ಗೋ ಸಂರಕ್ಷಣೆಗೆ ಎಲ್ಲರೂ ಮುಂದಾಗಿ: ಸ್ವಾಮೀಜಿ

ಕುಂದಾಪುರ: ಗೋ ಸಂರಕ್ಷಣೆಗೆ ಎಲ್ಲಾ ವರ್ಗದ ಜನರು ಮುಂದಾಗಬೇಕು. ಗೋಶಾಲೆಗಳಲ್ಲಿ ಗೋವುಗಳ ಸಂರಕ್ಷಣೆಗೆ ಸಮಾಜದ ಪ್ರತಿಯೊಬ್ಬರೂ ತಮ್ಮಿಂದಾಗುವ ಸಹಾಯ ಮಾಡಬೇಕಿದೆ. ಈ ದಿಸೆಯಲ್ಲಿ ಗಂಗೊಳ್ಳಿ ಹಾಗೂ ಸುತ್ತಮುತ್ತಲಿನ ಸ್ವಾಭಿಮಾನಿ ಹಿಂದುಗಳ ಮನೆಯಲ್ಲಿ ಗೋ ಸಂರಕ್ಷಣಾ ಹುಂಡಿಗಳನ್ನು ನೀಡಿ ದಿನ ಒಂದಕ್ಕೆ ಒಂದು ರೂಪಾಯಿಯಂತೆ ಹುಂಡಿಗಳ ಮೂಲಕ ಸಂಗ್ರಹಿಸಲಾಗಿರುವ ನಿಧಿಯನ್ನು ಗೋಶಾಲೆಗೆ ಹಸ್ತಾಂತರಿಸಿ ಗೋ ಸಂರಕ್ಷಣೆಗೆ ಮುಂದಾಗಿರುವುದು ಶ್ಲಾಘನೀಯ ಎಂದು ಉಡುಪಿಯ ಪೇಜಾವರ ಅಧೋಕ್ಷಜ ಮಠದ ಕಿರಿಯ ಯತಿಗಳಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
     ಅವರು ನೀಲಾವರ ಗೋಶಾಲೆಯಲ್ಲಿ ಜರಗಿದ ಸರಳ ಸಮಾರಂಭದಲ್ಲಿ ಹಿಂದು ಜಾಗರಣ ವೇದಿಕೆ ಗಂಗೊಳ್ಳಿ ಘಟಕದ ವತಿಯಿಂದ ಸಂಗ್ರಹಿಸಲಾದ ಗೋ ಸಂರಕ್ಷಣಾ ನಿಧಿಯನ್ನು ಸ್ವೀಕರಿಸಿ ಆಶೀರ್ವಚನ ನೀಡಿ ಮಾತನಾಡಿದರು.
    ಇದೇ ಸಂದರ್ಭದಲ್ಲಿ 10 ಗೋವುಗಳನ್ನು ನೀಲಾವರ ಗೋಶಾಲೆಗೆ ನೀಡಲಾಯಿತು ಮತ್ತು ಗೋಶಾಲೆಯಲ್ಲಿ ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ಗೋಪೂಜೆ ನೆರವೇರಿಸಲಾಯಿತು.
    ಹಿಂಜಾವೇ ಬೈಂದೂರು ತಾಲೂಕು ಸಂಚಾಲಕ ವಾಸುದೇವ ದೇವಾಡಿಗ, ತಾಪಂ ಮಾಜಿ ಸದಸ್ಯ ಸುರೇಂದ್ರ ಖಾರ್ವಿ, ಉಮಾನಾಥ ದೇವಾಡಿಗ, ಹಿಂಜಾವೇ ಗಂಗೊಳ್ಳಿ ಘಟಕದ ಸಂಚಾಲಕ ರತ್ನಾಕರ ಗಾಣಿಗ, ಉಪಾಧ್ಯಕ್ಷ ರಾಘವೇಂದ್ರ ಗಾಣಿಗ, ಸಹಸಂಚಾಲಕರಾದ ಶಂಕರ ದೇವಾಡಿಗ, ನವೀನ್‌ ದೊಡ್ಡಹಿತ್ಲು, ಮೋಹನ ಖಾರ್ವಿ ದಾಕುಹಿತ್ಲು, ವಿಶ್ವನಾಥ ಪೂಜಾರಿ ಲೆ„ಟ್‌ಹೌಸ್‌, ಲಕ್ಷ್ಮಣ ಖಾರ್ವಿ ಖಾರ್ವಿಕೇರಿ, ನಿತ್ಯಾನಂದ ಖಾರ್ವಿ ಮ್ಯಾಂಗನೀಸ್‌ ರೋಡ್‌, ಮಹೇಶ್‌ ಎಸ್‌ಆರ್‌ಜಿ. ಗಂಗಾಧರ ಎಸ್‌ಆರ್‌ಜಿ ಮೊದಲಾದವರು ಉಪಸ್ಥಿತರಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com