'ದೃಷ್ಟಿ' ಕಾಲೇಜು ಸಂಚಿಕೆ ಬಿಡುಗಡೆ

ಗಂಗೊಳ್ಳಿ: ಕಾಲೇಜು ವಾರ್ಷಿಕ ಸಂಚಿಕೆ ಕಾಲೇಜಿನ ಸಾಧನೆಯ ಕನ್ನಡಿಯಿದ್ದಂತೆ. ಯಾವುದೇ ಸಂಸ್ಠೆಯ ನಿರಂತರ ಚಟುವಟಿಕೆಗಳು ಅಕ್ಷರ ದಾಖಲೆಯಾಗಿ ಉಳಿಯುವಲ್ಲಿ ಸಂಚಿಕೆಗಳು ಸಹಕಾರಿ. ವಿದ್ಯಾರ್ಥಿ ಜೀವನದ ಸುಮಧುರ ಅನುಭವಗಳನ್ನು ಮೆಲುಕು ಹಾಕುವಲ್ಲಿ ನೆನಪಿನ ಸಂಗಾತಿಯಾಗಿ ವಿದ್ಯಾರ್ಥಿ ಸಂಚಿಕೆ ಉಪಯುಕ್ತ. ಆರಂಭದಲ್ಲಿ ಶಾಲಾ ಕಾಲೇಜುಗಳ ಸಂಚಿಕೆಯ ಮೂಲಕವೇ ಬರಹಗಾರರಾಗಿ ರೂಪಿತರಾದ ಅನೇಕ ಸಾಹಿತಿಗಳು, ಇಂದು ಕನ್ನಡ ಸಾರಸ್ವತ ಲೋಕದಲ್ಲಿ ವಿಹರಿಸುತ್ತಿರುವುದು ಗಮನಾರ್ಹ ಎಂದು ಕುಂದಾಪುರ ಭಂಡಾರಕಾರ್ಸ್ ಕಾಲೇಜು ವಿಶ್ರಾಂತ ಸಂಸ್ಕೃತ ಪ್ರಾಧ್ಯಾಪಕ ಎಚ್. ವಿ. ನರಸಿಂಹ ಮೂರ್ತಿ ಅಭಿಪ್ರಾಯಪಟ್ಟರು.
   ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ  ವಾರ್ಷಿಕೆ ಸಂಚಿಕೆ ದೃಷ್ಟಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
     ಕಾಲೇಜು ಪ್ರಾಂಶುಪಾಲ ಆರ್. ಎನ್. ರೇವಣಕರ್ ಅಧ್ಯಕ್ಷತೆ ವಹಿಸಿದ್ದರು. ದೃಷ್ಟಿ ಸಂಪಾದಕ ಎಚ್. ಸುಜಯೀಂದ್ರ ಹಂದೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಪಾದಕ ಮಂಡಳಿಯ ಶಾಲೆಟ್, ನಾರಾಯಣ ಇ ನಾಯ್ಕ್, ನರೇಂದ್ರ ಎಸ್ ಗಂಗೊಳ್ಳಿ ಉಪಸ್ಥಿತರಿದ್ದರು.
    ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ಶಾಂತಲಾ ಶ್ಯಾನುಭಾಗ್ ಸ್ವಾಗತಿಸಿ, ಗಣಿತ ಉಪನ್ಯಾಸಕ ಪ್ರವೀಣ ಕಾಮತ್ ವಂದಿಸಿದರು. ಇಂಗ್ಲೀಷ್ ಉಪನ್ಯಾಸಕಿ ಶಾಲೆಟ್ ಲೋಬೊ ಕಾರ್ಯಕ್ರಮ ನಿರ್ವಹಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com