ಜುಲೈ 10ಕ್ಕೆ ಕನ್ನಡದ ಹೊಸ ಸುದ್ದಿವಾಹಿನಿ ಬಿಟಿವಿ ಲೋಕಾರ್ಪಣೆ

ಬೆಂಗಳೂರು: ಕನ್ನಡ ಮಾಧ್ಯಮ ಲೋಕಕ್ಕೆ ಜುಲೈ 10 ರಂದು ಹೊಸ ಸುದ್ದಿ ವಾಹಿನಿಯೊಂದು ಸೇರ್ಪಡೆಗೊಳ್ಳುತ್ತಿದೆ.   ಹೌದು. ಪತ್ರಕರ್ತರೇ ಪ್ರತಿಷ್ಠೆಯಿಂದ ಕಟ್ಟಿದ ಚಾನೆಲ್ ಎಂದು ಹೇಳಲಾಗಿರುವ  'ಬಿಟಿವಿ ಕರ್ನಾಟಕ'  ಜುಲೈನಲ್ಲಿ ಲೋಕಾರ್ಪಣೆಗೊಳ್ಳುತ್ತಿದೆ ಎಂದು ವಾಹಿನಿಯು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪ್ರಕಟಿಸಿದೆ. 
     ಬೆಂಗಳೂರಿನ ಕ್ರೆಸೆಂಟ್ ರಸ್ತೆಯ ಕ್ರೆಸೆಂಟ್ ಟವರನಲ್ಲಿರುವ ಬಿಟಿವಿ ಕಛೇರಿಗೆ ಅದಾಗಲೇ  ಅನೇಕ ಗಣ್ಯರು ಆಗಮಿಸಿ ಶುಭ ಹಾರೈಸುತ್ತಿದ್ದು, ಬಿಟಿವಿ ಸುದ್ದಿ ಮಾಧ್ಯಮ ವೀಕ್ಷಕರಲ್ಲಿ ಕುತೂಹಲ ಹುಟ್ಟುಹಾಕಿದೆ.
     ಚಿತ್ರ ನಟರಾದ ರವಿಚಂದ್ರನ್, ಪುನೀತ್ ರಾಜ್ ಕುಮಾರ್, ಆದಿತ್ಯ ರಾವ್, ನಟಿಯರಾದ ತಾರಾ, ಶುಭ ಪೂಂಜಾ, ಭಾವನಾ, ನಿರ್ದೇಶಕ ಟಿ.ಎನ್ ಸೀತಾರಾಮ್, ನಿರ್ಮಾಪಕ ಕೆ. ಮಂಜು, ನಿವೃತ್ತ ಲೋಕಾಯುಕ್ತ ಸಂತೋಷ ಹೆಗ್ಡೆ, ಎಸ್ಪಿಎಸ್ ಸ್ಥಾಪಕ ಎಸ್.ಆರ್ ಹಿರೇಮಠ್, ಸ್ವಾತಂತ್ರ್ಯ ಹೋರಾಟಗಾರ ಎಚ್, ಎಸ್. ದೊರೆಸ್ವಾಮಿ, ನಿವೃತ್ತ ಡಿಜಿಪಿ ಶಂಕರ ಬಿದರಿ, ಕರವೇ ಅಧ್ಯಕ್ಷ ಟಿ.ಎ ನಾರಾಯಣ ಗೌಡ,  ಹಿರಿಯ ಸಾಹಿತಿ ಡಾ. ಯುಆರ್ ಅನಂತಮೂರ್ತಿ, ಗ್ರಾಮೀಣಾಭಿವೃದ್ಧಿ ಸಚಿವ ಎಚ್ ಕೆ ಪಾಟೀಲ್, ಬೆಂಗಳೂರು ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್, ಸಿಬಿಐ ಎಸ್ಪಿ ಎ ಸುಬ್ರಮಣ್ಯೇಶ್ವರರಾವ್, ಬಿಎಂಟಿಸಿ ಎಂಡಿ ಅಜುಮ್ ಪರ್ವೇಜ್,  ಮಾಜಿ ಸಚಿವ ವಿ.ಸೋಮಣ್ಣ, ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ,  ಮಾಜಿ ಸಚಿವ ಆರ್. ಅಶೋಕ್, ಮೇಯರ್ ಕಟ್ಟೆ ಸತ್ಯನಾರಾಯಣ  ಸೇರಿದಂತೆ ಅನೇಕ ಗಣ್ಯರು  ಆಗಮಿಸಿ ಶುಭಕೋರಿದ್ದಾರೆ. 
> ಇದು ಪತ್ರಕರ್ತರೇ ವೃತ್ತಿನಿಷ್ಠೆಯಿಂದ ಕಟ್ಟಿದ ನ್ಯೂಸ್ ಚಾನಲ್. ಮಾನವೀಯತೆಯ ನೆಲೆಗಟ್ಟಿನಲ್ಲಿ, ಸತ್ಯ ಹಾಗೂ ನಿಷ್ಠುರತೆಗೆ ಬದ್ಧರಾಗಿ ಕಾರ್ಯ ನಿರ್ವಹಿಸುವ ಸಂಕಲ್ಪ ನಮ್ಮದು. ನಮ್ಮ ಪ್ರತಿ ಸುದ್ದಿಯೂ ವಸ್ತುನಿಷ್ಠ ಹಾಗೂ ಪ್ರತಿ ವಿಶ್ಲೇಷಣೆಯೂ ಸತ್ವಭರಿತವಾಗಿರುತ್ತದೆ. ಯಾವುದೇ ರಾಗ ದ್ವೇಷಗಳಿಲ್ಲದೆ ನಿಷ್ಪಕ್ಷಪಾತವಾಗಿ ನಿಮಗೆ ಸುದ್ದಿ ನೀಡುತ್ತೇವೆ. ನಿಮ್ಮೆಲ್ಲಾ ನಿರೀಕ್ಷೆಗಳಿಗೆ ಸ್ಪಂದಿಸುವ ಭರವಸೆಯೊಂದಿಗೆ ಜುಲೈ 10ನೇ ತಾರೀಖು ನಿಮ್ಮ ಮನೆಗೇ ಬರುತ್ತಿದ್ದೇವೆ. ಹೊಸ ಸಾಹಸಕ್ಕೆ ಸದಾ ಬೆನ್ನೆಲುಬಾಗಿ ನಿಂತು ಬೆಂಬಲಿಸಿದವರು ನೀವು. ಈಗ ನಮ್ಮನ್ನೂ ಆದರಿಸಿ, ಹರಸಿ, ಹಾರೈಸಿ... - ಬಿಟಿವಿ ಕರ್ನಾಟಕ, ಸಾಮಾಜಿಕ ಜಾಲತಾಣದ ಪ್ರಕಟಣೆ

* ಸಾಮಾಜಿಕ ಜಾಲತಾಣ ಫೆಸ್ ಬುಕ್ ನಲ್ಲಿ Btv KarnatakaTitle: Btv News Karnataka News Channel Set to launch on 10th july
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com