ಮೀನುಗಾರಿಕಾ ಋತು ಅಂತ್ಯ

ಗಂಗೊಳ್ಳಿ: ಉಡುಪಿ ಜಿಲ್ಲೆಯ ಪ್ರಮುಖ ಮೀನುಗಾರಿಕಾ ವಲಯ ಗಂಗೊಳ್ಳಿಯಲ್ಲಿ ಅವಧಿಗೆ ಮೊದಲೇ ಮೀನುಗಾರಿಕಾ ಋತು ಅಂತ್ಯಗೊಂಡಿದೆ. ಜೂ.10ರಿಂದ ಆಗಸ್ಟ್ 16ರವರೆಗೆ ಮೀನುಗಾರಿಕೆ ರಜೆಗೆ ತೆರಳುವ ಮೀನುಗಾರರು ಈ ಬಾರಿ ಅದಕ್ಕೆ ಮೊದಲೇ ಕಸುಬಿಗೆ ರಜೆ ಸಾರಿದ್ದಾರೆ. ಪರ್ಸಿನ್, ಟ್ರಾಲ್, ಗಿಲ್‌ನೆಟ್ ದೋಣಿಗಳು ದಡ ಸೇರಿವೆ. ಮೇ 31ಕ್ಕೆ ಪರ್ಸಿನ್ ಬೋಟ್‌ಗಳು ಕೆಲಸ ನಿಲ್ಲಿಸಿದ್ದರೆ, ಟ್ರಾಲ್, ಗಿಲ್‌ನೆಟ್ ದೋಣಿಗಳು ಹಾಗೂ ಹೀಗೂ ಕಸುಬಿಗೆ ತೆರಳಿದ್ದರೂ ಗಂಗೊಳ್ಳಿ ಅಳಿವೆಯಲ್ಲಿನ ಪ್ರತಿಕೂಲ ಸ್ಥಿತಿಯಿಂದಾಗಿ ಜೂ.5ರಿಂದ ಕಡಲಿಗಿಳಿದಿಲ್ಲ. ಪ್ರಸ್ತುತ ಎಲ್ಲ ವಿಧದ ಮೀನುಗಾರಿಕೆ ಸ್ಥಗಿತಗೊಂಡಿದೆ. 

ಗಂಗೊಳ್ಳಿ ಕಿರುಬಂದರಿನಲ್ಲಿ ಪರ್ಸಿನ್, ಟ್ರಾಲ್, ಗಿಲ್‌ನೆಟ್ ಸೇರಿದಂತೆ 350ಕ್ಕೂ ಮಿಕ್ಕಿ ದೋಣಿಗಳು ಕಾರ್ಯಾಚರಿಸುತ್ತಿವೆ. ಕಡಲು ಪ್ರವೇಶಿಸುವ ದೋಣಿಗಳಿಗೆ ಗಂಗೊಳ್ಳಿ ಅಳಿವೆ ದುಃಸ್ವಪ್ನವಾಗಿ ಕಾಡಿದೆ. ಅಳಿವೆಯಲ್ಲಿ ಹೂಳು ತುಂಬಿರುವುದರಿಂದ ದೋಣಿ ದಾಟುವಿಕೆ ದುಸ್ತರವಾಗಿದೆ. ಪ್ರತಿಕೂಲ ಪರಿಸ್ಥಿತಿಯಿಂದಾಗಿ ಈ ಬಾರಿ ನಿಗದಿಯ ಋತು ಅಂತ್ಯಕ್ಕೆ ಮೊದಲೆ ಮೀನುಗಾರಿಕೆ ನಿಲ್ಲಿಸಿದ್ದೇವೆ ಎಂದು ಮೀನುಗಾರರು ತಿಳಿಸಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com