು : 195. 
ಶೇ. 60ಕ್ಕಿಂತ ಹೆಚ್ಚು ಹಾಗೂ ಶೇ. 80ಕ್ಕಿಂತ ಕಡಿಮೆ: ಸರ್ಕಾರಿ: 38, ಅನುದಾನಿತ : 12, ಅನುದಾನ ರಹಿತ : 3 ಸಹಿತ ಒಟ್ಟು :53 

ಅತ್ಯಧಿಕ ಅಂಕ ಗಳಿಸಿದವರು: ಕುಂದಾಪುರ ವೆಂಕಟರಮಣ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಭಾರ್ಗವಿ(618), ಶಹರಿ ಶೆಟ್ಟಿ ಕಾಳಾವರ(616), ಕುಂಜಿ ಬೆಟ್ಟು ಟಿ. ಎ. ಪೈ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಹರ್ಷಿತ್ ಡಿ. (615).
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com