ಬೈಂದೂರಿನ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುವೆ: ಬಿ.ಎಸ್‌.ಯಡ್ನೂರಪ್ಪ.

ಬೈಂದೂರು: ಲೋಕಸಭಾ ಚುನಾವಣೆಯಲ್ಲಿ ಸ್ವ ಕ್ಷೇತ್ರ ಶಿಕಾರಪುರಕ್ಕಿಂತ ಅಧಿಕ ಅಂತರದ ಮತಗಳ ಮುನ್ನಡೆ ನೀಡಿದ ಹೆಗ್ಗಳಿಕೆ ಬೈಂದೂರು ಕ್ಷೇತ್ರದ್ದಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರೇ ಮಾಲಿಕರಾಗಿದ್ದಾರೆ. ಬೈಂದೂರು ಕ್ಷೇತ್ರದಲ್ಲಿನ ಬಹುನಿರೀಕ್ಷಿತ ಬಹುಗ್ರಾಮ ಕುಡಿಯುವ ನೀರಾವರಿ ಯೋಜನೆಗೆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ವೇಳೆ 30 ಕೋಟಿ ಬಿಡುಗಡೆ ಮಾಡಿದ್ದೇನೆ. ಆದರೆ ಪ್ರಸ್ತುತ ಪ್ರಕ್ರಿಯೆಗಳು ನಿಧಾನ ಗತಿಯಲ್ಲಿರುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಬೈಂದೂರಿನ ಒತ್ತಿನೆಣೆಯಲ್ಲಿ ವಿಮಾನ ಇಳಿದಾಣ(ಎರ್‌ಸ್ಕಿಪ್ಟ್) ನಿರ್ಮಾಣ ಮಾಡುವ ಬಗ್ಗೆ ಕೇಂದ್ರ ವಿಮಾನಯಾನ ಸಚಿವರೊಂದಿಗೆ ಚರ್ಚಿಸುವುದಾಗಿ ಶಿವಮೊಗ್ಗ ಲೋಕಸಭಾ ಸಂಸದ ಬಿ.ಎಸ್‌.ಯಡ್ನೂರಪ್ಪ ಹೇಳಿದರು.

ಅವರು ಬೈಂದೂರು ಜೆ.ಎನ್‌.ಆರ್‌ ಕಲಾ ಮಂದಿರದಲ್ಲಿ ಕಾರ್ಯಕರ್ತರ ಅಭಿನಂದನಾ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಈ ಬಾರಿಯ ಲೋಕಸಭಾ ಚುನಾವಣೆಯ ಫಲಿತಾಂಶ ಜಗತ್ತೆ ಅಚ್ಚರಿ ಪಡುವಂತೆ ಮಾಡಿದೆ. ಉತ್ತರ ಪ್ರದೇಶದ ಚುನಾವಣಾ ಫಲಿತಾಂಶವನ್ನು ಕಾರ್ಯಕರ್ತರು ಪರಿಶೀಲಿಸಬೇಕಾಗಿದೆ. ಪಕ್ಷ ವರ್ಧನೆಗೆ ಮತ್ತು ಸಂಘಟಟನೆಗೆ ಇದು ಪರ್ವಕಾಲ. ಕಾರ್ಯಕರ್ತರು ಪಕ್ಷ ಸಂಘಟನೆಗೆ ಪ್ರಯತ್ನಿಸಬೇಕು. ಕಸ್ತೂರಿ ರಂಗನ ವರದಿ ಬಗ್ಗೆ ಆತಂಕ ಬೇಡ ಎಂದರು. ಅಭಿವೃದ್ದಿ ವಿಚಾರದಲ್ಲಿ ರಾಜಕಾರಣ ಸಲ್ಲದು. ಕ್ಷೇತ್ರದ ಅಭಿವೃದ್ದಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಬೈಂದೂರು ಕ್ಷೇತ್ರದ ಅಭಿವ್ರದ್ದಿಗೆ ವಿಶೇಷ ಒತ್ತು ನೀಡುವುದಾಗಿ ಹೇಳಿದರು.
      ಈ ಸಂಧರ್ಭದಲ್ಲಿ ಮಾಜಿ ಸಂಸದ ಬಿ.ವೈ.ರಾಘವೇಂದ್ರ,ಮಾಜಿ ಶಾಸಕ ಕೆ.ಲಕ್ಷ್ಮಿ ನಾರಾಯಣ, ಕ್ಷೇತ್ರ ಬಿಜೆಪಿ ಅಧ್ಯಕ್ಷ ಸುಕುಮಾರ ಶೆಟ್ಟಿ, ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ರಾಜ್ಯ ಮಹಿಳಾ ಮೋರ್ಚಾದ ಶ್ಯಾಮಲ ಕುಂದರ್‌, ನಾರಾಯಣ ಹೆಗ್ಡ ತಗ್ಗರ್ಸೆ, ಜಿ.ಪಂ ಸದಸ್ಯ ಬಾಬು ಶೆಟ್ಟಿ, ಗೌರಿ ದೇವಾಡಿಗ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುರಾಜ್‌ ಶೆಟ್ಟಿ, ಗೀತಾಂಜಲಿ ಸುವರ್ಣ, ಇಂದಿರಾ ಶೆಟ್ಟಿ, ಪ್ರಭಾಕರ ಮೊವಾಡಿ, ರಾಮಸನ್‌ ಪಿರೇರಾ, ಸದಾಶಿವ.ಡಿ, ರಾಜೇಶ ಕಾವೇರಿ, ಗೋಪಾಲ ಗಾಣಿಗ, ಆನಂದ ಖಾರ್ವಿ, ವೀಣಾ ಶೆಟ್ಟಿ, ಶ್ರೀಮತಿ ಮೊಗೇರ ಮುಂತಾದವರು ಹಾಜರಿದ್ದರು.

ಸದಾನಂದ ಸ್ವಾಗತಿಸಿದರು. ಸುಬ್ರಹ್ಮಣ್ಯ ಭಟ್‌ ಕಾರ್ಯಕ್ರಮ ನಿರೂಪಿಸಿದರು. ಕ್ಷೇತ್ರ ಯುವ ಮೋರ್ಚಾ ಅಧ್ಯಕ್ಷ ಪುಷ್ಪರಾಜ್‌ ಶೆಟ್ಟಿ ವಂದಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com