ವಸಂತ ಶಿಬಿರ ಸಮಾರೋಪ

ಉಪ್ಪ್ಪುಂದ: ಮಕ್ಕಳಲ್ಲಿರುವ ಉತ್ತಮ ಕುತೂಹಲವನ್ನು ಹಾಗೆಯೇ ಪೋಷಿಸಿ ಬೆಳೆಸಿ ಸ್ವಚಿಂತ ನೆಗೆ ಅವಕಾಶ ಮಾಡಿ ಕೊಡಬೇಕು. ಜಗತ್ತಿನಲ್ಲಿ ಎಲ್ಲಾ ಆಸ್ತಿಗಿಂತಲೂ ಬಹುದೊಟ್ಟ ಆಸ್ತಿ ಇಂದಿನ ಮಕ್ಕಳು.ಚಿಕ್ಕಂದಿನಿಂದ ಅವರಲ್ಲಿ ಧೆರ್ಯಬರುವಂತೆ ಎಲ್ಲಾ ವಿಚಾರಗಳನ್ನು ಆಲಿಸಿ ಅವರು ಚರ್ಚಿಸುವಲ್ಲಿ ಪ್ರೇರಣೆ ನೀಡಬೇಕು ಹರಿಹರಪುರದ ಕುಟುಂಬ ಪ್ರಬೋಧನಾ ರಾಜ್ಯ ಸಂಪನ್ಮೂಲ ವ್ಯಕ್ತಿ ರಾಮಪ್ರಸಾದ ಹೇಳಿದರು. 

ಉಪ್ಪ್ಪುಂದದ ಮೂಡುಗಣಪತಿ ಶಿಶು ಮಂದಿರ ಹಾಗೂ ಗ್ರಾಮವಿಕಾಸ ಸಮಿತಿ ಉಪ್ಪ್ಪುಂದ ಇದರ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡ 15 ದಿನಗಳ ಪ್ರೌಢಶಾಲೆ ವಿದ್ಯಾರ್ಥಿಗಳ ವಸಂತ ಶಿಬಿರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. 

ಶಿಶು ಮಂದಿರ ಉಪ್ಪ್ಪುಂದದ ಅಧ್ಯಕ್ಷ ಬಿ.ಎ. ಮಂಜು ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ವಿಕಾಸ ಸಮಿತಿ ಗೌರವ ಸಲಹೆಗಾರ ಕೇಶವ ಪ್ರಭು, ಮಹಾಬಲೇಶ್ವರ ಐತಾಳ್, ಸಂಪನ್ಮೂಲ ವ್ಯಕ್ತಿ ಮಹಾಬಲ ಕೆ.ಉಪಸ್ಥಿತರಿದ್ದರು. ಶಿಬಿರಾರ್ಥಿ ನಮತಾ ಸ್ವಾಗತಿಸಿದರು. ಲಕ್ಷ್ಮೀಪ್ರಸಾದ ವರದಿ ಮಂಡಿಸಿದರು. ರಂಜಿತ್, ಪ್ರಜ್ವಲ್, ಜಯಂತ್, ಆರ್ಯ ಅನಿಸಿಕೆ ಹಂಚಿಕೊಂಡರು. ಎಂ.ವಿ.ತೇಜಸ್ವಿನಿ ಮತ್ತು ಭಾರ್ಗವಿ ಕಾರ್ಯಕ್ರಮ ನಿರ್ವಹಿಸಿದರು. ಸೂರಜ್ ಹೊಳ್ಳ ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com