ಸರಕಾರಿ ಸೇವೆಯಲ್ಲಿ ವರ್ಗಾವಣೆ ಸಹಜ: ಕೆ. ಬಾಬು ಶೆಟ್ಟಿ

ಬೈಂದೂರು: ಸರಕಾರಿ ಸೇವೆಗಳಲ್ಲಿ ವರ್ಗಾವಣೆ ಅನಿವಾರ್ಯ. ಶಿಸ್ತಿನ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಪೊಲೀಸರಿಗೆ ಮುಂಬಡ್ತಿಯಾದಾಗ ಹಾಗೂ ಹಲವು ವರ್ಷ ಒಂದೇ ಠಾಣೆಯಲ್ಲಿ ಸೇವೆಯಲ್ಲಿದ್ದಾಗ ಇಂತಹ ಪ್ರಕ್ರಿಯೆ ಸಹಜ. ಇಲ್ಲಿನ ಠಾಣೆಯಲ್ಲಿ ಮಾಡಿದ ಒಳ್ಳೆಯ ಹಾಗೂ ಪ್ರಾಮಾಣಿಕ ಸೇವೆಯನ್ನು ಮಂದುವರಿಸಿ ಸಾರ್ವಜನಿಕರೊಡನೆ ಉತ್ತಮ ಬಾಂದವ್ಯ ಬೆಳೆಸಿಕೊಳ್ಳಿ ಎಂದು ಜಿಪಂ ಸದಸ್ಯ ಕೆ. ಬಾಬು ಶೆಟ್ಟಿ ಹೇಳಿದರು.
       ಇಲ್ಲಿನ ರೋಟರಿ ಭವನದಲ್ಲಿ, ಬೈಂದೂರು ಠಾಣೆಯಿಂದ ವರ್ಗಾವಣೆಯಾಗಿ ಮತ್ತು ಮುಂಬಡ್ತಿ ಪಡೆದ ಆರಕ್ಷಕರಿಗೆ ಏರ್ಪಡಿಸಿದ ವಿಶೇಷ ಬೀಳ್ಕೋಡುಗೆ ಸಮಾರಂಭದಲ್ಲಿ ಮಾತನಾಡಿದರು. 
      ವೃತ್ತ ನೀರೀಕ್ಷಕ ಸುದರ್ಶನ್ ಎಸ್ ಅಧ್ಯಕ್ಷತೆ ವಹಿಸಿದ್ದರು.
       ವರ್ಗಾವಣೆಗೊಂಡ ಎ‌ಎಸ್‌ಐ ರಮೇಶ ಕೆ.ಎನ್., ಮಹಿಳಾ ಎ‌ಎಸ್‌ಐ ಶ್ರೀಮತಿ ಪುಷ್ಪಾ, ಮುಖ್ಯ ಪೇದೆಗಳಾದ ನಾರಾಯಣ ಕೆ.ಎಸ್, ಅಶೋಕ್, ಸುಬ್ಬಣ್ಣ ಶೆಟ್ಟಿ, ಆನಂದ, ತಾರಾನಾಥ, ಸುಧಾಕರ, ಪೇದೆಗಳಾದ ನಾಗೇಂದ್ರ, ರಾಘವೇಂದ್ರ, ಗುರುದಾಸ್, ಮೋಹನ ಪೂಜಾರಿ, ನಾಗರಾಜ ಮತ್ತು ಮಹಿಳಾ ಪೇದೆ ರೇಣುಕಾ ಹಾಗೂ ಮುಖ್ಯ ಪೇದೆಯಿಂದ ಮುಂಬಡ್ತಿ ಪಡೆದ ನಾರಾಯಣ ಗಾಣಿಗ, ಪೇದೆಯಿಂದ ಮುಖ್ಯ ಪೇದೆಯಾಗಿ ಮುಂಬಡ್ತಿ ಪಡೆದ ಮಂಜುನಾಥ ಅವರನ್ನು ಗೌರವಿಸಿ ಸನ್ಮಾನಿಸಿದರು.
   ಠಾಣಾಧಿಕಾರಿ ನಾಸಿರ್ ಹುಸೈನ್, ಸುನಿಲ್ ಕುಮಾರ ಎಂ.ಎಸ್., ತಾಪಂ ಮಾಜಿ ಸದಸ್ಯ ಭಾಸ್ಕರ ದೇವಾಡಿಗ, ಗ್ರಾಪಂ ಮಾಜಿ ಸದಸ್ಯ ಮಧುಕರ ಶೇಟ್, ಪರ್ತಕರ್ತ ನರಸಿಂಹ ನಾಯಕ್ ಉಪಸ್ಥಿತರಿದ್ದರು. ಪಿ.ಸುಧಾಕರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com