ಗುಜರಾತ್ ನ ಮುಂದಿನ ಮುಖ್ಯಮಂತ್ತಿ ಯಾರಾಗಬಹುದು?

ಗುಜರಾತ್‌: ಎನ್‌ಡಿಎ ನೇತೃತ್ವದ ಸರಕಾರವನ್ನು ಸ್ಥಾಪಿಸಲು ನರೇಂದ್ರ ಮೋದಿ ಅವರು ದಿಲ್ಲಿಗೆ ಹೋದಲ್ಲಿ ಗುಜರಾತ್‌ನ ಮುಂದಿನ ಮುಖ್ಯಮಂತ್ರಿ ಯಾರಾಗಬಹುದು ಎಂಬ ಪ್ರಶ್ನೆಗೆ ಈಗ ಗರಿಗಳು ಮೂಡುತ್ತಿವೆ. 
   ಮೋದಿ ಅವರ ಸ್ಥಾನಕ್ಕೆ ಈಗ ಬಲವಾಗಿ ಕೇಳಿ ಬರುತ್ತಿರುವ ಹೆಸರೆಂದರೆ ಅವರ ಸಚಿವ ಸಂಪುಟದ ಹಿರಿಯ ಸದಸ್ಯೆಯಾಗಿರುವ ಹಾಗೂ ದಕ್ಷ ಆಡಳಿತೆಯಲ್ಲಿ ಅಪಾರ ಅನುಭವ ಹೊಂದಿರುವ ಆನಂದಿ ಬೆನ್‌ ಪಟೇಲ್‌ ಅವರದ್ದು !
     ಆನಂದಿ ಬೆನ್‌ ಅವರು ಮೋದಿ ಸಚಿವ ಸಂಪುಟದಲ್ಲಿ ಶಿಕ್ಷಣ, ಕಂದಾಯ, ಮಹಿಳಾ ಮತ್ತು ಶಿಶು ಅಭಿವೃದ್ಧಿ ಖಾತೆಗಳನ್ನು ನಿಭಾಯಿಸಿ ತಮ್ಮ ದಕ್ಷತೆಯನ್ನು ಮೆರೆದಿದ್ದಾರೆ.
    ಮೇಲಾಗಿ ಬಿಜೆಪಿಗೆ ಗುಜರಾತ್‌ನ ಮೊತ್ತ ಮೊದಲ ಮಹಿಳಾ ಮುಖ್ಯಮಂತ್ರಿಯನ್ನು ಅಧಿಕಾರಕ್ಕೆ ತರುವ ಅವಕಾಶ ಈಗ ಪ್ರಾಪ್ತವಾಗಿರುವಂತಿದೆ !
   ಮೋದಿ ಅವರ ಉತ್ತರಾಧಿಕಾರಿಯಾಗಲು ಈಗ ಸ್ಪರ್ಧೆಯಲ್ಲಿರುವ ಇತರ ಹೆಸರುಗಳೆಂದರೆ ನಿತಿನ್‌ಭಾಯ್‌ ಪಟೇಲ್‌, ಸೌರಭ್‌ ಪಟೇಲ್‌, ಆರ್‌ ಸಿ ಫಾಲುª, ಸುರೇಂದ್ರ ಪಟೇಲ್‌, ಪುರುಷೋತ್ತಮ ರುಪಾಲಾ, ವಿಜುಭಾಯ್‌ ವಾಲಾ ಮತ್ತು ಬಿಖುಭಾಯ್‌ ದಲ್ಸಾನಿಯಾ.
   ಬಿಖುಭಾಯ್‌ ದಲ್ಸಾನಿಯಾ ಅವರು ಆರ್‌ಎಸ್‌ಎಸ್‌ಗೆ ನಿಕಟರಾಗಿದ್ದಾರೆ ಮತ್ತು ಮೋದಿ ಹಾಗೂ ಅಮಿತ್‌ ಶಾ ಅವರ ಅತ್ಯಂತ ನಿಕಟವರ್ತಿಯೂ ಹೌದು. 

Who will be the next CM of Gujarat.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com