ಖ್ಯಾತ ಸಂಗೀತ ನಿರ್ದೇಶಕ ಇಳೆಯರಾಜ ಕೊಲ್ಲೂರು ಭೇಟಿ

ಕೊಲ್ಲೂರು : ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಇಳೆಯರಾಜ ಅವರು ಜೂ. 9ರಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಆಗಮಿಸಿ ಶ್ರೀ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

ದಾಖಲೆಯ 1,000ಕ್ಕೂ ಹೆಚ್ಚು ಸಿನೆಮಾಗಳಿಗೆ ಸಂಗೀತ ನಿರ್ದೇಶನ ಮಾಡಿರುವ ಅವರು ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿಗಳ ಸರಮಾಲೆಯನ್ನೇ ಧರಿಸಿದ್ದಾರೆ. ಕೊಲ್ಲೂರು ಮೂಕಾಂಬಿಕೆಯ ಪರಮಭಕ್ತನಾಗಿರುವ ಇಳೆಯರಾಜ ಶ್ರೀ ದೇವಿಗೆ ಲಕ್ಷಾಂತರ ರೂ. ಬೆಲೆಬಾಳುವ ಚಿನ್ನಾಭರಣಗಳನ್ನು ಕಾಣೆಕೆ ರೂಪದಲ್ಲಿ ಈ ಹಿಂದೆ ಅರ್ಪಿಸಿದ್ದಾರೆ. ವರ್ಷಕ್ಕೆ ಎರಡು ಬಾರಿ ಕೊಲ್ಲೂರು ಕ್ಷೇತ್ರ ಸಂದರ್ಶನ ಮಾಡುವ ಅವರು ತಾಯಿ ಮೂಕಾಂಬಿಕೆಯ ಆಶೀರ್ವಾದದಿಂದಲೇ ನಾನು ಈ ಮಟ್ಟಕ್ಕೆ ಬೆಳೆದಿದ್ದೇನೆ ಎನ್ನುತ್ತಾರೆ.

ಸಂಗೀತವನ್ನು ಲೋಕಭಾಷೆ ಎಂದು ನಾವು ಒಪ್ಪುವುದಾದರೆ ಅದಕ್ಕೆ ಯಾವುದೇ ಭಾಷೆಯ ಸೀಮಾರೇಖೆ ಸಲ್ಲ ಎಂದು ಪ್ರತಿಪಾದಿಸುವ ಇಳೆಯರಾಜ ಅವರು ಕನ್ನಡ, ತಮಿಳು, ತೆಲುಗು, ಮಲಯಾಳ ಹಾಗೂ ಹಿಂದಿ ಚಲನಚಿತ್ರಗಳಿಗೆ ಸಂಗೀತ ನೀಡುವ ಮೂಲಕ ಖ್ಯಾತರಾಗಿದ್ದಾರೆ.

ಪುತ್ರ ಯುವಾನ್‌ ಶಂಕರ್‌ರಾಜ್‌ ಖ್ಯಾತ ಸಂಗೀತ ನಿರ್ದೇಶಕರಾಗಿದ್ದು ತಂದೆಯ ಹಾದಿಯಲ್ಲೇ ಬೆಳೆಯುತ್ತಿರುವುದು ಗಮನೀಯ.

ತೆರೆ ಕಾಣುವ ನೂತನ ಕನ್ನಡ ಚಿತ್ರವಾದ ಮೈತ್ರಿಯಲ್ಲಿ ಇಳೆಯರಾಜ ಸಂಗೀತ ನಿರ್ದೇಶಿಸುತ್ತಿದ್ದು, ಪುನೀತ್‌ ರಾಜ್‌ಕುಮಾರ್‌ ಅವರೊಡನೆ ಮಲಯಾಳ ಚಿತ್ರರಂಗದ ಮೋಹನ್‌ಲಾಲ್‌ ಪ್ರಥಮ ಬಾರಿಗೆ ಕನ್ನಡ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸಂಗೀತ ಸಾಮ್ರಾಟರಾದ ಕೆ.ಜೆ. ಯೇಸುದಾಸ್‌ ಹಾಗೂ ಎಸ್‌.ಪಿ. ಬಾಲಸುಬ್ರಹ್ಮಣ್ಯ ಅವರು ಇಳೆಯರಾಜ ಅವರ ಸಂಗೀತ ನಿರ್ದೇಶನದಲ್ಲಿ ಅದೆಷ್ಟೋ ಹಿಟ್‌ ಸಾಂಗ್‌ ಹಾಡಿರುತ್ತಾರೆ.

Famous-music-director-visited-Kolluru
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com