ಕೊಲ್ಲೂರು ಯತಿ ಸಮಾಧಿ ಸ್ಥಳಾಂತರ ಆಗ್ರಹಕ್ಕೆ ಖಂಡನೆ

ಬಂಟ್ವಾಳ: ಕೊಲ್ಲೂರು ಶ್ರೀ ನಿತ್ಯಾನಂದ ಸ್ವಾಮಿ ಆಶ್ರಮದಲ್ಲಿ ನಡೆದ ವಿಮಲಾನಂದ ಸ್ವಾಮೀಜಿ ಸಮಾಧಿಯನ್ನು ಸ್ಥಳಾಂತರಿಸುವಂತೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಆಡಳಿತ ಮಂಡಳಿ ನಡೆಸುತ್ತಿರುವ ಆಗ್ರಹವನ್ನು ಬಂಟ್ವಾಳ ಭಗವಾನ್ಕಟ್ಟೆ ಶ್ರೀ ನಿತ್ಯಾನಂದ ಗೋವಿಂದ ಸ್ವಾಮೀಜಿ ಭಜನಾ ಮಂದಿರ ಟ್ರಸ್ಟ್ ತೀವ್ರವಾಗಿ ಖಂಡಿಸಿದೆ.
ಕೊಲ್ಲೂರು ದೇವಳದ ಆವರಣದಿಂದ ಹೊರಗೆ ಮಂದಿರದ ಸಂಪ್ರದಾಯದಂತೆ ದೂರದಲ್ಲಿ ನಡೆದಿರುವ ಸಮಾಧಿ ಪ್ರಕ್ರಿಯೆಯನ್ನು ಸ್ಥಳ ಸಂಪ್ರದಾಯ ಉಲ್ಲಂಘನೆ ನೆಪದಲ್ಲಿ ಟೀಕಿಸುವ ಮೂಲಕ ಹಿಂದೂ ಸಮಾಜದಲ್ಲಿ ಬ್ರಾಹ್ಮಣ ಮತ್ತು ಶೂದ್ರರು ಎಂದು ಪ್ರತ್ಯೇಕಿಸುವ ಹುನ್ನಾರ ಅಡಗಿದೆ.
ಇಂಥ ಟೀಕೆ ಮುಂದುವರಿದಲ್ಲಿ ಇಲ್ಲಿನ ಭಜನಾ ಮಂದಿರ ವತಿಯಿಂದಲೂ ಪ್ರತಿಭಟನೆ ನಡೆಸಬೇಕಾದೀತು ಎಂದು ಮಂದಿರದ ಟ್ರಸ್ಟಿ ಬಿ. ಯೋಗೀಶ ಸಪಲ್ಯ ಎಚ್ಚರಿಸಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com