ಕುಂದಾಪುರ: ಶ್ರೀ ಸಿದ್ಧಿ ವಿನಾಯಕ ಚೆಸ್ ಅಕಾಡಮಿ ಕುಂದಾಪುರ, ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಶನ್ ಉಡುಪಿ, ಕುಂದಾಪುರ ತಾಲೂಕು ಯುವ ಜನ ಒಕ್ಕೂಟ ಇವರ ಸಂಯುಕ್ತ ಆಶ್ರಯದಲ್ಲಿ ಮಿಂಚಿನ ಚದುರಂಗ ಸ್ಪರ್ಧೆ ಜೂನ್ 29 ರವಿವಾರದಂದು ಬೆಳಿಗ್ಗೆ 9ಗಂಟೆಗೆ ಕುಂದಾಪುರ ವಡೇರಹೋಬಳಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.
ಸ್ಪರ್ಧೆಯು ಯು7, ಯು9, ಯು11, ಯು13, ಯು15 ಮತ್ತು ಮುಕ್ತ ವಿಭಾಗದಲ್ಲಿ ನಡೆಯಲಿದೆ. ಭಾಗವಹಿಸುವವರು ದಿನಾಂಕ 27ರ ಒಳಗೆ ಹೆಸರನ್ನು ನೋಂದಾಹಿಸಲೇಬೇಕು.ನಂತರ ಬಂದ ಹೆಸರನ್ನು ದಂಡ ಸಂಹಿತೆಯೊಂದಿಗೆ ಸ್ವೀಕರಿಸಲಾಗುವುದು. ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಬಾಬು ಜೆ. ಪುಜಾರಿ ಉಪ್ಪುಂದ (9448547958), ಉಮಾನಾಥ ಕಾಪು (934111024) ರತ್ನಾಕರಶೆಟ್ಟಿ (9844615269) ಇವರನ್ನು ಸಂಪರ್ಕಿಸುವಂತೆ ಕೋರಲಾಗಿದೆ.
0 comments:
Post a Comment