ಜು.1ರಿಂದ ಡೆಮು ರೈಲು ಮಡಗಾಂವ್‌ಗೆ ವಿಸ್ತರಣೆ

ಉಡುಪಿ: ಮಂಗಳೂರಿನಿಂದ ಭಟ್ಕಳ ವರೆಗೆ ಫೆ. 24ರಿಂದ ಓಡಾಡುತ್ತಿರುವ ಡೆಮು ರೈಲು ಜು. 1ರಿಂದ ಮಡಗಾಂವ್‌ಗೆ ವಿಸ್ತರಣೆಗೊಂಡಿದೆ.

ಹಿಂದಿನ ರೈಲ್ವೇ ಬಜೆಟ್‌ನಲ್ಲಿ ಘೋಷಣೆಯಾದ ಈ ಡೆಮು ರೈಲು ಭಟ್ಕಳದಿಂದ ಬೆಳಗ್ಗೆ 6 ಗಂಟೆಗೆ ಹೊರಟು ಮಂಗಳೂರಿಗೆ 10.15ಕ್ಕೆ ಮತ್ತು ಮಂಗಳೂರಿನಿಂದ 11 ಗಂಟೆಗೆ ಹೊರಟು ಭಟ್ಕಳಕ್ಕೆ 2 ಗಂಟೆಗೆ ತಲುಪುತ್ತಿತ್ತು. ಆದರೆ ಭಟ್ಕಳದಲ್ಲಿ ರೈಲನ್ನು ಬೆಳಗ್ಗೆ ವರೆಗೆ ನಿಲ್ಲಿಸಲು ಪ್ರತ್ಯೇಕ ಹಳಿ ಇಲ್ಲದ ಕಾರಣ ರೈಲನ್ನು ಮುರ್ಡೇಶ್ವರಕ್ಕೆ ತೆಗೆದುಕೊಂಡು ಹೋಗುತ್ತಿದ್ದರು. ಭಟ್ಕಳಕ್ಕೂ ಮುರ್ಡೇಶ್ವರಕ್ಕೂ 21 ಕಿ.ಮೀ. ಅಂತರವಿದೆ. ಮುರ್ಡೇಶ್ವರದಲ್ಲಿ ಪಾರ್ಕಿಂಗ್‌ ಟ್ರ್ಯಾಕ್‌ ಇರುವ ಕಾರಣ ಅಲ್ಲಿ ನಿಲ್ಲಿಸಿ ಬೆಳಗ್ಗೆ ಅಲ್ಲಿಂದ ಭಟ್ಕಳಕ್ಕೆ ತರುತ್ತಿದ್ದರು. ಹೀಗೆ ಒಟ್ಟು 42 ಕಿ.ಮೀ. ಪ್ರಯಾಣಿಕರಿಲ್ಲದೆ ರೈಲು ಪ್ರಯಾಣಿಸುತ್ತಿತ್ತು. ಇದೇ ರೈಲನ್ನು ಮಂಗಳೂರಿನಿಂದ ಮುರ್ಡೇಶ್ವರ ವರೆಗೆ ಅಧಿಕೃತವಾಗಿ ಓಡಿಸಿದರೆ ಮುರ್ಡೇಶ್ವರದ ವರೆಗೆ ಹೋಗುವ ಪ್ರಯಾಣಿಕರಾದರೂ ಸಿಗುತ್ತಾರೆ. ಇದನ್ನು ಕಾರವಾರದವರೆಗೆ ವಿಸ್ತರಿಸಬೇಕು ಎನ್ನುವುದು ಉಡುಪಿ ರೈಲ್ವೇ ಯಾತ್ರೀ ಸಂಘದ ಅಧ್ಯಕ್ಷ ಆರ್‌.ಎಲ್‌. ಡಯಾಸ್‌ ಆಶಯವಾಗಿತ್ತು. ಡೆಮು ರೈಲು ಇದೀಗ ಕಾರವಾರಕ್ಕೂ ಮುಂದೆ ಮಡಂಗಾವ್‌ ವರೆಗೆ ವಿಸ್ತರಣೆಗೊಂಡಿದೆ.

