ಗುಂಡೂರು ಅಣೆಕಟ್ಟು ಪ್ರದೇಶಕ್ಕೆ ಸಚಿವ ಪಾಟೀಲ್ ಭೇಟಿ


ಬೈಂದೂರು : ವ್ಯಾಪ್ತಿಯ ಆಲೂರು ಗ್ರಾಮದ ಗುಂಡೂರು ಅಣೆಕಟ್ಟು ಪ್ರದೇಶಕ್ಕೆ ರಾಜ್ಯ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಶುಕ್ರವಾರ ಬೆಳಗ್ಗೆ ಭೇಟಿ ನೀಡಿದರು. ಅಣೆಕಟ್ಟು ನೀರಿನ ಸಂಗ್ರಹಣೆ, ಹರಿಯುವಿಕೆ ಬಗ್ಗೆ ಮಾಹಿತಿ ಪಡೆದ ಅವರು ಅಣೆಕಟ್ಟುವಿನಿಂದ ಹೊರಹೊಮ್ಮುವ ನೀರು ಚೆಕ್‌ಡ್ಯಾಂಗೆ ಸೇರಿ ಅಲ್ಲಿಂದ ಕಾಲುವೆ ಮೂಲಕ ಕೃಷಿ ಮೂಲಕ ಕಾಮಗಾರಿ ವೀಕ್ಷಿಸಿ ತೊಡಕುಗಳ ನಿವಾರಣೆಗೆ ಆದೇಶಿಸಿದರು. ಕಾಲುವೆ ಪ್ರದೇಶದಲ್ಲಿ ತುಂಬಿರುವ ಹೂಳು ಮೇಲೆತ್ತುವುದು ಮತ್ತು ಕ್ರೈಸ್ಟ್‌ಗೇಟ್ ಅಳವಡಿಕೆಗೆ ಕ್ರಮ ತೆಗೆದುಕೊಳ್ಳುವಂತೆ ಸಲಹೆ ನೀಡಿದರು. 

ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಗುಂಡೂರು ಅಣೆಕಟ್ಟು ಕಾಮಗಾರಿಯಿಂದ ಉಂಟಾಗಿರುವ ಲೋಪದೋಷಗಳನ್ನು ಸಚಿವರಿಗೆ ವಿವರಿಸಿದರು. ಸಚಿವ ವಿನಯಕುಮಾರ ಸೊರಕೆ, ತಾಲೂಕು ಶಾಸಕ ಪ್ರಮೋದ್ ಮಧ್ವರಾಜ್, ಪಂಚಾಯಿತಿ ಸದಸ್ಯ ಹರ್ಕೂರು ಮಂಜಯ್ಯ ಶೆಟ್ಟಿ ಅವರೊಂದಿಗಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com