ಬೆಲೆ ಏರಿಕೆ: ಬೈಂದೂರು ಕಾಂಗ್ರೆಸ್‌ ಬೃಹತ್‌ ಪ್ರತಿಭಟನೆ

ಬೈಂದೂರು: ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಮೋದಿ ನೇತ್ರತ್ವದ ಬಿಜೆಪಿ ಸರಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿರುವುದನ್ನು ವಿರೋಧಿಸಿ ಬೈಂದೂರು ಬ್ಲಾಕ್‌ ಕಾಂಗ್ರೇಸ್‌ ತಹಶೀಲ್ದಾರರ ಕಛೇರಿ ಎದುರು ಬೃಹತ್‌ ಪ್ರತಿಭಟನೆ ನಡೆಸಿತು.
    ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಸಕ್ಕರೆ ಬೆಲೆ ಏರಿಕೆ ಕಂಡಿದೆ ಚಿನ್ನ, ಗ್ಯಾಸ್‌, ಸೀಮೆಎಣ್ಣೆ ತುಟ್ಟಿಯಾಗಿದೆ. ರೈಲ್ವೆ ದರ ಹೆಚ್ಚಿಸಿ ಕಾಂಗ್ರೇಸ್‌ ಮೇಲೆ ಗೂಬೆ ಕೂರಿಸುತ್ತಿರುವ ಕೇಂದ್ರ ರೈಲ್ವೆ ಸಚಿವ ಸದಾನಂದ ಗೌಡ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.    
      ರಾಜ್ಯ ಸಭಾ ಸದಸ್ಯ ಆಸ್ಕರ್‌ ಫೆರ್ನಾಂಡಿಸ್‌ ಮಾತನಾಡಿ ಬದಲಾವಣೆ ಮಾಡುತ್ತೇವೆ ಎಂದು ಜನರನ್ನು ಮರಳು ಮಾಡಿ ಅಧಿಕಾರಕ್ಕೆ ಬಂದ ಬಿಜೆಪಿಯ ನೈಜತೆ ಹೊರಬರುತ್ತಿದೆ. ಪ್ರತಿ ಮನೆಗೆ 20 ಸಿಲಿಂಡರ್‌ ನೀಡುತ್ತೇವೆ ಎಂದು ಆಶ್ವಾಸನೆ ನೀಡಿದ ಬಿಜೆಪಿ ರೈಲ್ವೆ, ಗ್ಯಾಸ್‌, ಸೀಮೆಎಣ್ಣೆ ಬೆಲೆ ಎರಿಕೆ ಮಾಡಿದೆ. ಒಳ್ಳೆಯ ದಿನಗಳು ಬರುತ್ತದೆ ಎನ್ನುವ ಬಿಜೆಪಿ ಜನರಿಗೆ ನೀಡಿದ ಒಳ್ಳೆಯ ದಿನಗಳು ಇದೇನಾ ಎಂದರು. ಮಾಜಿ ಸಂಸದ ಜಯಪ್ರಕಾಶ ಹೆಗ್ಡೆ ಮಾತನಾಡಿ ಕೇಂದ್ರ ಸರ್ಕಾರ ಬೆಲೆ ಏರಿಕೆ ನೀತಿಯನ್ನು ಕೈಬಿಡಬೇಕು ಎಂದರು.ಈ ಸಂಧರ್ಭದಲ್ಲಿ ವಿಧಾನ ಪರಿಷತ್‌ ಸದಸ್ಯ ಪ್ರತಾಪಚಂದ್ರ ಶೆಟ್ಟಿ, ಮಂಜುನಾಥ ಭಂಡಾರಿ, ತಾ.ಪಂ ಸದಸ್ಯ ಎಸ್‌.ರಾಜು ಪೂಜಾರಿ, ರಮೇಶ ಗಾಣಿಗ ಕೊಲ್ಲೂರು, ರಾಮ ಬೈಂದೂರು, ವಾಸುದೇವ ಯಡಿಯಾಳ್‌, ರಘುರಾಮ ಶೆಟ್ಟಿ, ಎಮ್‌.ಎ.ಗಫೂರ್‌, ಸುಬ್ರಹ್ಮಣ್ಯ ಪೂಜಾರಿ, ಮದನ್‌ ಕುಮಾರ್‌ ಮುಂತಾದವರು ಹಾಜರಿದ್ದರು.



ಬೈಂದೂರು ವಿಶೇಷ ತಹಶೀಲ್ದಾರ ರಾಮಕೃಷ್ಣ ಅಯ್ಯರ್‌ರವರಿಗೆ ಮನವಿ ನೀಡಲಾಯಿತು.




ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com