ವೇಳಾಪಟ್ಟಿ

70105/70106 ಸಂಖ್ಯೆಯ ಈ ರೈಲಿಗೆ ಜು. 1ರಿಂದ ಮಳೆಗಾಲದ ಸಮಯವನ್ನು ಅನ್ವಯಿಸಿ ವೇಳಾಪಟ್ಟಿಯನ್ನು ಕೊಂಕಣ ರೈಲ್ವೇ ಬಿಡುಗಡೆಗೊಳಿಸಿದೆ. ಇದರಂತೆ ಬೆಳಗ್ಗೆ 5ಕ್ಕೆ ಮಡಗಾಂವ್‌ ರೈಲು ನಿಲ್ದಾಣದಿಂದ ಡೆಮು ರೈಲು ಹೊರಡಲಿದೆ. ಅನಂತರದ ವೇಳಾಪಟ್ಟಿ ಇಂತಿದೆ: ಬಾಲಿ 5.17, ಕಾಣಕೋಣ 5.46, ಲೋಲಿಯಂ 5.57, ಆಸ್ನೋಟಿ 6.07, ಕಾರವಾರ 6.21, ಹಾರ್ವಾಡ 6.35, ಅಂಕೋಲಾ 6.53, ಗೋಕರ್ಣ ರೋಡ್‌ 7.04, ಕುಮಟಾ 7.21, ಹೊನ್ನಾವರ 7.36, ಮಂಕಿ 7.51, ಮುಡೇìಶ್ವರ 8, ಚಿತ್ರಾಪುರ 8.11, ಭಟ್ಕಳ 8.24, ಶಿರೂರು 8.35, ಬೈಂದೂರು 8.45, ಬಿಜೂರು 8.55, ಸೇನಾಪುರ 9.10, ಕುಂದಾಪುರ 9.25, ಬಾರಕೂರು 9.45, ಉಡುಪಿ 10.10, ಇನ್ನಂಜೆ 10.20, ಪಡುಬಿದ್ರಿ 10.30, ನಂದಿಕೂರು 10.40, ಮೂಲ್ಕಿ 10.50, ಸುರತ್ಕಲ್‌ 11, ತೋಕೂರು 11.21, ಮಂಗಳೂರು ಜಂಕ್ಷನ್‌ 11.44, ಮಂಗಳೂರು ಸೆಂಟ್ರಲ್‌ 12.05.

ಮಂಗಳೂರು ಸೆಂಟ್ರಲ್‌ನಿಂದ ರೈಲು ಅಪರಾಹ್ನ 2.55ಕ್ಕೆ ಹೊರಡಲಿದೆ. ಅನಂತರದ ವೇಳಾಪಟ್ಟಿ ಇಂತಿದೆ: ಮಂಗಳೂರು ಜಂಕ್ಷನ್‌ 3.11, ತೋಕೂರು 3.40, ಸುರತ್ಕಲ್‌ 3.50, ಮೂಲ್ಕಿ 4, ನಂದಿಕೂರು 4.10, ಪಡುಬಿದ್ರಿ 4.20, ಇನ್ನಂಜೆ 4.29, ಉಡುಪಿ 4.40, ಬಾರಕೂರು 4.55, ಕುಂದಾಪುರ 5.11, ಸೇನಾಪುರ 5.25, ಬಿಜೂರು 5.37, ಬೈಂದೂರು 5.44, ಶಿರೂರು 6.01, ಭಟ್ಕಳ 6.14, ಚಿತ್ರಾಪುರ 6.26, ಮುಡೇìಶ್ವರ 6.37, ಮಂಕಿ 6.47, ಹೊನ್ನಾವರ 7.07, ಕುಮಟ 7.24, ಗೋಕರ್ಣ 7.44, ಅಂಕೋಲಾ 8, ಹಾರ್ವಾಡ 8.16, ಕಾರವಾರ 8.23, ಅಸ್ನೋಟಿ 8.54, ಲೋಲಿಯಂ 9.10, ಕಾಣಕೋಣ 9.30, ಬಾಲಿ 9.50, ಮಡಗಾಂವ್‌ 10.30.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com