ಕುಂದಾಪುರ: ಉಡುಪಿ ಜಿಲ್ಲೆಯಲ್ಲಿ ಅಪರೂಪವೆಂಬಂತೆ ನಡೆದು ಹೋಗುತ್ತಲಿದ್ದ ಬಾಲ್ಯವಿವಾಹವೊಂದಕ್ಕೆಕಡಿವಾಣ ಬಿದ್ದಿದೆ. ಜೂ.5ರಂದು ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಬೇಕಾಗಿದ್ದು, ತಾಲೂಕಿನ ಬೇಳೂರು ಬಡಾಬೆಟ್ಟುವಿನ ಶ್ರುತಿ ಎಂಬಾಕೆಯ ಮದುವೆಗೆ ಉಡುಪಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಡೆಯೊಡ್ಡಿದೆ.
ಘಟನೆ ವಿವರ: ಬೇಳೂರು ಬಡಾಬೆಟ್ಟು ನಿವಾಸಿ ಬಾಬಿ ಮೊಗವೀರ ಅವರ ಪುತ್ರಿ ಶ್ರುತಿ ಮತ್ತು ಹೆಬ್ರಿಯ ಪ್ರಕಾಶ್ ಎಂಬವರ ವಿವಾಹ ಜೂ.5ರಂದು ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ನಿಗದಿಯಾಗಿತ್ತು. ವಿವಾಹದ ಆಮಂತ್ರಣ ಪತ್ರಿಕೆಯನ್ನು ಬಂಧುಗಳು, ಹಿತೈಷಿಗಳಿಗೆ ವರವಧುವಿನ ಕಡೆಯಿಂದ ಹಂಚಲಾಗಿತ್ತು. ವಧುವಿನ ಮನೆಯಲ್ಲಿ ಮದುವೆಯ ತಯಾರಿಯೂ ಸಂಭ್ರಮದಿಂದ ನಡೆಸಲಾಗುತ್ತಿತ್ತು. ಬುಧವಾರ ವಧುವಿಗೆ 18 ವರ್ಷ ತುಂಬಿಲ್ಲ. ಬಾಲ್ಯವಿವಾಹಕ್ಕೆ ಸಿದ್ಧತೆ ನಡೆಯುತ್ತಿದೆ ಎಂಬ ಬಗ್ಗೆ ಉಡುಪಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ದೂರು ಹೋಗಿದೆ. ಎಚ್ಚೆತ್ತ ಇಲಾಖೆಯ ಮಕ್ಕಳ ರಕ್ಷಣಾಧಿಕಾರಿ ಕಿರಣ್ ಬಾಬು ಕೋಟ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬಳಿಕ ಅವರು ಇಲಾಖಾ ಅಧಿಕಾರಿಗಳ ತಂಡದೊಂದಿಗೆ, ಬೇಳೂರಿನ ಮಕ್ಕಳ ಸಂರಕ್ಷಣಾ ಕೇಂದ್ರ ಸ್ಫೂರ್ತಿಧಾಮದ ಮುಖ್ಯಸ್ಥ ಕೇಶವ ಕೋಟೇಶ್ವರ, ಸಂಸ್ಥೆಯ ಸಂಯೋಜಕಿ ಜ್ಯೋತಿ ಮತ್ತು ಕೋಟ ಪೊಲೀಸರ ಸಹಕಾರ ಪಡೆದು ಬುಧವಾರ ಸಂಜೆ ವಧುವಿನ ಮನೆಗೆ ದಾಳಿ ನಡೆಸಿದ್ದಾರೆ. ವಧುವಿನ ಜನನ ಧಡೀಕರಣ ಪತ್ರ ಪರಿಶೀಲನೆ ನಡೆಸಿದಾಗ ಆಕೆಗೆ 17 ವರ್ಷ, 3 ತಿಂಗಳು ಆಗಿರುವುದು ಬೆಳಕಿಗೆ ಬಂದಿದೆ. 1997, ಫೆ.17ರಂದು ಶ್ರುತಿ ಜನಿಸಿದ ಬಗ್ಗೆ ಶಾಲಾ ಧಡೀಕರಣ ಪತ್ರಗಳಲ್ಲಿಯೂ ಉಲ್ಲೇಖವಾಗಿದೆ. ಕೆದೂರು ಸರಕಾರಿ ಪ್ರೌಢಶಾಲೆಯಲ್ಲಿ ಈಕೆ ಎಸ್ಎಸ್ಎಲ್ಸಿ ಓದಿರುವುದು ಖಚಿತವಾಗಿದೆ. ವಧುವಿಗೆ 18 ವರ್ಷ ತುಂಬಿದ ಹಿನ್ನೆಲೆಯಲ್ಲಿ ಮದುವೆ ನೆರವೇರಿಸದಂತೆ ಹೆತ್ತವರಿಗೆ ಮನವರಿಕೆ ಮಾಡಿದ ಅಧಿಕಾರಿಗಳು ಈ ಬಗ್ಗೆ ಮುಚ್ಚಳಿಕೆ ಬರೆಸಿಕೊಂಡರು.
0 comments:
Post a Comment