ಮೇ 17: ತಲ್ಲೂರು ಕನಕಾ-ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ಉಡುಪಿ: ಯಕ್ಷಗಾನ ಕಲಾರಂಗ ಉಡುಪಿ ವತಿಯಿಂದ ಯಕ್ಷಗಾನ ವಿದ್ವಾಂಸರಿಗೆ ನೀಡುವ ತಲ್ಲೂರು ಕನಕಾ-ಅಣ್ಣಯ್ಯ ಶೆಟ್ಟಿ ಪ್ರಶಸ್ತಿಗೆ ಬಹುಮುಖ ಪ್ರತಿಭೆಯ ವಿದ್ವಾಂಸ, ಲೇಖಕ, ಸಂಶೋಧಕ, ಯಕ್ಷಗಾನ ಪ್ರಸಂಗಕರ್ತ ಪ್ರೊ.ಅಮೃತ ಸೋಮೇಶ್ವರ ಅವರನ್ನು ಆಯ್ಕೆ ಮಾಡಲಾಗಿದೆ. 

ಪ್ರಶಸ್ತಿ ಪ್ರದಾನ ಸಮಾರಂಭ ಮೇ 17ರಂದು ಸಂಜೆ 4.30ಕ್ಕೆ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಜರುಗಲಿದೆ. 

ಯಕ್ಷಗಾನ ಕಲಾರಂಗ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ಕಾರ್ಯದರ್ಶಿ ಮುರಳಿ ಕಡೆಕಾರ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರ ನೀಡಿದರು. 

ವಿಶ್ರಾಂತ ಕುಲಪತಿ ಡಾ.ಬಿ.ಎ. ವಿವೇಕ ರೈ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಕುಂಬ್ಳೆ ಸುಂದರರಾವ್ ಅಭಿನಂದನೆ ಭಾಷಣ ಮಾಡಲಿದ್ದಾರೆ. ಯಕ್ಷಗಾನ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ ಶುಭಾಶಂಸನೆಯ ಮಾತುಗಳನ್ನಾಡಲಿದ್ದಾರೆ. ಮಲ್ಪೆ ಪದವಿ ಪೂರ್ವ ಕಾಲೇಜಿನ ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಗೋಪಾಲ ಸಿ. ಬಂಗೇರ ಅತಿಥಿಗಳಾಗಿರುವರು. 

ಮಧ್ಯಾಹ್ನ 2.30ರಿಂದ ಯಕ್ಷಗಾನ ಕವಿ ಸಮಯ ಗೋಷ್ಠಿ ಪ್ರೊ.ಅಮತ ಸೋಮೇಶ್ವರ ಅವರ ಅಧ್ಯಕ್ಷತೆಯಲ್ಲಿ ಸಂಪನ್ನಗೊಳ್ಳಲಿದೆ. ಹೊಸ್ತೋಟ ಮಂಜುನಾಥ ಭಾಗವತ, ಕಂದಾವರ ರಘುರಾಮ ಶೆಟ್ಟಿ, ಮಧೂರು ವೆಂಕಟಕಷ್ಣ, ಡಾ. ಚಂದ್ರಶೇಖರ ದಾಮ್ಲೆ, ಮಾಧವ ಪೆರಾಜೆ, ಗಣೇಶ ಕೊಲೆಕಾಡಿ, ದಿನಕರ ಪಚ್ಚನಾಡಿ, ಪ್ರಸಾದ ಮೊಗೆಬೆಟ್ಟು ಗೋಷ್ಠಿಯಲ್ಲಿ ಯಕ್ಷಗಾನ ಪದ್ಯ ವಾಚಿಸಲಿದ್ದಾರೆ. ಸತೀಶ್ ಕೆದಿಲಾಯ, ಪುರುಷೋತ್ತಮ ಭಟ್ ನಿಡ್ವಜೆ, ಕೂಡ್ಲಿ ದೇವದಾಸ ರಾವ್, ನೆಕ್ಕರೆಮೂಲೆ ಗಣೇಶ್ ಭಟ್ ಹಿಮ್ಮೇಳದಲ್ಲಿ ಸಹಕರಿಸುತ್ತಾರೆ ಎಂದು ತಿಳಿಸಿದರು. 

ಪ್ರಶಸ್ತಿ ಪ್ರದಾನ ಸಮಾರಂಭದ ನಂತರ ಅಮತ ಸೋಮೇಶ್ವರ ವಿರಚಿತ ತ್ರಿಪುರ ಮಥನ ಯಕ್ಷಗಾನ ಬಯಲಾಟ ಪ್ರದರ್ಶನವಿದೆ. ಸಿರಿಬಾಗಿಲು ರಾಮಕಷ್ಣ ಮಯ್ಯ, ಅಡೂರು ಲಕ್ಷ್ಮೀನಾರಾಯಣ ರಾವ್, ನೆಕ್ಕೆರೆಮೂಲೆ ಗಣೇಶ ಭಟ್ ಹಿಮ್ಮೇಳದಲ್ಲೂ, ಕುಂಬಳೆ ಸುಂದರ ರಾವ್, ಉಬರಡ್ಕ ಉಮೇಶ್ ಶೆಟ್ಟಿ, ತಾರಾನಾಥ ವರ್ಕಾಡಿ, ಹರಿನಾರಾಯಣ ಎಡನೀರು, ಶಶಿಕಾಂತ್ ಶೆಟ್ಟಿ ಕಾರ್ಕಳ, ಮಹೇಶ್ ಮಣಿಯಾಣಿ, ಈಶ್ವರಪ್ರಸಾದ್ ಧರ್ಮಸ್ಥಳ, ಬಾಲಕಷ್ಣಮಿಜಾರು, ಯಶೋಧರ ಪಂಜ ಮುಮ್ಮೇಳದ ಕಲಾವಿದರಾಗಿ ಭಾಗವಹಿಸುತ್ತಾರೆ ಎಂದರು. 

ಪತ್ರಿಕಾಗೋಷ್ಠಿಯಲ್ಲಿ ಯಕ್ಷಗಾನ ಕಲಾರಂಗ ಪದಾಧಿಕಾರಿಗಳಾದ ಗಂಗಾಧರ ರಾವ್, ನಾರಾಯಣ ಎಂ.ಹೆಗಡೆ, ಶೃಂಗೇಶ್ವರ ಎಚ್.ಎನ್. ಉಪಸ್ಥಿತರಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com